ಜೆಫರ್ಸನ್ ಸಿಟಿ (ಅಮೆರಿಕ): ಕಳೆದ ಮೂರ್ನಾಲ್ಕು ದಿನಗಳಲ್ಲಿ ಇರಾನ್ನ ಇಬ್ಬರು ಪ್ರಮುಖ ನಾಯಕರನ್ನು ಹತ್ಯೆ ಮಾಡಿರುವ ಅಮೆರಿಕವು, ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಸೇರಿ ತನ್ನ ಪಟ್ಟಿಯಲ್ಲಿರುವ ಉಳಿದ ನಾಲ್ವರ ಹತ್ಯೆಗಾಗಿ ಶತಾಯಗತಾಯ ಪ್ರಯತ್ನಿಸುತ್ತಿದೆ. ಅಲ್ಲದೇ ಅವರ ಮಾಹಿತಿ ನೀಡಿದವರಿಗೆ 10 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹83 ಕೋಟಿ) ಬಹುಮಾನವನ್ನೂ ಘೋಷಿಸಿದೆ.

ಮಾರ್ಚ್ 17 ಮತ್ತು 18ರಂದು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ಪ್ರಮುಖ ನಾಯಕರಾದ ಅಲಿ ಲಾರಿಜಾನಿ ಮತ್ತು ಸೈಯದ್ ಇಸ್ಮಾಯಿಲ್ ಖತೀಬ್ ಹತ್ಯೆಯಾಗಿದ್ದಾರೆ. ಸೈಯದ್ ಮೊಜ್ತಾಬಾ ಖಮೇನಿ, ಸೈಯದ್ ಅಲಿ-ಅಸ್ಗರ್ ಹೆಜಾಜಿ, ಜನರಲ್ ಎಸ್ಕಾಂದರ್ ಮೊಮೇನಿ, ಮೇಜರ್ ಜನರಲ್ ಯಾಹ್ಯಾ ರಹೀಮ್ ಸಫಾವಿ ಅವರಿಗಾಗಿ ಅಮೆರಿಕ ಹುಡುಕಾಟ ನಡೆಸುತ್ತಿದೆ.

ಹತ್ಯೆಯಾದ ಇಬ್ಬರು ಸೇರಿ ಈ ಆರು ನಾಯಕರು ಇಸ್ಲಾಮಿಕ್ ಗಣರಾಜ್ಯದ ಪ್ರಮುಖ ಸ್ತಂಭಗಳಾದ ಧಾರ್ಮಿಕ, ರಾಜಕೀಯ, ಗುಪ್ತಚರ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಮೆರಿಕ–ಇಸ್ರೇಲ್ ಜಂಟಿ ಸೇನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟುವಲ್ಲಿ ಇವರ ತಂತ್ರಗಾರಿಕೆಯೂ ಇದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಅಮೆರಿಕ ಇವರನ್ನು 'ಹೈ-ವ್ಯಾಲ್ಯೂ ಟಾರ್ಗೆಟ್' (ಅತ್ಯಂತ ಪ್ರಮುಖ ಗುರಿಗಳು) ಎಂದು ಪರಿಗಣಿಸಿದೆ.

ಸೈಯದ್ ಮೊಜ್ತಬಾ ಖಮೇನಿ:

ಇರಾನ್ನ ನೂತನ ಸರ್ವೋಚ್ಛ ನಾಯಕ ಸೈಯದ್ ಮೊಜ್ತಬಾ ಖಮೇನಿ ಅವರು ಫೆ. 28ರಂದು ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತರಾದ ಇರಾನ್ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ.

ದೀರ್ಘಕಾಲದವರೆಗೆ ತೆರೆಮರೆಯ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಮೊಜ್ತಬಾ, ಇರಾನ್ನ ಶಕ್ತಿಯುತ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್' (ಐಆರ್ಜಿಸಿ) ನೊಂದಿಗೆ ಅವರು ನಿಕಟ ಸಂಬಂಧ ಹೊಂದಿದ್ದಾರೆ. ಇರಾನ್-ಇರಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಅವರು, ನಂತರ ತಮ್ಮ ತಂದೆಯ ಆಪ್ತ ವಲಯದೊಳಗೆ ಕಾರ್ಯನಿರ್ವಹಿಸುತ್ತಿದ್ದರು. ರಾಜಕೀಯ ಸಂಘಟಕ ಮತ್ತು ಕಟ್ಟುನಿಟ್ಟಿನ ಆಡಳಿತಗಾರ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ.

ಯಾವುದೇ ಅಧಿಕೃತ ಹುದ್ದೆ ಹೊಂದಿಲ್ಲದಿದ್ದರೂ, ಸರ್ವೋಚ್ಛ ನಾಯಕನ ಪರವಾಗಿ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪದ ಮೇಲೆ 2019 ರಲ್ಲಿ ಅಮೆರಿಕ ಅವರ ಮೇಲೆ ನಿರ್ಬಂಧವನ್ನೂ ಹೇರಿತ್ತು.

