ಸ್ಯಾನ್ ಫ್ರಾನ್ಸಿಸ್ಕೊ: ‘ಸ್ಪೈಡರ್ ಮ್ಯಾನ್’ ಕಾಮಿಕ್ಸ್ನಲ್ಲಿನ ‘ಪನಿಷರ್’ ಪಾತ್ರ ಸೇರಿದಂತೆ ಕಥೆ ಮತ್ತು ಪಾತ್ರಗಳ ಸೃಷ್ಟಿಗೆ ಸಹಕರಿಸಿದ್ದ ಪ್ರಸಿದ್ದ ಕಾಮಿಕ್ ಪುಸ್ತಕ ಬರಹಗಾರ ಗೆರ್ರಿ ಕಾನ್ವೆ(73) ನಿಧನರಾಗಿದ್ದಾರೆ.

ಅವರು ಮೇದೊಜೀರಕ ಗ್ರಂಥಿಯ ಕಾನ್ಸರ್ನಿಂದ ಬಳಲುತ್ತಿದ್ದರು ಎಂದು ಪತ್ನಿ ಲಾರಾ ಕಾನ್ವೆ ತಿಳಿಸಿದ್ದಾರೆ.

ಬಾಲ್ಯದಲ್ಲೇ ಕಾಮಿಕ್ ಬುಕ್ಗಳನ್ನು ಬರೆಯಲು ಆರಂಭಿಸಿದ್ದ ಕಾನ್ವೆ ಅವರು 19ನೇ ವಯಸ್ಸಿಗೆ ‘ಸೂಪರ್ ಮ್ಯಾನ್’ ಕಾಮಿಕ್ ತಂಡದ ಭಾಗವಾಗಿದ್ದರು. ಇದರ ಜೊತೆಗೆ ಕಾನ್ವೆ ಅವರು ‘ಫೆಂಟಾಸ್ಟಿಕ್ ಫೋರ್’, ‘ಥೋರ್’ ಮತ್ತು ‘ಇನ್ಕ್ರೆಡಿಬಲ್ ಹಲ್ಕ್’ ನಂತಹ ಜನಪ್ರಿಯ ಕಾಮಿಕ್ಗಳಿಗೆ ಕೆಲಸ ಮಾಡಿದ್ದಾರೆ.

‘ಸ್ಪೈಡರ್ ಮ್ಯಾನ್ನಿಂದ ಅವೆಂಜರ್ವರೆಗೆ, ಐರನ್ ಮ್ಯಾನ್ನಿಂದ ಕ್ಯಾಪ್ಟನ್ ಮಾರ್ವೆಲ್ವರೆಗಿನ ಕಾನ್ವೆ ಅವರು ಮಾರ್ವೆಲ್ ಜಗತ್ತಿನ ಹಲವು ಪಾತ್ರಗಳನ್ನು ಸೃಷ್ಟಿಸಿದ್ದಾರೆ’ ಎಂದು ಮಾರ್ವೆಲ್ ಕಾಮಿಕ್ಸ್ ಪ್ರಧಾನ ಸಂಪಾದಕ ಸಿ.ಬಿ ಸೆಬುಲ್ಸ್ಕಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.