ನವದೆಹಲಿ: ಅಮೆರಿಕ ಹಾಗೂ ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿರುವ ಬೆನ್ನಲ್ಲೇ ಇರಾನ್ನಿಂದ ಆದಷ್ಟು ಬೇಗನೇ ನಿರ್ಗಮಿಸುವಂತೆ ಭಾರತೀಯ ನಾಗರಿಕರಿಗೆ ನಿರ್ದೇಶನ ನೀಡಲಾಗಿದೆ.

ಯುದ್ಧಪೀಡಿತ ಪ್ರದೇಶದಿಂದ ಸಾಧ್ಯವಾದಷ್ಟು ಬೇಗ ನಿರ್ಗಮಿಸುವಂತೆ ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
.ಸಂಪೂರ್ಣ ಹಾನಿ ಭರಿಸಬೇಕು: ಅಮೆರಿಕ ಎದುರು ಇರಾನ್ ಇಟ್ಟಿರುವ 10 ಷರತ್ತುಗಳಿವು.ಕದನ ವಿರಾಮ: ಇರಾನ್ ಮೇಲೆ ಎರಡು ವಾರ ಬಾಂಬ್ ಹಾಕುವುದಿಲ್ಲ ಎಂದ ಟ್ರಂಪ್.
ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ಇರಾನ್ನಲ್ಲಿರುವ ಭಾರತೀಯ ನಾಗರಿಕರು ಆದಷ್ಟು ಬೇಗನೇ ನಿರ್ಗಮಿಸಬೇಕು. ಅಲ್ಲದೆ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸದೆ ಯಾವುದೇ ಅಂತರರಾಷ್ಟ್ರೀಯ ಗಡಿಯನ್ನು ದಾಟಲು ಯತ್ನಿಸಬಾರದು ಎಂದು ಹೇಳಿದೆ.

ಈ ಸಂಬಂಧ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಕೊಡಲಾಗಿದೆ.

ಗಡುವು ಮೀರಿದರೆ ಇರಾನ್ ಸರ್ವನಾಶ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಎಚ್ಚರಿಕೆ ನೀಡಿದ್ದರು. ಇದಾದ ಬೆನ್ನಲ್ಲೇ 48 ತಾಸು ಇದ್ದಲ್ಲೇ ಇರುವಂತೆಯೇ ಭಾರತೀಯರಿಗೆ ತುರ್ತು ಸಲಹೆ ನೀಡಲಾಗಿತ್ತು.

ಈ ನಡುವೆ ಅನಿರೀಕ್ಷಿತವೆಂಬಂತೆ ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿತ್ತು. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಅಲ್ಪ ಶಮನಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.