ನವದೆಹಲಿ (ಪಿಟಿಐ): ಭಾರತೀಯ ಪ್ರದೇಶಗಳ ಹೆಸರುಗಳನ್ನು ಬದಲಿಸುವ ಮೂಲಕ ಅಥವಾ ಆಧಾರರಹಿತ ನಿರೂಪಣೆಗಳನ್ನು ಸೃಷ್ಟಿಸುವ ಮೂಲಕ ವಾಸ್ತವವನ್ನು ಬದಲಿಸಲು ಚೀನಾದಿಂದ ಸಾಧ್ಯವಿಲ್ಲ. ಆದರೆ, ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ತಿಳಿಗೊಳಿಸುವ ಪ್ರಯತ್ನಕ್ಕೆ ಚೀನಾದ ಈ ಕ್ರಮಗಳಿಂದ ತೊಡಕಾಗಬಹುದು ಎಂದು ಭಾರತ ಭಾನುವಾರ ಹೇಳಿದೆ.

‘ಭಾರತದ ಭೂ ಪ್ರದೇಶಗಳಿಗೆ ಚೀನಾ ಹೊಸ ಹೆಸರುಗಳನ್ನು ಇಡುವಂತಹ ಯಾವುದೇ ಪ್ರಯತ್ನ ಗಳನ್ನು ಮಾಡಿದರೂ ಭಾರತ ಅದನ್ನು ಖಂಡಿತವಾಗಿ ವಿರೋಧಿಸುತ್ತದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಜತೆಗೆ ‘ಚೀನಾದ ಇಂಥ ಪ್ರಯತ್ನಗಳು ವಾಸ್ತವವನ್ನು ಬದಲಿಸಲು ಸಾಧ್ಯವಿಲ್ಲ. ಅರುಣಾಚಲ ಪ್ರದೇಶವೂ ಸೇರಿದಂತೆ ಭಾರತದ ಎಲ್ಲಾ ಭೂ ಪ್ರದೇಶಗಳು ಹಿಂದೆಯೂ, ಈಗಲೂ ಹಾಗೂ ಮುಂದೆಯೂ ಭಾರತದ ಅವಿಭಾಜ್ಯ ಅಂಗವಾಗಿವೆ ಹಾಗೆಯೇ ಉಳಿದಿರುತ್ತವೆ’ ಎಂದೂ ಜೈಸ್ವಾಲ್ ಪ್ರತಿಪಾದಿಸಿದ್ದಾರೆ. ಅಲ್ಲದೇ, ಉಭಯ ರಾಷ್ಟ್ರಗಳ ಸಂಬಂಧಗಳನ್ನು ಹದಗೆಡಿಸುವ ಕೃತ್ಯಗಳಿಂದ ಚೀನಾ ದೂರ ಸರಿಯಬೇಕು ಎಂದೂ ಅವರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-51-608914455

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.