ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾದಲ್ಲಿ ನರಮೇಧ: 57 ಜನರನ್ನು ಗುಂಡಿಕ್ಕಿ ಕೊಂದ ಬಂದೂಕುಧಾರಿಗಳು

Last Updated 8 ಮಾರ್ಚ್ 2022, 14:09 IST
ಅಕ್ಷರ ಗಾತ್ರ

ಕಾನೋ (ನೈಜೀರಿಯಾ): ವಾಯುವ್ಯ ನೈಜೀರಿಯಾದಲ್ಲಿ ನಡೆದ ಘರ್ಷಣೆಯಲ್ಲಿ ಬಂದೂಕುಧಾರಿಗಳು ಸ್ಥಳೀಯ ಆತ್ಮರಕ್ಷಣಾ ಜಾಗೃತ ಗುಂಪಿನ ಕನಿಷ್ಠ 57 ಸದಸ್ಯರನ್ನು ಕೊಂದಿದ್ದಾರೆ ಎಂದು ರಕ್ಷಣಾ ಮೂಲಗಳು ಮತ್ತು ಸ್ಥಳೀಯ ನಿವಾಸಿಗಳು ಮಂಗಳವಾರ ತಿಳಿಸಿದ್ದಾರೆ.

ಕೆಬ್ಬಿ ರಾಜ್ಯದ ಜುರು ಜಿಲ್ಲೆಯಲ್ಲಿ ಸೋಮವಾರ ನಡೆದ ನರಮೇಧವನ್ನು ಪೊಲೀಸರು ಖಚಿತಪಡಿಸಿದ್ದಾರೆ. ಆದರೆ, ಮೃತರ ನಿಖರ ಸಂಖ್ಯೆಯನ್ನು ನೀಡಿಲ್ಲ. 57 ಜನರ ಮೃತದೇಹಗಳು ಸಿಕ್ಕಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ, 62 ಜನರು ಸಾವಿಗೀಡಾಗಿದ್ದಾರೆ ಎಂದು ಇಬ್ಬರು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಡಕಾಯಿತರೆಂದು ಸ್ಥಳೀಯವಾಗಿ ಎಂದು ಕರೆಯಲಾಗುವ ಭಾರೀ ಶಸ್ತ್ರಸಜ್ಜಿತ ಗುಂಪುಗಳು ವಾಯುವ್ಯ ನೈಜೀರಿಯಾದಾದ್ಯಂತ ಸಕ್ರಿಯವಾಗಿವೆ. ಹಳ್ಳಿಗಳ ಮೇಲೆ ದಾಳಿ ಮಾಡುವುದು, ಲೂಟಿ ಮಾಡುವುದು, ಸುಲಿಗೆ ಮಾಡಲೆಂದೇ ಸಾಮೂಹಿಕವಾಗಿ ನಾಗರಿಕರನ್ನು ಅಪಹರಿಸುವುದು ಈ ಗುಂಪಿನ ಕೆಲಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT