ಜೆರುಸಲೇಮ್: ಇಸ್ರೇಲ್ನ ಪ್ರಮುಖ ಸಣ್ಣ ಶಸ್ತ್ರಾಸ್ತ್ರ ತಯಾರಿಕ ಕಂಪನಿಯು, ತಂತ್ರಜ್ಞಾನ ವರ್ಗಾವಣೆಯೊಂದಿಗೆ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಮೊದಲ ಹಂತದ ಲಘು ಮಷಿನ್ ಗನ್ಗಳನ್ನು (ಎಲ್ಎಮ್ಜಿಎಸ್) ಭಾರತಕ್ಕೆ ಹಸ್ತಾಂತರಿಸಿದೆ.

ಒಟ್ಟು 41,000 ಗನ್ಗಳ ಪೂರೈಕೆಗೆ ‘ಇಸ್ರೇಲ್ ವೆಪನ್ಸ್ ಇಂಡಸ್ಟ್ರೀಸ್’ (ಐಡಬ್ಲ್ಯುಐ) ಜೊತೆ ಒಪ್ಪಂದವಾಗಿದ್ದು, ಅವುಗಳಲ್ಲಿ ಮೊದಲ ಹಂತವಾಗಿ 2,000 ಗನ್ಗಳನ್ನು ಕಳೆದ ವಾರಾಂತ್ಯದಲ್ಲಿ ವಿತರಿಸಲಾಗಿದೆ. ಈ ವರ್ಷದ ಅಂತ್ಯದೊಳಗೆ ಇನ್ನೂ 4,000 ಗನ್ಗಳನ್ನು ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಗನ್ಗಳ ವಿತರಣೆಯನ್ನು ‘ಪಿಎಲ್ಆರ್ ಸಿಸ್ಟಮ್ಸ್’ ಸಂಸ್ಥೆಯು ನಡೆಸಿದ್ದು, ಇದನ್ನು ಭಾರತದ ಅದಾನಿ ಗ್ರೂಪ್ ಮತ್ತು ಐಡಬ್ಲ್ಯುಐ ನಡುವಿನ ಜಂಟಿ ಉದ್ಯಮವಾಗಿದೆ. ಭಾರತದಲ್ಲಿ ಸಣ್ಣ ಶಸ್ತ್ರಾಸ್ತ್ರಗಳನ್ನು ತಯಾರಿಸಿದ ಮೊದಲ ಖಾಸಗಿ ಕಂಪನಿ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.