ಢಾಕಾ: ಬಾಂಗ್ಲಾದೇಶದಲ್ಲಿ ಬಕ್ರೀದ್ ಹಬ್ಬದಂದು ಬಲಿಗೆ ಸಿದ್ಧವಾಗಿದ್ದ ‘ಡೊನಾಲ್ಡ್ ಟ್ರಂಪ್’ ಹೆಸರಿನ ಅಲ್ಬಿನೊ ಎಮ್ಮೆಯನ್ನು ರಕ್ಷಿಸಿರುವ ಇಲ್ಲಿನ ಅಧಿಕಾರಿಗಳು ರಾಜಧಾನಿಯಲ್ಲಿರುವ ಮೃಗಾಲಯಕ್ಕೆ ಸ್ಥಳಾಂತರಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೇಶವಿನ್ಯಾಸವನ್ನೇ ಹೋಲುತ್ತಿದ್ದ ಕಾರಣ ಈ ಎಮ್ಮೆಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಚರ್ಚೆಗೆ ಕಾರಣವಾಗಿತ್ತು.

ಬಕ್ರೀದ್ ಹಬ್ಬದಂದು ಬಲಿಗೆ ಸಿದ್ಧಗೊಂಡ ಕೆಲ ಗಂಟೆಗಳ ಮುಂಚಿತವಾಗಿ, ಸರ್ಕಾರದ ನಿರ್ದೇಶನದಂತೆ 700 ಕೆ.ಜಿ ತೂಕ ಹೋಲುವ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡರು.

‘ಸಂರಕ್ಷಣೆ ಮಾಡುವ ಉದ್ದೇಶದಿಂದ ಎಮ್ಮೆಯನ್ನು ಸರ್ಕಾರವು ವಶಕ್ಕೆ ಪಡೆಯಲು ನಿರ್ಧರಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಬಂದು ತಿಳಿಸಿದರು. ಸರ್ಕಾರದ ಜೊತೆಗೆ ಯಾವುದೇ ಸಂಘರ್ಷ ಮಾಡಲು ಬಯಸದೇ, ಎಮ್ಮೆಯನ್ನು ಅವರಿಗೆ ಹಸ್ತಾಂತರಿಸಿದೆವು’ ಎಂದು ಎಮ್ಮೆಯ ಮಾಲೀಕ ಮೊನಿರುಜ್ ಜಮಾನ್ ತಿಳಿಸಿದರು.

‘ಸರ್ಕಾರವು ಎಮ್ಮೆಯ ಬದಲಿಗೆ ಪರಿಹಾರ ಅಥವಾ ಬೇರೆ ಎಮ್ಮೆಯನ್ನು ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಬಕ್ರೀದ್ಗೆ ಬಲಿ ನೀಡುವ ಉದ್ದೇಶದಿಂದ ಢಾಕಾ ಹೊರವಲಯದಲ್ಲಿರುವ ಕೆರನಿಗಂಜ್ನಲ್ಲಿ ಖರೀದಿಸಿದ್ದೆನು’ ಎಂದಿದ್ದಾರೆ.

‘ಎಮ್ಮೆಯು ಸಣ್ಣ ವಯಸ್ಸು ಹೊಂದಿದ್ದು, ಮೃಗಾಲಯದಲ್ಲಿಟ್ಟು ಇನ್ನಷ್ಟು ವರ್ಷ ಸಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ’ ಎಂದು ಕೆರನಿಗಂಜ್ನ ಠಾಣಾಧಿಕಾರಿ ರುಹುಲ್ ಖುದ್ದೂಸ್ ತಿಳಿಸಿದ್ದಾರೆ.

‘ಮೃಗಾಲಯದಲ್ಲಿ ಎಮ್ಮೆಯನ್ನು ಪ್ರತ್ಯೇಕವಾಗಿಡಲಾಗಿದ್ದು, ಅದರ ನಿರ್ವಹಣೆಗಾಗಿಯೇ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಮೃಗಾಲಯದ ಮೇಲ್ವಿಚಾರಕ ಅತಿಕರ್ ರೆಹಮಾನ್ ತಿಳಿಸಿದ್ದಾರೆ.

ಟ್ರಂಪ್ ಅವರಂತೆ ಕೆಂಬಣ್ಣದ ಉದ್ದನೆಯ ಕೂದಲು, ಗುಲಾಬಿ ಬಣ್ಣದ ಮೂಗು ಹೊಂದಿದ್ದ ಕಾರಣ ಈ ಎಮ್ಮೆಯು ಹೆಚ್ಚು ಗಮನಸೆಳೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.