ವಾಷಿಂಗ್ಟನ್: ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಹೊರ್ಮುಜ್ ಜಲಸಂದಿಯನ್ನು ಅಮೆರಿಕಕ್ಕೆ ಇರಾನ್ ಕೊಡುಗೆಯಾಗಿ ಬಿಟ್ಟುಕೊಟ್ಟಿದೆಯೇ? – ಹೀಗೊಂದು ಅನುಮಾನ ಬರುವಂತಹ ಮಾತಿನ ದಾಳವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಉರುಳಿಸಿದ್ದಾರೆ.

ಓವಲ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಟ್ರಂಪ್, 'ಇರಾನ್ ನಮಗೆ ಬಹುದೊಡ್ಡ ಕಾಣಿಕೆಯೊಂದನ್ನು ನೀಡಿದೆ. ಭಾರಿ ಮೊತ್ತಕ್ಕೆ ಸಮನಾದ ಆ ಪ್ರಸ್ತಾವ ಇಂದಷ್ಟೇ ಬಂದಿದೆ' ಎಂದು ತಿಳಿಸಿದ್ದಾರೆ.

ಇಂಧನ ವ್ಯವಹಾರಕ್ಕೆ ಸಂಬಂಧಿಸಿದ ಬಹುದೊಡ್ಡ ರಿಯಾಯಿತಿಯನ್ನು ಅಮೆರಿಕಕ್ಕೆ ಇರಾನ್ ನೀಡಿದೆ. ಇದು, ಸಕಾರಾತ್ಮಕ ಬೆಳವಣಿಗೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಈ ಕೊಡುಗೆಯು ಹೊರ್ಮುಜ್ ಜಲಸಂಧಿಗೆ ಸಂಬಂಧಿಸಿದ್ದಾಗಿದೆ ಎಂದೂ ಹೇಳಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಮುಂದುವರಿದು, 'ಅದು ಅಣ್ವಸ್ತ್ರವಲ್ಲ. ತೈಲ ಹಾಗೂ ಅನಿಲಕ್ಕೆ ಸಂಬಂಧಿಸಿದ್ದಾಗಿದೆ. ಆ ಕಾಣಿಕೆಯೇ ಅವರು ಮಾಡಿರುವ ಅತ್ಯುತ್ತಮ ಕೆಲಸ' ಎಂದು ಬಣ್ಣಿಸಿದ್ದಾರೆ.

ಅಮೆರಿಕ ಈಗಾಗಲೇ ಯುದ್ಧವನ್ನು ಗೆದ್ದಿದೆ ಎಂದು ಪುನರುಚ್ಚರಿಸಿರುವ ಟ್ರಂಪ್, ಇದರಿಂದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಗೆತ್ಗೆ ಬೇಸರವಾಗಿದೆ ಎಂದೂ ಹೇಳಿದ್ದಾರೆ.

'ಉದ್ವಿಗ್ನತೆ ಇತ್ಯರ್ಥಗೊಳ್ಳುವುದನ್ನು ಹಿಗ್ಗೆತ್ ಬಯಸಿರಲಿಲ್ಲ' ಎಂದಿರುವ ಟ್ರಂಪ್, ಹೆಚ್ಚಿನ ವಿವರ ನೀಡಲಿಲ್ಲ.

ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಇರಾನ್ನಲ್ಲಿರುವ ಸೂಕ್ತ ವ್ಯಕ್ತಿಗಳೊಂದಿಗೆ ಅಮೆರಿಕ ಮಾತುಕತೆ ನಡೆಸುತ್ತಿದೆ. ಇರಾನ್, ಒಪ್ಪಂದ ಮಾಡಿಕೊಳ್ಳಲು ಹಾತೊರೆಯುತ್ತಿದೆ ಎಂದೂ ಹೇಳಿಕೊಂಡಿದ್ದಾರೆ.
.ನೀವೇ ಯುದ್ಧ ಮಾಡುವ ಅಂದಿದ್ದು: ಪೀಟ್ ಹೆಗ್ಸೆತ್ ಮೇಲೆ ಗೂಬೆ ಕೂರಿಸಿದ ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.