ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವತ್ತ ಬಹಳ ನಿಕಟವಾಗಿವೆ. ಆದರೆ, ಕೊನೆಯ ಅಡಚಣೆ ದಾಟಬೇಕಾಗಿದೆ ಎಂದು ಅಮೆರಿಕದ ವಿದೇಶಾಂಗ ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಮಂಗಳವಾರ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ದೇಶಗಳು ಹಲವು ತಿಂಗಳುಗಳಿಂದ ಮಾತುಕತೆ ನಡೆಸುತ್ತಿವೆ. ಎರಡೂ ದೇಶಗಳು ಕೆಲ ತೀರ್ಮಾನಕ್ಕೆ ಬರುವುದು ಮತ್ತು ಕಾರ್ಯಸೂಚಿಯಲ್ಲಿರುವ ಇತರ ಹಲವು ವಿಷಯಗಳ ಕುರಿತಂತೆ ಒಮ್ಮತಕ್ಕೆ ಬರುವುದು ಮುಖ್ಯ ಎಂದು ಲ್ಯಾಂಡೌ ಹೇಳಿದ್ದಾರೆ.

‘ವಿಶ್ವ ಮಟ್ಟದಲ್ಲಿ ಭಾರತದ ಪ್ರಾಮುಖ್ಯತೆಯ ಬಗ್ಗೆ ನಮಗೆ ತಿಳಿದಿದೆ. ವ್ಯಾಪಾರ ಒಪ್ಪಂದದ ಬಗ್ಗೆ ಅಂತಿಮ ನಿರ್ಣಯ ಮಾಡುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಒಪ್ಪಂದಕ್ಕೆ ಹಲವು ತಿಂಗಳುಗಳಿಂದ ಮಾತುಕತೆ ನಡೆಯುತ್ತಿದ್ದು, ತುಂಬಾ ಹತ್ತಿರವಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದರೆ, ಅಂತಿಮ ಹಂತದ ಅಡಚಣೆಯನ್ನು ದಾಟಬೇಕಾಗಿದೆ’ ಎಂದು ಲ್ಯಾಂಡೌ ಮೇರಿಲ್ಯಾಂಡ್ನ ನ್ಯಾಷನಲ್ ಹಾರ್ಬರ್ನಲ್ಲಿ ನಡೆದ ಸೆಲೆಕ್ಟ್ಯುಎಸ್ಎ ಹೂಡಿಕೆ ಶೃಂಗಸಭೆಯ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಂತಿಮ ಒಪ್ಪಂದ ಯಾವಾಗ ಆಗಲಿದೆ ಎಂಬುದರ ಕುರಿತು ಹೇಳಲು ನನ್ನ ಬಳಿ ಯಾವುದೇ ದೊಡ್ಡ ಆಂತರಿಕ ಮಾಹಿತಿ ಇಲ್ಲ., ಆದರೆ, ನಾವು ಅದಕ್ಕೆ ತುಂಬಾ ಹತ್ತಿರದಲ್ಲಿದ್ದೇವೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

'ಭಾರತವು ವಿಶ್ವದ ಮಹಾನ್ ಶಕ್ತಿಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನಾನು ಭಾವಿಸುತ್ತೇನೆ. ಭಾರತವು ಈಗ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಭಾರತವು ಅಸಾಮಾನ್ಯ, ಆರ್ಥಿಕ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಹಲವು ದಶಕಗಳಿಂದ ಭಾರತವು ತನ್ನ ಸಾಮರ್ಥ್ಯಕ್ಕೆ ತಕ್ಕ ಯಶಸ್ಸು ಸಾಧಿಸಿಲ್ಲ’ ಎಂದಿದ್ದಾರೆ.

"ಆದರೆ, ಭಾರತವು ಈಗ ಬೃಹತ್ ಆರ್ಥಿಕ ಅಭಿವೃದ್ಧಿಯನ್ನು ಹೊಂದುವ ಮೂಲಕ ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಲು ಸಿದ್ಧವಾಗಿದೆ ಎಂದು ನಾನು ಭಾವಿಸುತ್ತೇನೆ’ಎಂದು ಲ್ಯಾಂಡೌ ಹೇಳಿದರು.

ಭಾರತ ಮತ್ತು ಅಮೆರಿಕ ಫೆಬ್ರುವರಿ 2ರಂದು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ಘೋಷಿಸಿದವು. ಫೆಬ್ರುವರಿ 7 ರಂದು ಒಪ್ಪಂದದ ಪಠ್ಯವನ್ನು ಬಿಡುಗಡೆ ಮಾಡಿದ್ದವು. ಭಾರತೀಯ ಸಮಾಲೋಚಕರು ವ್ಯಾಪಾರ ಒಪ್ಪಂದದ ಕುರಿತು ಚರ್ಚೆಗಾಗಿ ಕಳೆದ ತಿಂಗಳು ಅಮೆರಿಕಕ್ಕೆ ತೆರಳಿದ್ದರು.

2030ರ ವೇಳೆಗೆ 500 ಶತಕೋಟಿ ಡಾಲರ್ ದ್ವಿಪಕ್ಷೀಯ ವ್ಯಾಪಾರವನ್ನು ಸಾಧಿಸುವ ಗುರಿಯನ್ನು ಉಭಯ ದೇಶಗಳು ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.