ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲೆ ಪ್ರಕರಣ: ಬಾಂಗ್ಲಾದ ಮಾಜಿ ಸ್ಪೀಕರ್‌, ಸಚಿವ ಬಂಧನ

Published 29 ಆಗಸ್ಟ್ 2024, 12:40 IST
Last Updated 29 ಆಗಸ್ಟ್ 2024, 12:40 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶದ ಮಾಜಿ ಸ್ಪೀಕರ್ ಶಿರಿನ್‌ ಶರ್ಮಿನ್‌ ಚೌಧರಿ (46) ಮತ್ತು ಮಾಜಿ ಸಚಿವ ಟಿಪು ಮುನ್ಷಿ (74) ಅವರನ್ನು ಚಿನ್ನಾಭರಣ ತಯಾರಕರೊಬ್ಬರ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ಮೀಸಲು ಕೋಟಾ ವಿಷಯಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಚಿನ್ನಾಭರಣ ತಯಾರಕ ಮುಸ್ಲಿಂ ಉದ್ದೀನ್‌ ಮಿಲೋನ್‌ (38) ಅವರ ಕೊಲೆಯಾಗಿತ್ತು. ಈ ಸಂಬಂಧ ಸ್ಪೀಕರ್‌, ಮಾಜಿ ಸಚಿವ ಸೇರಿದಂತೆ 17 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿರಿನ್‌ ಶರ್ಮಿನ್‌ ಚೌಧರಿ ಅವರು ಬಾಂಗ್ಲಾದೇಶದ ಮೊದಲ ಮಹಿಳಾ ಸ್ಪೀಕರ್‌ ಆಗಿ 2013ರಿಂದ 2024ರ ಆಗಸ್ಟ್‌ವರೆಗೆ ಕಾರ್ಯ ನಿರ್ವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT