ವಾಷಿಂಗ್ಟನ್: ಇರಾನ್ನಲ್ಲಿ ವಾಯುಪಡೆಯ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಮೊದಲು ವರದಿ ಮಾಡಿದ ಪತ್ರಕರ್ತರು ಮಾಹಿತಿಯನ್ನು ಹೇಗೆ ಪಡೆದರು ಎಂಬುದನ್ನು ಬಹಿರಂಗಪಡಿಸಬೇಕು. ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರೆ ಅವರನ್ನು ಜೈಲಿಗೆ ಹಾಕಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧದ ಅಮೆರಿಕ -ಇಸ್ರೇಲ್ ಯುದ್ಧದ ಮಾಧ್ಯಮ ವರದಿ ತುಂಬಾ ನಕಾರಾತ್ಮಕವಾಗಿದೆ. ಶುಕ್ರವಾರ ಇರಾನ್ ಮೇಲೆ ಅಮೆರಿಕದ ಯುದ್ಧ ವಿಮಾನವನ್ನು ಶುಕ್ರವಾರ ಇರಾನ್ ಹೊಡೆದುರುಳಿಸಿತ್ತು. ಬಳಿಕ ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳು ಕೆಳಕ್ಕೆ ಜಿಗಿದಿದ್ದರು. ಒಬ್ಬರನ್ನು ರಕ್ಷಿಸಿದ್ದರೆ, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದ್ದವು. ಈ ವಿಚಾರ ಎರಡನೇ ವಾಯುಪಡೆಯ ಸಿಬ್ಬಂದಿಯನ್ನು ರಕ್ಷಿಸಲು ನಡೆಸಿದ ಕಾರ್ಯಾಚರಣೆಗೆ ಅಪಾಯವನ್ನು ಉಂಟು ಮಾಡಿದೆ ಎಂದು ಟ್ರಂಪ್ ಕಿಡಿಕಾರಿದ್ದಾರೆ.

ಮುಂದುವರೆದು ಮಾತನಾಡಿದ ಟ್ರಂಪ್, ‘ಯಾರೋ ನಮ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ. ಅವರನ್ನು ನಾವು ಕಂಡು ಹಿಡಿಯುತ್ತೇವೆ. ನಮ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಮಾಧ್ಯಮ ಸಂಸ್ಥೆಗೆ ಹೋಗುತ್ತೇವೆ. ರಾಷ್ಟ್ರೀಯ ಭದ್ರತೆಯ ಮಾಹಿತಿ ಎಲ್ಲಿಂದ ಸಿಕ್ಕಿತು ಎಂಬುದನ್ನು ತಿಳಿಸಿ ಅಥವಾ ಜೈಲಿಗೆ ಹೋಗಿ ಎಂದು ಹೇಳುತ್ತೇವೆ’ ಎಂದು ಗುಡುಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.