ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾದ ಬಳಿಕ ಅಮೆರಿಕ ಸತತ ಯುದ್ಧಗಳಲ್ಲೇ ಮುಳುಗಿದೆ. ಅದರಲ್ಲೂ ಇರಾನ್ ಮೇಲಿನ ದಾಳಿಯ ನಂತರ ಟ್ರಂಪ್ ವಿರುದ್ಧ ಅಮೆರಿಕದಲ್ಲೇ ವಿರೋಧದ ಧ್ವನಿ ಕೇಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಇದೇ ವರ್ಷ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ.

2026ರ ಮಧ್ಯಂತರ ಚುನಾವಣೆಗೆ ಮುನ್ನ ಟ್ರಂಪ್ ಆಡಳಿತವು ಪ್ರಮುಖ ಅಧಿಕಾರಿಗಳನ್ನು ಬದಲಾವಣೆ ಮಾಡಿದೆ. ಶಾಸಕಾಂಗ, ರಾಜಕೀಯ ಮತ್ತು ಸಾರ್ವಜನಿಕ ವ್ಯವಹಾರಗಳ ಉಪ ಮುಖ್ಯಸ್ಥರಾದ ಜೇಮ್ಸ್ ಬ್ಲೇರ್ ಅವರು ರಾಜಕೀಯ ಕಾರ್ಯಾಚರಣೆಯ ನೇತೃತ್ವ ವಹಿಸಲು ತಾತ್ಕಾಲಿಕವಾಗಿ ರಜೆ ಪಡೆಯಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ.

ಮಧ್ಯಂತರ ಚುನಾವಣೆಯ ಐತಿಹಾಸಿಕ ಪ್ರವೃತ್ತಿಗಳನ್ನು ಮೀರಿ, ಕಾಂಗ್ರೆಸ್ನಲ್ಲಿ ರಿಪಬ್ಲಿಕನ್ ಪಕ್ಷದ ಹಿಡಿತವನ್ನು ಬಲಪಡಿಸಲು ಟ್ರಂಪ್ ಅನುಸರಿಸುತ್ತಿರುವ ಆಕ್ರಮಣಕಾರಿ ಕಾರ್ಯತಂತ್ರ ಇದಾಗಿದೆ.

‘ನನ್ನ ಉಪ ಮುಖ್ಯಸ್ಥ ಜೇಮ್ಸ್ ಬ್ಲೇರ್ ದೇಶದ ಅತ್ಯಂತ ಪ್ರಖರ ರಾಜಕೀಯ ಚಾಣಕ್ಯರಲ್ಲಿ ಒಬ್ಬರು. 2024ರಲ್ಲಿ ನಾನು ಭರ್ಜರಿ ಜಯ ದಾಖಲಿಸಲು ಅವರು ಹೇಗೆ ಸಹಾಯ ಮಾಡಿದರೋ, ಹಾಗೆಯೇ ಈಗ ರಿಪಬ್ಲಿಕನ್ನರು ಐತಿಹಾಸಿಕ ದಾಖಲೆ ಮುರಿದು ಮಧ್ಯಂತರ ಚುನಾವಣೆಯಲ್ಲಿ ಗೆಲ್ಲಲು ಅವರು ಅದ್ಭುತವಾಗಿ ಸಿದ್ಧತೆ ನಡೆಸಿದ್ದಾರೆ. ಜೇಮ್ಸ್ ಒಬ್ಬ ರಾಜಕೀಯ ಯೋಧ. ಈಗ ಅವರು ಆಡಳಿತದ ಹೊರಗಿನಿಂದ ಉಗ್ರ ಎಡಪಂಥೀಯರು ಮತ್ತು ದೇಶ ವಿರೋಧಿ ಡೆಮಾಕ್ರಟ್ಗಳ ವಿರುದ್ಧ ಹೋರಾಟ ನಡೆಸಲು ಅಲ್ಪಕಾಲದ ರಜೆ ಪಡೆಯುತ್ತಿದ್ದಾರೆ. ಅವರು ಅದ್ಭುತ ಕೆಲಸ ಮಾಡಲಿದ್ದಾರೆ ಮತ್ತು ಚುನಾವಣೆಯ ನಂತರ ಮತ್ತೆ ಶ್ವೇತಭವನಕ್ಕೆ ಮರಳಲಿದ್ದಾರೆ. ಆ ಮೂಲಕ ನಾವು ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಡಲು ಕೆಲಸ ಮುಂದುವರಿಸುತ್ತೇವೆ’ ಎಂದು ಟ್ರಂಪ್ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರೂಥ್ ಸೋಷಿಯಲ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೇಶದ ಅತ್ಯಂತ ಪ್ರಬಲ ರಾಜಕೀಯ ಕಾರ್ಯತಂತ್ರ ರೂಪಿಸುವವರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಬ್ಲೇರ್, 2024ರ ಟ್ರಂಪ್ ಪ್ರಚಾರದ ರಾಜಕೀಯ ನಿರ್ದೇಶಕರಾಗಿ ಪ್ರಮುಖ ಪಾತ್ರ ವಹಿಸಿದ್ದರು. ರಿಪಬ್ಲಿಕನ್ ಪಕ್ಷದ ಕಾರ್ಯವೈಖರಿಯನ್ನು ಆಧುನೀಕರಿಸಿದ ಮತ್ತು ನಿರ್ಣಾಯಕ ಜಯ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ.

