ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಸುದೈವ ಕುಟುಂಬಕಂ’ ಘೋಷಣೆಗೆ ಜಿ7 ಉದ್ಯಮ ಪ್ರತಿನಿಧಿಗಳ ಬೆಂಬಲ

Published 1 ಮೇ 2023, 15:23 IST
Last Updated 1 ಮೇ 2023, 15:23 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಜಿ7 ರಾಷ್ಟ್ರಗಳ ಪ್ರಮುಖ ಉದ್ಯಮಗಳ ಪ್ರತಿನಿಧಿಗಳು ಭಾರತ ಅಧ್ಯಕ್ಷತೆಯ ಜಿ20 ಶೃಂಗದ ಪ್ರಮುಖ ಆಶಯ ಘೋಷಣೆಯಾದ ವಸುದೈವ ಕುಟುಂಬಕಂಗೆ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ) ಬೆಂಬಲ ಸೂಚಿಸಿದ್ದಾರೆ. ಜಾಗತಿಕ ಪರಿಸರ ರಕ್ಷಣೆಗೆ ಹೊಂದಿಕೆಯಾಗುವಂಥ ಸುಸ್ಥಿರ ಅಭಿವೃದ್ಧಿ ಸಾಧಿಸಲು ಈ ಆಶಯವು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ಈ ತಿಂಗಳ ಕೊನೆಯಲ್ಲಿ ಜಿ7 ಶೃಂಗಸಭೆ ನಡೆಯಲಿದೆ. ಅದಕ್ಕೆ ಮುಂಚಿತವಾಗಿ ಏಪ್ರಿಲ್‌ 19, 20ರಂದು ಜಪಾನ್‌, ಇಟಲಿ, ಕೆನಡ, ಫ್ರಾನ್ಸ್‌, ಅಮೆರಿಕ, ಜರ್ಮನಿ ಮತ್ತು ಯುರೋಪ್‌ ಒಕ್ಕೂಟಗಳ ಒಕ್ಕೂಟಗಳ ವಾಣಿಜ್ಯೋದ್ಯಮ ಪ್ರತಿನಿಧಿಗಳ ಬಿ7 ಟೋಕಿಯೊ ಸಮ್ಮೇಳನ ನಡೆದಿತ್ತು. ಈ ವೇಳೆ ಜಿ20 ಶೃಂಗದ ಆಶಯ ಘೋಷಣೆಗೆ ಪ್ರತಿನಿಧಿಗಳು ಬೆಂಬಲ ನೀಡಿದ್ದಾರೆ. 

ಈ ಸಾಲಿನ ಜಿ20 ಶೃಂಗದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ಶೃಂಗದ ಪ್ರಮುಖ ಆಶಯವಾದ ‘ವಸುದೈವ ಕುಟುಂಬಕಂ’ಅನ್ನು (ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ) ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ ವರ್ಷವೇ ಅನಾವರಣಗೊಳಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT