ಟೆಹರಾನ್/ ವಾಷಿಂಗ್ಟನ್: ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಲು ಇರಾನ್ಗೆ ನೀಡಿದ್ದ ಗಡುವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಸ್ತರಿಸಿದ್ದಾರೆ. ಇರಾನಿನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಐದು ದಿನಗಳವರೆಗೆ ತಡೆಹಿಡಿದಿರುವುದಾಗಿ ಸೋಮವಾರ ಹೇಳಿದ್ದಾರೆ.

ಹೊರ್ಮುಜ್ ಜಲಸಂಧಿ ಮುಕ್ತಗೊಳಿಸಲು ಈ ಹಿಂದೆ ವಿಧಿಸಿದ್ದ 48 ಗಂಟೆಗಳ ಗಡುವು ಕೊನೆಗೊಳ್ಳಲು ಕೆಲವೇ ಗಂಟೆಗಳಿರುವಾಗ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಈ ಘೋಷಣೆ ಮಾಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿದೆ.

‘ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಕುರಿತು’ ಇರಾನ್ ಮತ್ತು ಅಮೆರಿಕ ಕಳೆದ ಎರಡು ದಿನಗಳಿಂದ ‘ಉತ್ತಮ ಮತ್ತು ಸಕಾರಾತ್ಮಕ’ ಮಾತುಕತೆ ನಡೆಸಿವೆ’ ಎಂದೂ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ‘ಮಾತುಕತೆ ವಾರವಿಡೀ ಮುಂದುವರಿಯಲಿದೆ. ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಯನ್ನು ತಡೆಹಿಡಿದಿರುವ ನಿರ್ಧಾರವು ಈ ಮಾತುಕತೆಯ ಯಶಸ್ಸನ್ನು ಅವಲಂಬಿಸಿರುತ್ತದೆ’ ಎಂದಿದ್ದಾರೆ.

ಆದರೆ ಟ್ರಂಪ್ ಹೇಳಿಕೆಯನ್ನು ಇರಾನ್ ಸಾರಾಸಗಟಾಗಿ ತಳ್ಳಿಹಾಕಿದ್ದು, ‘ಅಮೆರಿಕದೊಂದಿಗೆ ನೇರವಾಗಿ ಅಥವಾ ಮಧ್ಯಸ್ಥಿಕೆದಾರರ ಮೂಲಕ ಯಾವುದೇ ಮಾತುಕತೆ ನಡೆದಿಲ್ಲ’ ಎಂದು ಹೇಳಿದೆ.

ಹೊರ್ಮುಜ್ ಜಲಸಂಧಿಯನ್ನು ಎಲ್ಲ ಹಡಗುಗಳಿಗೆ ‘ಸಂಪೂರ್ಣ’ ಮುಕ್ತಗೊಳಿಸಲು ವಿಫಲವಾದರೆ ಇರಾನಿನ ಎಲ್ಲ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸಲಾಗುವುದು ಎಂದು ಟ್ರಂಪ್ ಶನಿವಾರ ಎಚ್ಚರಿಸಿದ್ದರು. ಅವರು ವಿಧಿಸಿದ್ದ ಎರಡು ದಿನಗಳ ಗಡುವು ಮಂಗಳವಾರ ಬೆಳಗಿನ ಜಾವ 3ರ ಸುಮಾರಿಗೆ (ಟೆಹರಾನ್ ಕಾಲಮಾನ) ಕೊನೆಗೊಳ್ಳಲಿತ್ತು.

ತನ್ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸಿದರೆ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸುವುದಾಗಿ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ (ಐಆರ್ಜಿಸಿ) ಎಚ್ಚರಿಸಿತ್ತು. ಮಾತ್ರವಲ್ಲ, ತಮ್ಮ ಗುರಿಗಳ ವಿವರಗಳನ್ನು ಒಳಗೊಂಡ ಇನ್ಫೋಗ್ರಾಫ್ಅನ್ನು ಸೋಮವಾರ ಬಿಡುಗಡೆಗೊಳಿಸಿತ್ತು.

ಇಸ್ರೇಲ್ನ ಎರಡು ಅತಿದೊಡ್ಡ ವಿದ್ಯುತ್ ಸ್ಥಾವರಗಳಾದ ಒರೊತ್ ರಬಿನ್ ಮತ್ತು ರುಟೆನ್ಬರ್ಗ್ ಹಾಗೂ ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ಕುವೈತ್ನಲ್ಲಿರುವ ವಿದ್ಯುತ್ ಸ್ಥಾವರಗಳು ತಮ್ಮ ಗುರಿಯಾಗಲಿವೆ ಎಂದು ‘ವಿದ್ಯುತ್ಗೆ ಗುಡ್ಬೈ’ ಎಂಬ ಶೀರ್ಷಿಕೆಯುಳ್ಳ ಪ್ರಕಟಣೆಯಲ್ಲಿ ಹೇಳಿತ್ತು.

ಇಸ್ರೇಲ್ಗೆ ಮಾಹಿತಿ:

ಇರಾನಿನ ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಯನ್ನು ತಡೆಹಿಡಿದಿರುವ ತನ್ನ ನಿರ್ಧಾರವನ್ನು ಅಮೆರಿಕವು ಇಸ್ರೇಲ್ ಜತೆ ಹಂಚಿಕೊಂಡಿದೆ. ಆದ್ದರಿಂದ ಇಸ್ರೇಲ್ ಸೇನೆ ಕೂಡಾ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬೆಳವಣಿಗೆಯ ಕುರಿತು ಇಸ್ರೇಲ್ ಪ್ರಧಾನಿ ಕಚೇರಿ ಯಾವುದೇ ಹೇಳಿಕೆ ನೀಡಿಲ್ಲ.

‘ಗೌರವಾನ್ವಿತ ವ್ಯಕ್ತಿ ಜತೆ ಮಾತುಕತೆ’

ಟ್ರಂಪ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ‘ಇರಾನ್ ಜತೆ ಮಾತುಕತೆ’ ನಡೆಯುತ್ತಿದೆ ಎಂದಷ್ಟೇ ಹೇಳಿದರು. ಮಾತುಕತೆ ಕುರಿತ ಹೆಚ್ಚಿನ ಮಾಹಿತಿಯನ್ನು ಆ ಬಳಿಕ ಫ್ಲಾರಿಡಾದಲ್ಲಿ ಸುದ್ದಿಗಾರರ ಜತೆ ಹಂಚಿಕೊಂಡರು.

* ‘ಪ್ರಮುಖ ಅಂಶಗಳನ್ನು ಒಳಗೊಂಡ ಒಪ್ಪಂದ’ದ ಕುರಿತು ಅಮೆರಿಕ–ಇರಾನ್ ಮಾತುಕತೆ ನಡೆಸುತ್ತಿದೆ. ಯುದ್ಧ ಕೊನೆಗೊಳಿಸಲು ಶೀಘ್ರದಲ್ಲೇ ಒಪ್ಪಂದ ಅಂತಿಮಗೊಳ್ಳಲಿದೆ.

* ಸ್ಟೀವ್ ವಿಟ್ಕಾಫ್ ಮತ್ತು ಜರೆಡ್ ಕುಶ್ನರ್ ಅವರು ಇರಾನ್ನ ಪ್ರತಿನಿಧಿಗಳ ಜತೆ ಭಾನುವಾರ ಮಾತನಾಡಿದ್ದು ಮಾತುಕತೆ ಮುಂದುವರಿಯಲಿದೆ.

* ಇರಾನ್ನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಜತೆ ಮಾತುಕತೆ ನಡೆಸುತ್ತಿಲ್ಲ.

* ‘ಅತ್ಯಂತ ಗೌರವಾನ್ವಿತ ವ್ಯಕ್ತಿ ಮತ್ತು ಇರಾನ್ನ ನಾಯಕ’ ಎಂದು ನಾವು ನಂಬಿರುವ ವ್ಯಕ್ತಿಯೊಂದಿಗೆ ಈ ಮಾತುಕತೆ ನಡೆಯುತ್ತಿದೆ.

* ಇರಾನ್ನಲ್ಲಿ ‘ಆಡಳಿತದ ಬದಲಾವಣೆ’ ಪ್ರಕ್ರಿಯೆ ಪರಿಣಾಮಕಾರಿಯಾಗಿ ಜಾರಿಯಲ್ಲಿದೆ.

ಎಚ್ಚರಿಕೆಗೆ ಅಮೆರಿಕ ಹೆದರಿದೆ: ಇರಾನ್

ದುಬೈ: ‘ನಮ್ಮ ಎಚ್ಚರಿಕೆಗೆ ಹೆದರಿ ಅಮೆರಿಕದ ಅಧ್ಯಕ್ಷರು ದಾಳಿ ನಡೆಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ’ ಎಂದು ಟ್ರಂಪ್ ಅವರ ಗಡುವು ವಿಸ್ತರಿಸುವ ನಿರ್ಧಾರದ ಬಗ್ಗೆ ಇರಾನ್ ಪ್ರತಿಕ್ರಿಯಿಸಿದೆ.

‘ಟ್ರಂಪ್ ಹೇಳಿರುವಂತೆ ಅಮೆರಿಕದ ಜತೆ ಯಾವುದೇ ನೇರ ಅಥವಾ ಪರೋಕ್ಷ ಮಾತುಕತೆ ನಡೆದಿಲ್ಲ’ ಎಂದು ಐಆರ್ಜಿಸಿಯ ಅಧಿಕಾರಿಯನ್ನು ಉಲ್ಲೇಖಿಸಿ ‘ಫಾರ್ಸ್’ ಮತ್ತು ‘ತಸ್ನೀಮ್’ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

‘ಯುದ್ಧ ಪ್ರಾರಂಭವಾದಾಗಿನಿಂದಲೂ ಕೆಲವು ಮಧ್ಯಸ್ಥಿಕೆದಾರರು ಮಾತುಕತೆಗೆ ಬರುವಂತೆ ನಮಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಆದರೆ ಇರಾನ್ ತನ್ನ ಗುರಿ ಈಡೇರುವವರೆಗೂ ಪ್ರತಿರೋಧವನ್ನು ಮುಂದುವರಿಸುತ್ತದೆ’ ಎಂದು ‘ತಸ್ನೀಮ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ‘ಯಾವುದೇ ಮಾತುಕತೆ ನಡೆದಿಲ್ಲ ಮತ್ತು ನಡೆಯುತ್ತಿಲ್ಲ. ಈ ರೀತಿಯ ಮನೋಯುದ್ಧದ ಮೂಲಕ ಹೊರ್ಮುಜ್ ಜಲಸಂಧಿಯನ್ನು ಅಥವಾ ಜಾಗತಿಕ ತೈಲ ಮಾರುಕಟ್ಟೆಗಳನ್ನು ಸಹಜ ಸ್ಥಿತಿಗೆ ತರಲು ಸಾಧ್ಯವಿಲ್ಲ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.