‘ಶೇ 59ರಷ್ಟು ಅಮೆರಿಕನ್ನರಿಗೆ ಒಪ್ಪಿಗೆ ಇಲ್ಲ’
ಅಮೆರಿಕ ಸೇನಾ ಪಡೆಗಳು ಇರಾನ್ ಮೇಲೆ ನಡೆಸುತ್ತಿರುವ ದಾಳಿಗಳನ್ನು ಶೇ 59ರಷ್ಟು ಅಮೆರಿಕನ್ನರು ಒಪ್ಪುತ್ತಿಲ್ಲ ಎಂದು ರಾಯಿಟರ್ಸ್/ಇಪ್‌ಸೋಸ್ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ. ಶೇ 37ರಷ್ಟು ಜನರು ಈ ದಾಳಿಗಳನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಸಂಸ್ಥೆಗಳು ಕಳೆದ ವಾರ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ. ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿವೆ. ಹೀಗಾಗಿ ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧವು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲಿಗೆ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.