ಸೈಯದ್ ಅಲಿ-ಅಸ್ಗರ್ ಹೆಜಾಜಿ

ಇರಾನ್ನ ಗುಪ್ತಚರ ದಳದೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿರುವ ಸೈಯದ್ ಅಲಿ-ಅಸ್ಗರ್ ಹೆಜಾಜಿ, ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅತ್ಯಂತ ಆಪ್ತ ಸಹಾಯಕರಲ್ಲಿ ಒಬ್ಬರಾಗಿದ್ದರು.

1980ರ ದಶಕದ ಆರಂಭದಲ್ಲಿ ಗುಪ್ತಚರ ಸಚಿವಾಲಯದ ವಿದೇಶಾಂಗ ವ್ಯವಹಾರಗಳ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅವರು, ಸರ್ವೋಚ್ಚ ನಾಯಕರ ಕಚೇರಿಯಲ್ಲಿ ಉಪ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮಾಜಿ ಸರ್ವೋಚ್ಛ ನಾಯಕ ಖಮೇನಿ ಅವರ ನಿರ್ದೇಶನಗಳನ್ನು ರವಾನಿಸುವುದು, ಉನ್ನತ ಮಟ್ಟದ ನೀತಿಗಳನ್ನು ರೂಪಿಸುವುದು, ಇರಾನ್ನ ಗುಪ್ತಚರ ಹಾಗೂ ಭದ್ರತಾ ಜಾಲಗಳನ್ನು ಸಮನ್ವಯಗೊಳಿಸುವುದು ಇವರ ಮುಖ್ಯ ಜವಾಬ್ದಾರಿಯಾಗಿತ್ತು.

2009ರ 'ಗ್ರೀನ್ ಮೂವ್ಮೆಂಟ್' ಪ್ರತಿಭಟನೆಯನ್ನು ಹತ್ತಿಕ್ಕುವಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆಗಾಗಿ 2013ರಲ್ಲಿ ಅಮೆರಿಕದ ಹಣಕಾಸು ಇಲಾಖೆ ಇವರ ಮೇಲೆ ನಿರ್ಬಂಧ ಹೇರಿತ್ತು. 2019ರಲ್ಲಿ ಐರೋಪ್ಯ ಒಕ್ಕೂಟ ಕೂಡ ಇವರನ್ನು ನಿರ್ಬಂಧಿತ ಪಟ್ಟಿಗೆ ಸೇರಿಸಿತ್ತು. ಮಾರ್ಚ್ 6ರಂದು ನಡೆದ ಇಸ್ರೇಲ್ ದಾಳಿಯಲ್ಲಿ ಹೆಜಾಜಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಜನರಲ್ ಎಸ್ಕಾಂದರ್ ಮೊಮೇನಿ

ರೆವಲ್ಯೂಷನರಿ ಗಾರ್ಡ್ನಲ್ಲಿ ಭದ್ರತಾ ಅಧಿಕಾರಿಯಾಗಿರುವ 64 ವರ್ಷದ ಎಸ್ಕಾಂದರ್ ಮೊಮೇನಿ ಅವರು ಇರಾನ್–ಇರಾಕ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉತ್ತರ ಇರಾನ್ನಲ್ಲಿ ಎಡಪಂಥೀಯ ಗುಂಪುಗಳ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿಯೂ ಭಾಗವಹಿಸಿದ್ದರು.

ನಂತರ ಕಾನೂನು ಜಾರಿ ವಿಭಾಗದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ ಇವರನ್ನು 2004–05ರವರೆಗೆ 'ಪೊಲೀಸ್ ಎಮರ್ಜೆನ್ಸಿ ಸೆಂಟರ್'ನ ಮುಖ್ಯಸ್ಥರಾಗಿ, 2005-08ರವರೆಗೆ ರಾಷ್ಟ್ರೀಯ ಪೊಲೀಸ್ ಕಾರ್ಯಾಚರಣೆಯ ಉಪ ಮುಖ್ಯಸ್ಥರಾಗಿ ಮತ್ತು 2009-14ರವರೆಗೆ ಸಂಚಾರ ಪೊಲೀಸ್ ಮುಖ್ಯಸ್ಥರಾಗಿ ನೇಮಿಸಲಾಗಿತ್ತು.

ಇವರು ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.

ಈ ವರ್ಷ ಆರಂಭದಲ್ಲಿ ಖಮೇನಿ ಆಡಳಿತದ ವಿರುದ್ಧ ನಡೆದ ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕುವಲ್ಲಿ ಇವರ ಪಾತ್ರವೂ ಇದೆ. ಸುಮಾರು 30 ಸಾವಿರ ಇರಾನಿಯನ್ನರು ಈ ವೇಳೆ ಹತರಾಗಿದ್ದಾರೆ ಎಂದು ವರದಿಯಾಗಿದೆ.

