ನವದೆಹಲಿ: ಕಾಂಗೊ ಮತ್ತು ಉಗಾಂಡಾ ದೇಶಗಳಲ್ಲಿ ಎಬೊಲಾ ವೈರಸ್ ಹರಡುವಿಕೆ ವಿಪರೀತ ಹೆಚ್ಚಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ‘ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಘೋಷಿಸಿದೆ.

ಕಾಂಗೊದ ಇಟುರಿ ಪ್ರಾಂತ್ಯದ ಬುನಿಯಾ, ವ್ಯಾಂಪರಾ ಮತ್ತು ಮೊಂಗದವಾಲು ಸೇರಿದಂತೆ ಕನಿಷ್ಠ ಮೂರು ಆರೋಗ್ಯ ವಲಯಗಳಲ್ಲಿ ಶನಿವಾರದ ವೇಳೆಗೆ 80 ಶಂಕಿತ ಸಾವು, ಎಂಟು ಮಂದಿಗೆ ಎಬೊಲಾ ದೃಢಪಟ್ಟಿದೆ.

ಇನ್ನೂ 246 ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಕಾಂಗೊದ ಪೂರ್ವ ಪ್ರಾಂತ್ಯದಲ್ಲಿ ಹೊಸ ವೈರಸ್ನಿಂದ ಏಕಾಏಕಿ 80 ಜನರು ಮೃತಪಟ್ಟಿದ್ದಾರೆ ಎಂದು ಕಾಂಗೊ ಆರೋಗ್ಯ ಸಚಿವಾಲಯ ತಿಳಿಸಿದೆ.

ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿಯೂ ಎರಡು ಪ್ರಕರಣಗಳನ್ನು ಖಾಸಗಿ ಪ್ರಯೋಗಾಲಯ ದೃಢಪಡಿಸಿದ್ದು, ಒಬ್ಬ ಮೃತಪಟ್ಟಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.