ಬೀಜಿಂಗ್ : ಭಾರತದೊಂದಿಗಿನ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಚೀನಾದ ನೀತಿ ಬದಲಾಗಿಲ್ಲ ಎಂದು ಚೀನಾ ತಿಳಿಸಿದೆ. ಆದರೆ, ಅರುಣಾಚಲಪ್ರದೇಶದ ಹಲವು ಸ್ಥಳಗಳಿಗೆ ಹೊಸ ಹೆಸರು ನಾಮಕರಣ ಮಾಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡಿದೆ.

‘ಭಾರತದ ಭೂಪ್ರದೇಶಗಳಿಗೆ ಕಾಲ್ಪನಿಕ ಹೆಸರುಗಳನ್ನು ನಾಮಕರಣ ಮಾಡಿದ ಚೀನಾದ ನಿಲುವನ್ನು ಭಾರತವು ಬಲವಾಗಿ ಖಂಡಿಸಿತ್ತು. ಆಧಾರರಹಿತವಾಗಿ ಇಂತಹ ನಿರೂಪಣೆಗಳನ್ನು ಸೃಷ್ಟಿಸುವುದರಿಂದ, ನಿರಾಕರಿಸಲಾಗದ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ. ಇದರಿಂದ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯದ ಮೇಲೂ ಪರಿಣಾಮ ಬೀರಲಿದೆ’ ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರಣದೀರ್ ಜೈಸ್ವಾಲ್ ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಗುವೊ ಜಿಯಕುನ್, ‘ಝಂಗ್ನಾನ್ ಪ್ರದೇಶವು ಚೀನಾದ ಭೂಪ್ರದೇಶವಾಗಿದೆ. ಭಾರತವು ಅಕ್ರಮವಾಗಿ ಸ್ಥಾಪಿಸಿರುವ ಅರುಣಾಚಲ ಪ್ರದೇಶವನ್ನು ಚೀನಾವು ಮಾನ್ಯ ಮಾಡುವುದಿಲ್ಲ’ ಎಂದು ತಿಳಿಸಿದ್ದಾರೆ.

ಅರುಣಾಚಲಪ್ರದೇಶ ರಾಜ್ಯಕ್ಕೆ ಚೀನಾವು ಝಂಗ್ನಾನ್ ಎಂದೇ ಕರೆಯುತ್ತದೆ. ಈ ಭಾಗವು ಟಿಬೆಟ್ನ ದಕ್ಷಿಣ ಭಾಗ ಎಂಬುದು ಚೀನಾದ ವಾದ.

‘ಝಂಗ್ನಾನ್ ಪ್ರದೇಶದ ಕೆಲವು ಸ್ಥಳಗಳಿಗೆ ಪ್ರಮಾಣಿತವಾದ ಹೆಸರು ನಾಮಕರಣ ಮಾಡಲು ಚೀನಾ ಸಾರ್ವಭೌಮ ಅಧಿಕಾರ ಹೊಂದಿದೆ. ಚೀನಾ ಹಾಗೂ ಭಾರತದ ನಡುವಿನ ಸಂಬಂಧವು ಸಾಮಾನ್ಯವಾಗಿ ಸ್ಥಿರವಾಗಿದೆ. ಈ ವಿಚಾರದಲ್ಲಿ ಚೀನಾದ ಬದ್ಧತೆಯು ಸುಧಾರಣೆಯಾಗುತ್ತಿದ್ದು, ಬೆಳವಣಿಗೆಯಾಗುತ್ತಿದೆ. ಉಭಯ ರಾಷ್ಟ್ರಗಳು ಇದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ದ್ವಿಪಕ್ಷೀಯ ಸಂಬಂಧ ವೃದ್ಧಿ ನಿಟ್ಟಿನಲ್ಲಿ ಹೆಚ್ಚು ಅನುಕೂಲಕರವಾಗಿ ಕೆಲಸ ಮಾಡುತ್ತಿವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.