ಮಾಲೆ: ಮಾಲ್ಡೀವ್ಸ್ನ ಫೆಲಿದೂ ದ್ವೀಪದಲ್ಲಿ ಸಂಭವಿಸಿದ ಸ್ಪೀಡ್ ಬೋಟ್ ಅವಘಡದಲ್ಲಿ ರೇಮಂಡ್ ಗ್ರೂಪ್ನ ಮುಖ್ಯಸ್ಥ ಗೌತಮ್ ಸಿಂಘಾನಿಯಾ ಅವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ, ಭಾರತ ಮೂಲದ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶುಕ್ರವಾರ (ಮಾರ್ಚ್ 20) ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಬ್ರಿಟನ್ ಮತ್ತು ರಷ್ಯಾ ಮೂಲದ ಇಬ್ಬರು ಮಹಿಳೆಯರು ಮತ್ತು ಐದು ಭಾರತೀಯರು ಸೇರಿದಂತೆ ಒಟ್ಟು 7 ಮಂದಿ ಬೋಟ್ನಲ್ಲಿದ್ದರು. ಬೋಟ್ ಮಗುಚಿ ಸಮುದ್ರಕ್ಕೆ ಬಿದ್ದಾಗ ರಷ್ಯಾ ಮಹಿಳೆ ಮತ್ತು ನಾಲ್ವರು ಭಾರತೀಯರು ನೀರಿಗೆ ಧುಮುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾಸಿಗರಲ್ಲೊಬ್ಬರಾದ 60 ವರ್ಷದ ಸಿಂಘಾನಿಯಾ ಅವರನ್ನು ರಕ್ಷಿಸಲಾಗಿದೆ. ಅವರಿಗೆ ಸಣ್ಣ ಪ್ರಮಾನದ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಾಪತ್ತೆಯಾಗಿರುವ ಭಾರತೀಯರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈಸ್ಪೀಡ್ಗಾಗಿಯೇ ವಿನ್ಯಾಸಗೊಳಿಸಲಾಗಿದ್ದ ಬೋಟ್ ಅಪಘಾತಕ್ಕೀಡಾಗಿರುವ ಬಗ್ಗೆ ನೌಕಾಪಡೆ ಪರಿಶೀಲನೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.