2026ರ ಮಧ್ಯಂತರ ಚುನಾವಣೆ: ಐತಿಹಾಸಿಕ ಸವಾಲು

2026ರ ನವೆಂಬರ್ 3ರಂದು ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ವರದಿಯಾಗಿದೆ. ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದ ಮೇಲಿನ ಜನಾಭಿಪ್ರಾಯದಂತೆ ರೂಪಗೊಳ್ಳುತ್ತಿವೆ. ಪ್ರಸ್ತುತ ರಿಪಬ್ಲಿಕನ್ನರು ಶ್ವೇತಭವನ, ಸಂಸತ್ನ ಪ್ರತಿನಿಧಿ ಸಭೆ (ಕೆಳಮನೆ) ಮತ್ತು ಸೆನೆಟ್ (ಮೇಲ್ಮನೆ) ಮೂರರಲ್ಲೂ ಹಿಡಿತ ಹೊಂದಿದ್ದಾರೆ. ಸಾಮಾನ್ಯವಾಗಿ ಆಡಳಿತಾರೂಢ ಪಕ್ಷವು ಮಧ್ಯಂತರ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುತ್ತದೆ ಎಂಬ ನಿಯಮವನ್ನು ರಿಪಬ್ಲಿಕನ್ ಪಕ್ಷವು ಈ ಬಾರಿ ಮೀರುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಪ್ರತಿನಿಧಿ ಸಭೆ (House Of Representatives): ಎಲ್ಲಾ 435 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಹುಮತ ಪಡೆಯಲು ಡೆಮಾಕ್ರಟ್ಗಳಿಗೆ ಕೇವಲ 3 ಸ್ಥಾನಗಳ ಅಗತ್ಯವಿದೆ.

ಸೆನೆಟ್ (Senate): 35 ಸ್ಥಾನಗಳಿಗೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಫ್ಲೋರಿಡಾ (ಮಾರ್ಕೊ ರೂಬಿಯೋ ಅವರಿಂದ ತೆರವಾದ ಸ್ಥಾನ) ಮತ್ತು ಓಹಿಯೋ (ಜೆ.ಡಿ. ವ್ಯಾನ್ಸ್ ಅವರಿಂದ ತೆರವಾದ ಸ್ಥಾನ) ಸೇರಿವೆ.

ಗವರ್ನರ್ ಚುನಾವಣೆ: 39 ರಾಜ್ಯಗಳಲ್ಲಿ ಗವರ್ನರ್ಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
.ಕದನ ವಿರಾಮ ಮಾತುಕತೆ ಹೊತ್ತಲ್ಲಿ ಇಸ್ರೇಲ್ ಅನ್ನು ಕ್ಯಾನ್ಸರ್ಗೆ ಹೋಲಿಸಿದ ಪಾಕ್.ಇಸ್ರೇಲ್ ವಿನಾಶಕ್ಕೆ ಪಾಕ್ ಸಚಿವ ಕರೆ: ಸಹಿಸಲು ಸಾಧ್ಯವಿಲ್ಲ ಎಂದ ನೆತನ್ಯಾಹು.
ಪ್ರಮುಖ ಚುನಾವಣಾ ವಿಷಯಗಳು

1. ಆರ್ಥಿಕತೆ ಮತ್ತು ಜೀವನ ವೆಚ್ಚ: ಟ್ರಂಪ್ ಆಡಳಿತವು ಉತ್ತಮ ಆರ್ಥಿಕತೆ ಹೊಂದಿರುವುದಾಗಿ ಹೇಳಿಕೊಳ್ಳುತ್ತಿದ್ದರೂ, ಮತದಾರರು ಗೃಹ ನಿರ್ಮಾಣ ಬಿಕ್ಕಟ್ಟು, ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ತೊಂದರೆಗೀಡಾಗಿದ್ದಾರೆ. ಮಧ್ಯಮ ಆದಾಯದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಮನೆಗಳನ್ನು ನಿರ್ಮಿಸುವುದು ಕಷ್ಟಕರವಾಗಿದೆ.

