ವಾಷಿಂಗ್ಟನ್: ಏಳು ವಾರಗಳ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಮತ್ತು ಅಮೆರಿಕ ನಡುವೆ ಮಾತುಕತೆಗಳು ನಡೆಯುತ್ತಿದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಕದನ ವಿರಾಮ ಉಲ್ಲಂಘನೆ ಆರೋಪ ಹೊರಿಸಿದ್ದಾರೆ.

‘ಇರಾನ್ ನಿನ್ನೆ ಹೊರ್ಮುಜ್ ಜಲಸಂಧಿಯಲ್ಲಿ ಗುಂಡಿನ ದಾಳಿ ನಡೆಸಲು ನಿರ್ಧರಿಸಿದೆ. ಇದು ನಮ್ಮ ಕದನ ವಿರಾಮ ಒಪ್ಪಂದದ ಸಂಪೂರ್ಣ ಉಲ್ಲಂಘನೆಯಾಗಿದೆ. ಫ್ರಾನ್ಸ್ ಮತ್ತು ಇಂಗ್ಲೆಂಡ್ನ ವಾಣಿಜ್ಯ ಹಡಗನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಅದು ಸರಿಯಾದ ಕ್ರಮವಲ್ಲ, ಅಲ್ಲವೇ’ ಎಂದು ಟ್ರಂಪ್ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರೂಥ್ ಸೋಷಿಯಲ್’ನಲ್ಲಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.

‘ಇರಾನ್ ಒಂದು ವೇಳೆ ‘ನ್ಯಾಯಯುತ ಒಪ್ಪಂದಕ್ಕೆ ಒಪ್ಪದಿದ್ದರೆ, ಆ ದೇಶದ ಮೂಲಸೌಕರ್ಯಗಳ ಮೇಲೆ ಬೃಹತ್ ಪ್ರಮಾಣದಲ್ಲಿ ದಾಳಿ ನಡೆಸಲಾಗುತ್ತದೆ’ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.

‘ಹೊರ್ಮುಜ್ ಜಲಸಂಧಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವ ಮೂಲಕ ಇರಾನ್ ತನ್ನದೇ ಆರ್ಥಿಕತೆಗೆ ಹಾನಿ ಮಾಡಿಕೊಳ್ಳುತ್ತಿದೆ. ಇರಾನಿಯನ್ನರು ತಮಗೆ ತಿಳಿಯದೆಯೇ ನಮಗೆ ಸಹಾಯ ಮಾಡುತ್ತಿದ್ದಾರೆ. ಈ ಜಲಮಾರ್ಗ ಮುಚ್ಚಿರುವುದರಿಂದ ಇರಾನ್ ಪ್ರತಿದಿನ 500 ಮಿಲಿಯನ್ ಡಾಲರ್ ನಷ್ಟ ಅನುಭವಿಸುತ್ತಿದೆ. ಅಮೆರಿಕಕ್ಕೆ ಇದರಿಂದ ಯಾವುದೇ ನಷ್ಟವಿಲ್ಲ’ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

‘ಸದಾ ‘ಟಫ್ ಗೈ’ (ಗಟ್ಟಿಗ) ಎನಿಸಿಕೊಳ್ಳಲು ಬಯಸುವ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ಗೆ (ಐಆರ್ಜಿಸಿ) ಧನ್ಯವಾದಗಳು!. ಈಗ ಅನೇಕ ಹಡಗುಗಳು ಸರಕುಗಳನ್ನು ತುಂಬಿಸಿಕೊಳ್ಳಲು ಅಮೆರಿಕದ ಟೆಕ್ಸಾಸ್, ಲೂಸಿಯಾನ ಮತ್ತು ಅಲಾಸ್ಕಾದತ್ತ ಮುಖ ಮಾಡುತ್ತಿವೆ’ ಎಂದು ಬರೆದಿದ್ದಾರೆ.

‘ನಾವು ಅತ್ಯಂತ ನ್ಯಾಯಯುತ ಒಪ್ಪಂದವನ್ನು ಎದುರುನೋಡುತ್ತಿದ್ದೇವೆ. ಇರಾನಿಯನ್ನರು ಇದನ್ನೇ ಸ್ವೀಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ, ಅಮೆರಿಕವು ಇರಾನ್ನಲ್ಲಿರುವ ಪ್ರತಿಯೊಂದು ವಿದ್ಯುತ್ ಸ್ಥಾವರ, ಸೇತುವೆಯನ್ನು ನಾಶಪಡಿಸಲಿದೆ. ‘ಇನ್ನು ಮುಂದೆ ಸೌಜನ್ಯದ ಮನುಷ್ಯನಾಗಿ ವರ್ತಿಸಲು ಸಾಧ್ಯವಿಲ್ಲ. ಇರಾನ್ನ ಮೂಲಸೌಕರ್ಯಗಳನ್ನು ಬಹಳ ಸುಲಭವಾಗಿ ಮತ್ತು ವೇಗವಾಗಿ ಧ್ವಂಸಗೊಳಿಸುವ ಸಮಯ ಬಂದಿದೆ’ ಎಂದು ಅವರು ತೀಕ್ಷ್ಣವಾಗಿ ಹೇಳಿದ್ದಾರೆ.

ಮುಂದಿನ ರಾಜತಾಂತ್ರಿಕ ಪ್ರಯತ್ನದ ಬಗ್ಗೆ ಪ್ರಸ್ತಾಪಿಸಿದ ಅವರು, ‘ನಮ್ಮ ಪ್ರತಿನಿಧಿಗಳು ಪಾಕಿಸ್ತಾನದ ಇಸ್ಲಾಮಾಬಾದ್ಗೆ ಹೋಗುತ್ತಿದ್ದಾರೆ’ ಎಂದಿದ್ದಾರೆ.

ಕಳೆದ ವಾರ ಇಸ್ಲಾಮಾಬಾದ್ನಲ್ಲಿ ನಡೆದಿದ್ದ ಮೊದಲ ಸುತ್ತಿನ ಮಾತುಕತೆಯು ವಿಫಲವಾಗಿತ್ತು. ಯುರೇನಿಯಂ ಸಮೃದ್ಧೀಕರಣದ ಮೇಲೆ ತಕ್ಷಣದ ನಿರ್ಬಂಧ ಹೇರಬೇಕೆಂಬ ಅಮೆರಿಕದ ಬೇಡಿಕೆಯನ್ನು ಇರಾನ್ ತಿರಸ್ಕರಿಸಿದ್ದೇ ಇದಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.