ಟೆಹರಾನ್: ಭಾರತದ ಧ್ವಜ ಇರುವ, ಎಲ್ಪಿಜಿ ಹೊತ್ತ ಎರಡು ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಇರಾನ್ ಅಧಿಕಾರಿಗಳು ಅನುಮತಿ ನೀಡಿದ್ದಾರೆ.

ಶಿವಾಲಿಕ್ ಎಂಬ ಹಡಗು ಹೊರ್ಮುಜ್ ಜಲಸಂಧಿ ದಾಟಿದ್ದು, ಸದ್ಯ ಒಮಾನ್ ಕೊಲ್ಲಿಯನ್ನು ತಲುಪಿದೆ. ಇದು ಮಾರ್ಚ್ 21ರಂದು ಭಾರತ ತಲುಪಲಿದೆ.

ಬಂದರು ಸಚಿವಾಲಯದ ಮಾಹಿತಿ ಪ್ರಕಾರ, ಪರ್ಷಿಯನ್ ಕೊಲ್ಲಿಯಲ್ಲಿರುವ ಹಡಗು ಮತ್ತು ನಾವಿಕರ ರಕ್ಷಣೆಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಭಾರತದ ಧ್ವಜ ಹೊಂದಿರುವ 24 ಹಡಗುಗಳು ಮತ್ತು 668 ನಾವಿಕರು ಸದ್ಯ ಪರ್ಷಿಯಾದ ಕೊಲ್ಲಿಯಲ್ಲಿದ್ದಾರೆ. 76 ನಾವಿಕರು ಮೂರು ಹಡಗುಗಳು ಸದ್ಯ ಹೊರ್ಮುಜ್ ಜಲಸಂಧಿಯ ಪೂರ್ವ ಭಾಗದಲ್ಲಿವೆ ಎಂದು ಹೇಳಿದೆ.

ಭಾರತದ ಹಡಗುಗಳು ಮತ್ತು ಅದರ ಸಿಬ್ಬಂದಿ ಕುರಿತು ನಿರಂತರ ಮಾಹಿತಿ ಕಲೆಹಾಕಲಾಗುತ್ತಿದೆ. 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ಈವರೆಗೂ 2,425 ಕರೆಗಳು ಮತ್ತು 4,441 ಇಮೇಲ್ಗಳು ನಿಯಂತ್ರಣ ಕೊಠಡಿಗೆ ತಲುಪಿವೆ. ಸಂಕಷ್ಟಕ್ಕೆ ಸಿಲುಕಿದ ಭಾರತದ 223 ನಾವಿಕರನ್ನು ರಕ್ಷಿಸಲಾಗಿದೆ ಎಂದೂ ಮಾಹಿತಿ ನೀಡಿದೆ ಎಂದು ಎಎನ್ಐ ವರದಿ ಮಾಡಿದೆ.

ಭಾರತದಲ್ಲಿರುವ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಅವರು ಕೆಲ ಗಂಟೆಗಳ ಮೊದಲು ಮಾಹಿತಿ ನೀಡಿ, ‘ಭಾರತದ ಹಡಗುಗಳು ಹೊರ್ಮುಜ್ ಜಲಸಂಧಿ ದಾಟಲು ಟೆಹಾರನ್ ಸುರಕ್ಷಿತ ಅವಕಾಶ ನೀಡಲಿದೆ. ಭಾರತವು ಇರಾನ್ ಅತ್ಯಂತ ದೀರ್ಘಕಾಲದ ಮಿತ್ರ ರಾಷ್ಟ್ರವಾಗಿದೆ. ಎರಡೂ ರಾಷ್ಟ್ರಗಳ ಹಿತ ಒಂದೇ ಆಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಇದರ ಫಲಿತಾಂಶವನ್ನು ನೀವು ಕಾಣಬಹುದು’ ಎಂದಿದ್ದರು.

ಇಸ್ರೇಲ್ ಹಾಗೂ ಅಮೆರಿಕವು ಇರಾನ್ ವಿರುದ್ಧ ಫೆಬ್ರುವರಿ 28ರಂದು ಜಂಟಿಯಾಗಿ ದಾಳಿ ನಡೆಸಿ, ಅದರ ಸರ್ವೋಚ್ಚ ನಾಯಕ 86 ವರ್ಷದ ಅಯತೊಲ್ಲ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದ್ದವು. ಅದರ ಬೆನ್ನಲ್ಲೇ, ಇರಾನ್ ಪ್ರತಿದಾಳಿ ಆರಂಭಿಸಿತು. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತಲೆದೋರಿದೆ. ಅದು ಜಾಗತಿಕ ಇಂಧನ ಪೂರೈಕೆ ಮೇಲೆ ನೇರ ಪರಿಣಾಮ ಬೀರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.