2. ಇರಾನ್ ಸಂಘರ್ಷ ಮತ್ತು ತೈಲ ಬೆಲೆ: ಇರಾನ್ ವಿರುದ್ಧದ ಸೇನಾ ಸಂಘರ್ಷವು ಭಾರಿ ಚರ್ಚೆಗೆ ಕಾರಣವಾಗಿದೆ. ಇದು ಶಕ್ತಿಯ ಪ್ರದರ್ಶನ ಎಂದು ಬಿಂಬಿತವಾಗಿದ್ದರೂ, ಹೊರ್ಮುಜ್ ಜಲಸಂಧಿಯ ಅಪಾಯಗಳಿಂದಾಗಿ ಹೆಚ್ಚಾದ ಪೆಟ್ರೋಲ್ ಮತ್ತು ತೈಲ ಬೆಲೆಗಳು ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಸವಾಲಾಗಿ ಪರಿಣಮಿಸಿವೆ.

3. ಒನ್ ಬಿಗ್ ಬ್ಯೂಟಿಫುಲ್ ಬಿಲ್ (OBBBA): ಟ್ರಂಪ್ ಆಡಳಿತದ ಈ ಪ್ರಮುಖ ತೆರಿಗೆ ಮತ್ತು ನಿಯಂತ್ರಣ ಕಾಯ್ದೆಯು 2026ರಲ್ಲಿ ತೆರಿಗೆ ಮರುಪಾವತಿ ನೀಡುತ್ತದೆಯಾದರೂ, ಆರೋಗ್ಯ ಸಬ್ಸಿಡಿ ಮತ್ತು ಹಿರಿಯ ನಾಗರಿಕರ ಆರೈಕೆಯ ಮೇಲಿನ ಪರಿಣಾಮ ಕುರಿತು ಡೆಮಾಕ್ರಟ್ಗಳು ಆಕ್ರೋಶ ಹೊರಹಾಕಿದ್ದಾರೆ.

ರಿಪಬ್ಲಿಕನ್ ಕಾರ್ಯತಂತ್ರವು ಈ ಚುನಾವಣೆಯನ್ನು 'ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಡಲು ಸ್ಥಿರತೆ’ ಮತ್ತು ‘ಉಗ್ರ ಎಡಪಂಥೀಯರ ಅಸ್ಥಿರತೆ’ ನಡುವಿನ ಆಯ್ಕೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ, ಡೆಮಾಕ್ರಟ್ಗಳು ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಭೌಗೋಳಿಕ ರಾಜಕೀಯ ಸಮಸ್ಯೆಗಳ ಬಗ್ಗೆ ಮತದಾರರಲ್ಲಿರುವ ಆತಂಕವನ್ನು ಬಂಡವಾಳನ್ನಾಗಿಸಿಕೊಳ್ಳಲು ಯೋಜಿಸುತ್ತಿದ್ದಾರೆ.
.ಟ್ರಂಪ್ಗೆ ತಲೆದಂಡದ ಭೀತಿ: ಅಮೆರಿಕ ಅಧ್ಯಕ್ಷರ ಪದಚ್ಯುತಗೊಳಿಸಲಿದೆ ಈ ತಿದ್ದುಪಡಿ.ಇರಾನ್ ಮಾತುಕತೆ ವಿಫಲವಾದರೆ ಬ್ಯಾಕ್ಅಪ್ ಪ್ಲಾನ್ ಬಗ್ಗೆ ಟ್ರಂಪ್ ಹೇಳಿದ್ದಿಷ್ಟು.ಆರ್ಟೆಮಿಸ್ ಗಗನಯಾನಿಗಳಿಗೆ ಅಭಿನಂದನೆ: ಮುಂದಿನ ಹೆಜ್ಜೆ ‘ಮಂಗಳ ಗ್ರಹ’ ಎಂದ ಟ್ರಂಪ್.ಅಮೆರಿಕ ಸೇನೆ ಇರಾನ್ ಸುತ್ತಮುತ್ತಲೇ ಮೊಕ್ಕಾಂ ಹೂಡಿದೆ: ಡೊನಾಲ್ಡ್ ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.