ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನ: ತನಿಖೆ ಬೆನ್ನಲ್ಲೇ ಪರಾರಿಯಾದ ಮಾಜಿ ಐಎಸ್‌ಐ ಮುಖ್ಯಸ್ಥರ ಆಪ್ತ

ಭ್ರಷ್ಟಾಚಾರ, ಅಧಿಕಾರ ದುರುಪಯೋಗದ ಆರೋಪ
Published 22 ಆಗಸ್ಟ್ 2024, 13:58 IST
Last Updated 22 ಆಗಸ್ಟ್ 2024, 13:58 IST
ಅಕ್ಷರ ಗಾತ್ರ

ಲಾಹೋರ್‌: ಭ್ರಷ್ಟಾಚಾರ ಹಾಗೂ ಇತರೆ ಆರೋಪಗಳಿಂದಾಗಿ ಸೇನೆಯ ವಶದಲ್ಲಿದ್ದ ಪಾಕಿಸ್ತಾನ ಐಎಸ್‌ಐನ ಮಾಜಿ ಮುಖ್ಯಸ್ಥ ಲೆ.ಜನರಲ್‌ ಫೈಜ್‌ ಹಮೀದ್‌ ಅವರ ಆಪ್ತರೊಬ್ಬರು ಬಂಧನ ಭೀತಿಯಿಂದ ದೇಶದಿಂದ ಪರಾರಿಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಜನರಲ್‌ ಹಮೀದ್‌ ಜತೆಗೆ ಪಾಕಿಸ್ತಾನ, ವಿದೇಶಗಳಲ್ಲಿ ವ್ಯಾವಹಾರಿಕ ಸಂಬಂಧ ಹೊಂದಿದ್ದ ಮೊಹ್ಸೀನ್‌ ವಾರೈಚ್‌ ಅವರು ಬ್ರಿಟನ್‌ಗೆ ಪರಾರಿಯಾಗಿದ್ದಾರೆ ಎಂದು ‘ಸಮಾ ಟಿವಿ’ ವರದಿ ಮಾಡಿದೆ.

ಐಎಸ್‌ಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸೇನಾಧಿಕಾರಿ, ಹಲವು ನಾಗರಿಕರನ್ನು ಈಗಾಗಲೇ ವಶಕ್ಕೆ ಪಡೆದು ಸೇನೆಯು ತನಿಖೆ ನಡೆಸುತ್ತಿದೆ.

ಮೊಹ್ಸೀನ್‌ ದೇಶ ತೊರೆದಿರುವುದನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಪಾಕಿಸ್ತಾನದ ಒಳಾಡಳಿತ ಸಚಿವ ಮೊಹ್ಸೀನ್‌ ನಕ್ವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT