ದಾರ್ ಅಲ್–ಬಲಾ/ಪ್ಯಾರಿಸ್: ಗಾಜಾ ಪಟ್ಟಿಯ ಮೇಲಿನ ದಾಳಿ ಮುಂದುವರಿಸಿರುವ ಇಸ್ರೇಲ್, ಹಮಾಸ್ ಬಂಡುಕೋರ ಸಂಘಟನೆಯ ಸೇನಾ ವಿಭಾಗದ ಹೊಸ ನಾಯಕ ಮೊಹಮ್ಮದ್ ಒದೆಹ್ ಹತ್ಯೆ ಮಾಡಿದೆ. ಈ ಬಗ್ಗೆ ಇಸ್ರೇಲ್ ಬುಧವಾರ ಮಾಹಿತಿ ನೀಡಿದೆ. ಒದೆಹ್ ಅವರು ಮೃತಪಟ್ಟಿರುವುದನ್ನು ಕುಟುಂಬಸ್ಥರು ಖಚಿತಪಡಿಸಿದ್ದಾರೆ. ಆದರೆ, ಸಂಘಟನೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಗಾಜಾ ಮೇಲೆ ಮಂಗಳವಾರ ನಡೆಸಿದ ದಾಳಿಯಲ್ಲಿ ಒದೆಹ್ನನ್ನು ಹತ್ಯೆ ಮಾಡಲಾಗಿದೆ. ಈತ 2023ರ ಅಕ್ಟೋಬರ್ನಲ್ಲಿ ಇಸ್ರೇಲ್ ಮೇಲೆ ನಡೆಸಿದ ದಾಳಿಯ ಯೋಜನಾಕರ್ತರಲ್ಲಿ ಒಬ್ಬನಾಗಿದ್ದ’ ಎಂದು ಇಸ್ರೇಲ್ನ ರಕ್ಷಣಾ ಸಚಿವ ಇಸ್ರೇಕ್ ಕಟ್ಜ್ ಮಾಹಿತಿ ನೀಡಿದರು. ಈತ ಹಮಾಸ್ನ ಸೇನಾ ವಿಭಾಗದ ನಾಯಕ ಎನ್ನುವ ಬಗ್ಗೆ ಸಂಘಟನೆಯಾಗಲಿ, ಕುಟುಂಬಸ್ಥರಾಗಲಿ ಸ್ಪಷ್ಟನೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.