ಕಿನ್ಯಾಸಾ (ಕಾಂಗೊ): ಎಬೋಲಾ ವೈರಾಣು ಸೋಂಕಿನಿಂದಾಗಿ ಪೂರ್ವ ಕಾಂಗೊದಲ್ಲಿ ಈವರೆಗೆ 131 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ಪತ್ತೆಯಾಗಿವೆ.

ಈ ಬಗ್ಗೆ ಕಾಂಗೊದ ಸಾರ್ವಜನಿಕ ಆರೋಗ್ಯ ಸಚಿವಾಲಯದ ಸಚಿವ ಸಾಮ್ಯುಯೆಲ್ ರೋಗೆರ್ ಕಾಂಬಾ ಅವರು ಮಾಹಿತಿ ನೀಡಿದ್ದು 131 ಮಂದಿ ಎಬೋಲಾ ವೈರಾಣು ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.

ಎಬೋಲಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆಯು(ಡಬ್ಲ್ಯುಎಚ್ಒ) ಭಾನುವಾರ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.

ಪ್ರಸ್ತುತ ಅವಧಿಯಲ್ಲಿ ಶುಕ್ರವಾರ ಮೊದಲ ಬಾರಿಗೆ ಸೋಂಕು ದೃಢಪಟ್ಟಿದ್ದು, ಇದು ಎಬೋಲಾದ ವಿರಳ ಮತ್ತು ಅಪಾಯಕಾರಿ ರೂಪಾಂತರವಾದ ಬುಂಡಿಬುಗ್ಯೊ ವೈರಸ್ನಿಂದ ಹರಡಿದೆ ಎಂದು ಅವರು ತಿಳಿಸಿದ್ದಾರೆ.

ಕಾಂಗೊ ಮತ್ತು ಉಗಾಂಡದಲ್ಲಿ 20ಕ್ಕೂ ಅಧಿಕ ಬಾರಿ ಎಬೋಲಾ ಸಾಂಕ್ರಾಮಿಕ ವ್ಯಾಪಕವಾಗಿ ಹಬ್ಬಿದ್ದು, ಮೂರನೇ ಬಾರಿಗೆ ಬುಂಡಿಬುಗ್ಯೊ ವೈರಸ್ ಪತ್ತೆಯಾಗಿದೆ.

ಸಾಂಕ್ರಾಮಿಕದ ಪ್ರಮಾಣ ಮತ್ತು ಹರಡುತ್ತಿರುವ ವೇಗದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಗೆಬ್ರೆಯೆಸಸ್ ಅವರು ಜಿನೀವಾದಲ್ಲಿ ಮಂಗಳವಾರ ಕಳವಳ ವ್ಯಕ್ತಪಡಿಸಿದ್ದಾರೆ.

ಅಮೆರಿಕ ವೈದ್ಯರಲ್ಲಿ ಸೋಂಕು ಪತ್ತೆ: ಇಟೂರಿ ರಾಜಧಾನಿ ಬುನಿಯಾದಲ್ಲಿದ್ದ ಅಮೆರಿಕದ ವೈದ್ಯರೊಬ್ಬರಲ್ಲಿ ಎಬೋಲಾ ಸೋಂಕು ಪತ್ತೆಯಾಗಿದೆ.

ಎಬೋಲಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಪೀಟರ್ ಸ್ಟಾಫರ್ಡ್ ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಅವರು ಕೆಲಸ ಮಾಡುತ್ತಿದ್ದ ಸಂಸ್ಥೆ ‘ಸೆರ್ಗೆ’ಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.