ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿಂದ ಸಮಾಧಾನವಾಗುವುದು
Published 2 ಅಕ್ಟೋಬರ್ 2023, 23:30 IST
ಪ್ರಜಾವಾಣಿ ವಿಶೇಷ
author
ಮೇಷ
ಜನಗಳ ಕೆಟ್ಟ ದೃಷ್ಟಿಯ ಫಲವಾಗಿ ಜತೆಯಲ್ಲಿ ಸೋಮಾರಿತನ ಸೇರಿಕೊಂಡು ಉದ್ಯೋಗ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು. ವ್ಯಾಪಾರದಲ್ಲಿ ಉಂಟಾಗುವ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವಿರಿ.
ವೃಷಭ
ಲಾಭ ನಿರೀಕ್ಷೆಯಿಲ್ಲದೆ ಮಾಡಿದ ಕೆಲಸದಲ್ಲೂ ಅನಿರೀಕ್ಷಿತ ಲಾಭವಾಗಿರುವುದರಿಂದ ಸಂತೋಷ ಆಗುವುದು. ಶಿಕ್ಷಕ ವೃತ್ತಿಯಲ್ಲಿ ಸಾಧನೆ ತೋರಿ ಪ್ರಶಸ್ತಿ ಪಡೆಯುವಂತಾಗಲಿದೆ. ಸುಗಂಧ ದ್ರವ್ಯದ ಮಾರಾಟದಲ್ಲಿ ಲಾಭ ಸಿಗಲಿದೆ.
ಮಿಥುನ
ವಿದ್ಯಾರ್ಥಿಗಳು ತಮ್ಮ ವಿಶೇಷ ಅಧ್ಯಯನ ಕ್ಷೇತ್ರಗಳಲ್ಲಿ ಮುಂದುವರಿಯಲು ಬಹಳಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ. ಮನಸ್ಸಿನಲ್ಲಿ ಹಲವು ದಿನಗಳಿಂದ ಕಾಡುತ್ತಿರುವ ಸಮಸ್ಯೆಗಳಿಗೆ ಇಂದು ಉತ್ತರ ಸಿಗುವುದು.
ಕರ್ಕಾಟಕ
ಸೇವಕ ವರ್ಗದವರಲ್ಲಿ ಪ್ರೀತಿ ವಿಶ್ವಾಸದಿಂದ ವ್ಯವಹರಿಸಿ. ಸೇವಕ ವರ್ಗದ ಜನರ ಮೇಲಿನ ದೃಷ್ಟಿಕೋನ ಬದಲಾಯಿಸುವುದರಿಂದ ಹೆಚ್ಚಿನ ಅನುಕೂಲ. ಸ್ಟೇಷನರಿ ವ್ಯಾಪಾರ ಕೈಗೊಳ್ಳುವ ಬಗ್ಗೆ ಮಾತುಕತೆ ನಡೆಸುವಿರಿ.
ಸಿಂಹ
ಕೈಗಾರಿಕೋದ್ಯಮಿಗಳು ಲಾಭದಾಯಕ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಬುದ್ಧಿವಂತಿಕೆಯನ್ನು ಉಪಯೋಗಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿಂದ ಸಮಾಧಾನವಾಗುವುದು.
ಕನ್ಯಾ
ಕಾರ್ಮಿಕರು ಸಹನಶೀಲರಾಗಿ ಕೆಲಸದ ಬಗ್ಗೆ ಸರಿಯಾಗಿ ಗಮನವಹಿಸುವುದರಿಂದ ಯಶಸ್ಸು ಪಡೆಯಬಹುದು. ಗೃಹೋಪಕರಣಗಳ ಖರೀದಿ ಅಥವಾ ನೂತನ ವಸ್ತ್ರವನ್ನು ಖರೀದಿ ಮಾಡುವ ಯೋಗವಿದೆ.
ತುಲಾ
ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಹೊಂದಿರುವವರಿಗೆ ವಿಶೇಷ ರೀತಿಯ ಉತ್ತಮ ಅವಕಾಶಗಳ ಜೊತೆಗೆ ಸ್ವಂತ ಉದ್ಯಮ ಸ್ಥಾಪಿಸುವ ಯೋಚನೆ ಹಾಗೂ ಅದಕ್ಕೆ ಬೇಕಾದ ಆರ್ಥಿಕ ಸಹಾಯದ ಜತೆಯಲ್ಲಿ ಜನಬಲ ಸಿಗಲಿದೆ.
ವೃಶ್ಚಿಕ
ಕೈಗಾರಿಕೋದ್ಯಮಿಗಳು ತಮ್ಮ ಕಂಪನಿಯ ತಯಾರಿಕಾ ಘಟಕದ ಅಭಿವೃದ್ಧಿಯನ್ನು ಮಾಡುವ ಬಗ್ಗೆ ಗಮನಹರಿಸಬಹುದು. ದ್ರವರೂಪದ ವಸ್ತುವಿನ ಅದರಲ್ಲೂ ತೈಲಗಳ ಮಾರಾಟದಲ್ಲಿ ಅಧಿಕ ಲಾಭವಿರುವುದು.
ಧನು
ಕಬ್ಬಿಣ ಹಾಗೂ ಸಿಮೆಂಟ್ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರದೊಂದಿಗೆ ಲಾಭ ಸಿಗಬಹುದು. ಮೆಚ್ಚಿದವರ ಜತೆಗೆ ಮದುವೆಯಾಗಲು ಮನೆಯ ಹಿರಿಯರಿಂದ ಒಪ್ಪಿಗೆ ಸಿಗಲಿದೆ. ಫೈನಾನ್ಸ್‌ನವರಿಗೆ ಆದಾಯ ವೃದ್ಧಿಯಾಗುತ್ತದೆ.
ಮಕರ
ಸಿದ್ಧ ಉಡುಪುಗಳ ಮಾರಾಟಗಾರರಿಗೆ ತಮ್ಮ ರಫ್ತು ವ್ಯಾಪಾರಗಳಿಂದ ಹೆಚ್ಚಿನ ಲಾಭ ಪಡೆಯಬಹುದು. ಅನವಶ್ಯಕ ತಿರುಗಾಟವಿದ್ದರೂ ರಿಯಲ್ ಎಸ್ಟೇಟ್ ಏಜೆಂಟರಿಗೆ ಉತ್ತಮವಾದ ಆದಾಯ ಬರುವುದು.
ಕುಂಭ
ಸರ್ಕಾರಿ ಅಧಿಕಾರಿಗಳಲ್ಲಿ ವಿನಯ ಪೂರ್ವಕವಾಗಿ ನಡೆದುಕೊಳ್ಳುವುದರಿಂದ  ಕೆಲಸ ಸರಾಗವಾಗಿ ನಡೆಯುವುದು. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅನಿವಾರ್ಯವಾಗುತ್ತದೆ.
ಮೀನ
ಸಂಘ ಸಂಸ್ಥೆಗಳ ಜವಾಬ್ದಾರಿ ನೋಡುವವರಿಗೆ ನಾಲ್ಕಾರು ಮಾತು ಕೇಳಬೇಕಾಗುವುದು.  ಅತೀವ ಪ್ರಯತ್ನದ ಫಲವಾಗಿ ಹೊರ ದೇಶದಲ್ಲಿ ಉದ್ಯೋಗ ದೊರಕಿಸಿಕೊಳ್ಳುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ.