ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಸುಧಾರಣೆಗೆ ಫ್ರಾನ್ಸ್‌ ಕೋರ್ಟ್‌ ಅಸ್ತು

Last Updated 15 ಏಪ್ರಿಲ್ 2023, 10:09 IST
ಅಕ್ಷರ ಗಾತ್ರ

ಪ್ಯಾರಿಸ್‌ (ಎಎಫ್‌ಪಿ): ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್‌ ಅವರು ವ್ಯಾಪಕ ವಿರೋಧದ ನಡುವೆಯೂ ಜಾರಿಗೆ ತಂದ ನೂತನ ಪಿಂಚಣಿ ಯೋಜನೆಗೆ ದೇಶದ ಸಾಂವಿಧಾನಿಕ ನ್ಯಾಯಾಲಯ ಶುಕ್ರವಾರ ಅನುಮೋದನೆ ನೀಡಿದೆ.

ಒಂಬತ್ತು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ನ್ಯಾಯಾಲಯವು, ಮ್ಯಾಕ್ರನ್ ಅವರ ಪಿಂಚಣಿ ಸುಧಾರಣೆಯ ಪ್ರಮುಖ ಅಂಶಗಳನ್ನು ಅನುಮೋದಿಸಿತು. ನೌಕರರ ನಿವೃತ್ತಿ ವಯಸ್ಸನ್ನು 62ರಿಂದ 64ಕ್ಕೆ ಏರಿಸುವುದು ಸೇರಿ ಹಲವು ಶಿಫಾರಸುಗಳ ಜಾರಿಗೆ ಇದು ದಾರಿ ಮಾಡಿಕೊಡಲಿದೆ. ನೂತನ ಪಿಂಚಣಿ ಯೋಜನೆ ವಿರೋಧಿಸಿ ದೇಶದಾದ್ಯಂತ ತಿಂಗಳುಗಟ್ಟಲೆ ಪ್ರತಿಭಟನೆಗಳು ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT