ನವದೆಹಲಿ: ಭಾರತವು ಒಂದು ಮಹಾನ್ ದೇಶವಾಗಿದ್ದು, ನನ್ನ ಅತ್ಯಂತ ಆಪ್ತ ಸ್ನೇಹಿತ ಅಲ್ಲಿನ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ ಎಂದು ಅಮೆರಿಕ ರಾಯಭಾರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಭಾರತ ಮತ್ತು ಚೀನಾ ವಿರುದ್ಧ ಜನಾಂಗೀಯ ನಿಂದನೆ ಇರುವ ಪತ್ರವನ್ನು ಟ್ರಂಪ್ ಅವರು ಟ್ರುತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದವನ್ನು ತಣ್ಣಾಗಾಗಿಸಲು ಇದೀಗ ಅಮೆರಿಕ ಪ್ರಯತ್ನಿಸಿದೆ.

‘ಭಾರತ ಮಹಾನ್’ ಹೇಳಿಕೆಯನ್ನು ಟ್ರಂಪ್ ಅವರು ಎಲ್ಲಿ, ಯಾವಾಗ ನೀಡಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ವಕ್ತಾರರು ಉತ್ತರಿಸಿಲ್ಲ.

ಭಾರತವನ್ನು ‘ನರಕಕೂಪ’ ಎಂದಿದ್ದ ಟ್ರಂಪ್:

ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವ ಹಕ್ಕಿನ ಕುರಿತಂತೆ ನಿರೂಪಕ ಮೈಕೆಲ್ ಸ್ಯಾವೇಜ್ ಅವರು ಭಾರತ, ಚೀನಾ ಮತ್ತು ಇತರ ಕೆಲವು ದೇಶಗಳನ್ನು ‘ನರಕಕೂಪ’ ಎಂದು ಕರೆದು ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ಅನ್ನು ಟ್ರಂಪ್ ಮರು ಹಂಚಿಕೊಂಡಿದ್ದರು.

‘ಏಷ್ಯಾದ ಎರಡು ದೇಶಗಳಿಂದ(ಚೀನಾ, ಭಾರತ) ಇಲ್ಲಿಗೆ ಬರುವ ಜನರು ಮಗುವನ್ನು ಹೆರುತ್ತಾರೆ. ಮಗು ಜನ್ಮಸಿದ್ಧವಾಗಿ ಪೌರತ್ವ ಪಡೆಯುತ್ತದೆ. ಬಳಿಕ, ಚೀನಾ, ಭಾರತ ಮತ್ತು ಇತರ ‘ನರಕಕೂಪ’ಗಳಿಂದ ಸಂಪೂರ್ಣ ಕುಟುಂಬವನ್ನು ಇಲ್ಲಿಗೆ ಕರೆತಂದು ನೆಲೆಸುತ್ತಾರೆ’ ಎಂದು ಅವರು ದೂಷಿಸಿದ್ದರು.

ವಿವಾದಕ್ಕೆ ಸಂಬಂಧ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ಈ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.