ಕಾಬೂಲ್: ಗರ್ಭಾವಸ್ಥೆಯಲ್ಲಿನ ತೊಂದರೆಗಳಿಂದ ಅಫ್ಗಾನಿಸ್ತಾನದಲ್ಲಿ ಪ್ರತಿದಿನ 24 ತಾಯಂದಿರು ಮರಣ ಹೊಂದುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಗರ್ಭಾವಸ್ಥೆಗೆ ಸಂಬಂಧಿಸಿದ ಗುಣಪಡಿಸಬಹುದಾದ ಆರೋಗ್ಯ ಸಮಸ್ಯೆಗಳಿಂದಾಗಿ
ಈ ಕುರಿತು ಅಫ್ಗಾನಿಸ್ತಾನದ ಡಿಜಿಟಲ್ ನ್ಯೂಸ್ ಏಜೆನ್ಸಿ ಖಾಮಾ ಪ್ರೆಸ್ ಮಂಗಳವಾರ ವರದಿ ಮಾಡಿದೆ.
ಅಪೌಷ್ಟಿಕತೆ, ಆರ್ಥಿಕ ದುರ್ಬಲತೆ, ಆರೋಗ್ಯ ಸೌಕರ್ಯಗಳ ಕೊರತೆ, ಒತ್ತಡ ಹೆಚ್ಚಾಗಿರುವುದು ಗರ್ಭಿಣಿಯರ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತಿದೆ. ಇದರಿಂದ ತಾಯಂದಿರ ಮರಣ ಪ್ರಮಾಣ ಹೆಚ್ಚಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಎಕ್ಸ್ (ಟ್ವಿಟರ್)ನಲ್ಲಿ, ಪ್ರಸ್ತುತ ಇರುವ ನಿಧಿಯ ಅಡಿಯಲ್ಲಿ ಪ್ರತಿದಿನ ಅಂದಾಜು 24 ತಾಯಂದಿರು ಗುಣಪಡಿಸಿಕೊಳ್ಳಬಹುದಾದ ಗರ್ಭಾವಸ್ಥೆಯ ತೊಂದರೆಯಿಂದ ಮರಣ ಹೊಂದುತ್ತಿದ್ದಾರೆ. ಈಗಿರುವ ನಿಧಿಯ ಪ್ರಮಾಣವೂ ಕಡಿಮೆಯಾದರೆ ಸಾವಿನ ಸಂಖ್ಯೆ ಕ್ರಮೇಣ ಹೆಚ್ಚಾಗಬಹುದು. ಕಡಿಮೆ ನಿಧಿಯ ಸಂಗ್ರಹದಿಂದಾಗಿ ಈ ಸಮಸ್ಯೆ ಎದುರಾಗಿದೆ. ತ್ವರಿತವಾಗಿ ನಿಧಿ ಸಂಗ್ರಹ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.
ಇತ್ತೀಚೆಗಷ್ಟೇ ಆಹಾರ, ಪೌಷ್ಟಿಕಾಂಶದ ಕೊರತೆ, ಸಾಂಕ್ರಾಮಿಕ ರೋಗಗಳು, ತೀವ್ರ ಬರ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.