ಮೇಜರ್ ಜನರಲ್ ಯಾಹ್ಯಾ ರಹೀಮ್ ಸಫಾವಿ

ರೆವಲ್ಯೂಷನರಿ ಗಾರ್ಡ್ನ ಹಿರಿಯ ಕಮಾಂಡರ್ ಯಾಹ್ಯಾ ರಹೀಮ್ ಸಫಾವಿ, 1979ರ ಇರಾನ್ ಕ್ರಾಂತಿಗಿಂತ ಮೊದಲು ಸಿರಿಯಾದಲ್ಲಿ ಮಿಲಿಟರಿ ತರಬೇತಿ ಪಡೆದಿದ್ದರು. ಇರಾನ್–ಇರಾಕ್ ಯುದ್ಧದ ನಂತರ ಇರಾನ್ನಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದರು.

ಸಫಾವಿ ಅವರು 1985-89ರವರೆಗೆ ರೆವಲ್ಯೂಷನರಿ ಗಾರ್ಡ್ನ ಭೂಸೇನೆಯ ಕಮಾಂಡರ್ ಆಗಿ, 1989-97ರವರೆಗೆ ಉಪ ಮುಖ್ಯಸ್ಥರಾಗಿ ಮತ್ತು 1997-2007ರವರೆಗೆ ರೆವಲ್ಯೂಷನರಿ ಗಾರ್ಡ್ನ ಸರ್ವೋಚ್ಚ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಈ ಕೆಲಸಗಳ ನಡುವೆಯು ಭೂಗೋಳಶಾಸ್ತ್ರದಲ್ಲಿ ಪಿಎಚ್.ಡಿ ಪದವಿಯನ್ನೂ ಪಡೆದಿದ್ದಾರೆ ಎಂದು ವರದಿಯಾಗಿದೆ.

2006ರಲ್ಲಿ ಇರಾನ್ನ ಪರಮಾಣು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇವರನ್ನು ನಿರ್ಬಂಧಿತ ಪಟ್ಟಿಗೆ ಸೇರಿಸಿತ್ತು. ರೆವಲ್ಯೂಷನರಿ ಗಾರ್ಡ್ ಕಮಾಂಡರ್ ಹುದ್ದೆಯಿಂದ ಕೆಳಗಿಳಿದ ನಂತರ, ಸಫಾವಿ ಅವರನ್ನು ಸರ್ವೋಚ್ಚ ನಾಯಕರ ಹಿರಿಯ ಮಿಲಿಟರಿ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಈಗಲೂ ಅದೇ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

ಸೈಯದ್ ಇಸ್ಮಾಯಿಲ್ ಖತೀಬ್

ಮಾರ್ಚ್ 18ರಂದು ಹತರಾದ 64 ವರ್ಷದ ಸೈಯದ್ ಇಸ್ಮಾಯಿಲ್ ಖತೀಬ್ ಅವರು ಇರಾನ್ನ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನೊಂದಿಗೆ ನಿಕಟ ಸಂಬಂಧ ಹೊಂದಿದ್ದ ಇವರು, ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.

ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪದ ಮೇಲೆ 2020ರಲ್ಲಿ ಅಮೆರಿಕದ ಹಣಕಾಸು ಇಲಾಖೆಯಿಂದ ನಿರ್ಬಂಧಕ್ಕೆ ಒಳಗಾಗಿದ್ದ ಖತೀಬ್ ಅವರು, 2021ರಲ್ಲಿ ಇರಾನ್ನ ಗುಪ್ತಚರ ಇಲಾಖೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಅಲಿ ಲಾರಿಜಾನಿ

ಮಾರ್ಚ್ 17ರಂದು ಹತ್ಯೆಯಾದ ಅಲಿ ಲಾರಿಜಾನಿ ಅವರು ಇಸ್ಲಾಮಿಕ್ ರಿಪಬ್ಲಿಕ್ನ ಅತ್ಯಂತ ಅನುಭವಿ ರಾಜಕೀಯ ಮುತ್ಸದ್ದಿಗಳಲ್ಲಿ ಒಬ್ಬರಾಗಿದ್ದರು. ಪ್ರಮುಖ ಧಾರ್ಮಿಕ ಕುಟುಂಬದಲ್ಲಿ ಜನಿಸಿದ ಇವರು, 1980ರ ದಶಕದ ಆರಂಭದಲ್ಲಿ ರೆವಲ್ಯೂಷನರಿ ಗಾರ್ಡ್ನ ಪ್ರಮುಖ ಹುದ್ದೆ ಅಲಂಕರಿಸಿದ್ದರು. ತದನಂತರ ಸೇನಾ ಮತ್ತು ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.