ಲಂಡನ್: ಲಂಡನ್ನಲ್ಲಿರುವ ವಿನ್ಸ್ಟನ್ ಚರ್ಚಿಲ್ ಜನ್ಮಸ್ಥಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ 18 ಕ್ಯಾರೆಟ್ ಚಿನ್ನದ ಕಮೋಡ್ ಅನ್ನು ಕದ್ದಿದ್ದ ಇಬ್ಬರು ಕಳ್ಳರಿಗೆ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿದೆ.

ಇಟಲಿಯ ಕಲಾವಿದ ಮರಿಝಿಯೊ ಕ್ಯಾಟೆಲನ್ ಎಂಬುವವರು ಸಿದ್ಧಪಡಿಸಿದ್ದ ‘ಅಮೆರಿಕ’ ಎಂಬ ಹೆಸರಿನ ಈ ಚಿನ್ನದ ಶೌಚಾಲಯವು ಸಂಪೂರ್ಣ ಕಾರ್ಯನಿರ್ವಹಿಸುವಂತೆ ಸಿದ್ಧಪಡಿಸಲಾಗಿತ್ತು. ಇಂಗ್ಲೆಂಡ್ನ ದಕ್ಷಿಣ ಭಾಗದಲ್ಲಿರುವ ಚರ್ಚಿಲ್ ಕುಟುಂಬಕ್ಕೆ ಸೇರಿದ ಬ್ಲೆನ್ಹೀಮ್ ಅರಮನೆಯಲ್ಲಿ ಇದನ್ನು ಇಡಲಾಗಿತ್ತು. ಯುನೆಸ್ಕೊ ಪಾರಂಪರಿಕ ತಾಣ ಸ್ಥಾನಮಾನ ಪಡೆದಿದ್ದ ಈ ಸ್ಥಳವು ಪ್ರವಾಸಿಗರ ಮೆಚ್ಚಿನ ಸ್ಥಳಗಳಲ್ಲಿ ಒಂದಾಗಿತ್ತು.

ಕದ್ದ ಎರಡು ಕಾರುಗಳೊಂದಿಗೆ 2019ರ ಸೆ. 14ರ ಸಂಜೆ ಬಂದ ಐವರು ಪುರುಷರ ತಂಡವು, ಅರಮನೆಯ ಕಿಟಕಿ ಹಾಗೂ ಬಾಗಿಲು ಒಡೆದು ಒಳಗೆ ಪ್ರವೇಶಿಸಿ ಚಿನ್ನದ ಕಮೋಡ್ ಅನ್ನು ಹೊತ್ತೊಯ್ದಿದ್ದರು. ಇಷ್ಟೂ ಕೆಲಸವನ್ನು ಐದೇ ನಿಮಿಷದಲ್ಲಿ ಮುಗಿಸಿದ್ದರು.

ಈ ಕಮೋಡ್ ಒಟ್ಟು 98 ಕೆ.ಜಿ. ತೂಕವಿತ್ತು. ಸುಮಾರು ₹55 ಕೋಟಿ ಮೌಲ್ಯದ್ದಾಗಿತ್ತು. ಇದನ್ನು ಸಂಪೂರ್ಣ ತುಂಡುಗಳನ್ನಾಗಿ ಮಾಡಿ, ಪರಸ್ಪರ ಹಂಚಿಕೊಂಡ ಈ ಕಳ್ಳರು ಅವುಗಳನ್ನು ಮಾರಾಟ ಮಾಡಿದ್ದರು. ಹೀಗಾಗಿ ಚಿನ್ನದ ಕಮೋಡ್ನ ಒಂದು ತುಂಡೂ ಮರಳಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೇಮ್ಸ್ ಶೀನ್ (40) ತನ್ನ ತಪ್ಪನ್ನು ನ್ಯಾಯಾಧೀಶರ ಮುಂದೆ ಒಪ್ಪಿಕೊಂಡಿದ್ದಾನೆ. ಮೈಕಲ್ ಜೋನ್ಸ್ (39) ತಪ್ಪು ಕೂಡಾ ಸಾಬೀತಾಗಿದೆ. ಇದೊಂದು ದಿಟ್ಟ ಹಾಗೂ ಲಜ್ಜೆಗೆಟ್ಟ ದರೋಡೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈ ಹಿಂದೆಯೂ ಇವರು ಹಲವು ಕಳ್ಳತನ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಪಟ್ಟಿದ್ದಾರೆ. ಹಿಂದಿನ 20 ವರ್ಷ ಹಾಗೂ ಈಗಿನ 4 ವರ್ಷಗಳ ಜೈಲುಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.