ನವದೆಹಲಿ: ಮಿಲಿಟರಿ ಹಾರ್ಡ್ವೇರ್ ಮತ್ತು ಭಾರತದ ಕರಾವಳಿ ರಕ್ಷಣಾ ಪಡೆಗೆ ಅಗತ್ಯವಿರುವ ತಂತ್ರಜ್ಞಾನದ ಜಂಟಿ ಅಭಿವೃದ್ಧಿಗಾಗಿ ಚೌಕಟ್ಟು ರೂಪಿಸಲು ಭಾರತ ಮತ್ತು ಇಟಲಿ ಗುರುವಾರ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ನಿರ್ಧರಿಸಿವೆ.

ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಇಟಲಿಯ ರಕ್ಷಣಾ ಸಚಿವ ಗೈಡೊ ಕ್ರೊಸೆಟ್ಟೊ ಅವರು, ಸಭೆಯ ಬಳಿಕ ಉಭಯ ದೇಶಗಳ ಶಶಸ್ತ್ರ ಪಡೆಗಳಿಗೆ ಅಗತ್ಯವಿರುವ ರಕ್ಷಣಾ ತಂತ್ರಜ್ಞಾನದ ಯೋಜನೆ 2026–27 ಅನಾವರಣಗೊಳಿಸಿದರು.

‘ಪಶ್ಚಿಮ ಏಷ್ಯಾ ಸಂಘರ್ಷವೂ ಸೇರಿದಂತೆ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವು ಸಮಸ್ಯೆಗಳ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ಆತ್ಮನಿರ್ಭರ ಭಾರತ ಮತ್ತು ಇಟಲಿಯ ರಕ್ಷಣಾ ಸಹಕಾರ ಯೋಜನೆಯಡಿ ಎರಡೂ ದೇಶಗಳಿಗೆ ಸಹಕಾರಿಯಾಗಬಲ್ಲ ಮಿಲಿಟರಿ ಸಹಕಾರ ಬಗ್ಗೆ, ಇಂಡೊ–ಪೆಸಿಫಿಕ್ ವಲಯದಲ್ಲಿ ಸಹಕಾರ ವಿಸ್ತರಣೆ ಬಗ್ಗೆ ಮಾತುಕತೆ ನಡೆಯಿತು’ ಎಂದು ರಾಜನಾಥ್ ಸಿಂಗ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ರಕ್ಷಣಾ ಸಚಿವರ ಸಭೆಯ ಸಂದರ್ಭದಲ್ಲೇ, ಭಾರತೀಯ ಕರಾವಳಿ ರಕ್ಷಣಾ ಪಡೆಯು, ಇಟಲಿಯ ಹಡಗು ನಿರ್ಮಾಣ ಕಂಪನಿ ಫಿನ್ಕಾಂಟೇರಿ ಜತೆಗೆ ಅತ್ಯಾಧುನಿಕ ವಿನ್ಯಾಸ, ಸಂಯೋಜಿತ ಅಗ್ನಿಶಾಮಕ ವ್ಯವಸ್ಥೆ ಮತ್ತು ಹೈಬ್ರಿಡ್ ಪ್ರೊಪಲ್ಷನ್ ಬಗ್ಗೆ ಚರ್ಚೆ ನಡೆಸಿತು ಎಂದು ಮೂಲಗಳು ತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-51-1274119534

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.