ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ರಕ್ಷಣಾ ವಿಚಾರ ಸಂಕಿರಣ

Published 7 ಜೂನ್ 2023, 16:17 IST
Last Updated 7 ಜೂನ್ 2023, 16:17 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): ರಕ್ಷಣಾ ವಲಯದಲ್ಲಿ ಎರಡೂ ರಾಷ್ಟ್ರಗಳ ನಡುವಿನ ಪರಸ್ಪರ ಸಹಕಾರವನ್ನು ವೃದ್ಧಿಸಿಕೊಳ್ಳಲು ಭಾರತೀಯ ಹೈಕಮಿಷನ್ ಇದೇ ಮೊದಲ ಬಾರಿಗೆ ‘ಭಾರತ–ಶ್ರೀಲಂಕಾ ರಕ್ಷಣಾ ವಿಚಾರ ಸಂಕಿರಣ ಮತ್ತು ವಸ್ತುಪ್ರದರ್ಶನ’ವನ್ನು ಏರ್ಪಡಿಸಿದೆ.

ಭಾರತೀಯ ರಕ್ಷಣಾ ಉದ್ಯಮ, ಶ್ರೀಲಂಕಾದ ಉದ್ಯಮಿಗಳು, ಸಶಸ್ತ್ರ ಪಡೆಗಳು, ಪೊಲೀಸ್ ಮತ್ತು ವಿಶೇಷ ಕಾರ್ಯಪಡೆಗಳು ಇದರಲ್ಲಿ ಪಾಲ್ಗೊಳ್ಳಲಿವೆ.

ರಕ್ಷಣಾ ಸಲಕರಣೆಗಳ ಉತ್ಪಾದನೆಯಲ್ಲಿ ಎರಡೂ ರಾಷ್ಟ್ರಗಳ ಸಾಮರ್ಥ್ಯದ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ವಿವಿಧ ರಕ್ಷಣಾ ಉಪಕರಣಗಳ ಪ್ರದರ್ಶನವೂ ನಡೆಯಲಿದೆ.

ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಾಢವಾಗುವ ಜೊತೆಗೆ, ಶ್ರೀಲಂಕಾದ ಸಶಸ್ತ್ರ ಪಡೆಗಳ ಸಾಮರ್ಥ್ಯ ವೃದ್ಧಿಪ‍ಡಿಸುವದರೊಂದಿಗೆ ಆರ್ಥಿಕ ಪುನಶ್ಚೇತನಕ್ಕೂ ಮಾರ್ಗವೊದಗಿಸಲಿದೆ.

ಈಗಾಗಲೇ ಈ ಎರಡೂ ರಾಷ್ಟ್ರಗಳು ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರದಿಂದ ಮುಂದುವರೆದಿದ್ದು, ಈ ವಿಚಾರ ಸಂಕಿರಣ ಮತ್ತಷ್ಟು ಅವಕಾಶ ಒದಗಿಸಲಿದೆ ಎಂದು ಹೈಕಮಿಷನ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT