ನವದೆಹಲಿ: ವಿರಳ ಖನಿಜಗಳ ರಫ್ತಿನ ಮೇಲಿನ ಚೀನಾ ಏಕಸ್ವಾಮ್ಯವನ್ನು ತಡೆಯುವ ನಿಟ್ಟಿನಲ್ಲಿ ಮಂಗಳವಾರ ಈ ಕುರಿತ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಸಹಿ ಹಾಕಿವೆ.

ವಿರಳ ಖನಿಜಗಳ ಗಣಿಗಾರಿಕೆ, ಸಂಸ್ಕರಣೆ, ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಈ ಚೌಕಟ್ಟಿಗೆ ನವದೆಹಲಿಯಲ್ಲಿ ನಡೆದ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಸಹಿ ಹಾಕಲಾಯಿತು.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರ ಸಮ್ಮುಖದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ‘ಈ ಒಪ್ಪಂದ ಅತ್ಯಂತ ಸಕಾಲಿಕ ಮತ್ತು ನಿರ್ಣಾಯಕವಾಗಿದೆ’ ಎಂದು ಹೇಳಿದ್ದಾರೆ.

‘ಈ ಚೌಕಟ್ಟು ಗಣಿಗಾರಿಕೆ, ಸಂಸ್ಕರಣೆ, ಮರುಬಳಕೆ ಸೇರಿದಂತೆ ವಿರಳ ಖನಿಜಗಳ ಪೂರೈಕೆ ಸರಪಳಿಯಲ್ಲಿ ನಮ್ಮ ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ’ ಎಂದಿದ್ದಾರೆ.

ತಮ್ಮ ಭಾಷಣದಲ್ಲಿ ರೂಬಿಯೋ, ಅಮೆರಿಕ ಮತ್ತು ಭಾರತದ ನಡುವಿನ ವ್ಯೂಹಾತ್ಮಕ ಪಾಲುದಾರಿಕೆ ಮತ್ತು ಅದು ಉಭಯ ದೇಶಗಳ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದ್ದಾರೆ.

ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಉಲ್ಲೇಖಿಸಿದ ಅವರು, ‘ನಾವು ಇದಕ್ಕೆ ಸಹಿ ಹಾಕಲು ಸಾಧ್ಯವಾಗಿದ್ದಕ್ಕೆ ನನಗೆ ಸಂತೋಷವಾಗಿದೆ. ಇದು ಒಂದು ಪ್ರಮುಖ ಒಪ್ಪಂದವಾಗಿರುವುದರ ಜೊತೆಗೆ, ಅಮೆರಿಕ ಮತ್ತು ಭಾರತದ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಗೆ ಒಂದು ಸ್ಪಷ್ಟ ಉದಾಹರಣೆಯಾಗಿದೆ’ ಎಂದು ಹೇಳಿದ್ದಾರೆ.

ಮುಂದುವರಿದು, ‘ವಿರಳ ಖನಿಜಗಳ ವಿಷಯದಲ್ಲಿ ಏಕಸ್ವಾಮ್ಯಕ್ಕೆ ಅವಕಾಶವಿಲ್ಲ. ಏಕಸ್ವಾಮ್ಯವು ವಿರಳ ಖನಿಜಗಳ ಪೂರೈಕೆಯನ್ನು ನಿಯಂತ್ರಿಸುವ ಮೂಲಕ ಸಾರ್ವಭೌಮ ರಾಷ್ಟ್ರಗಳನ್ನು ಹತೋಟಿಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ಇಂದು ನಾವು ಇದಕ್ಕೆ ಸಹಿ ಹಾಕಿದ್ದೇವೆ’ ಎಂದು ಹೇಳಿದ್ದಾರೆ.

ಲಿಥಿಯಂ, ಕೋಬಾಲ್ಟ್, ನಿಕೆಲ್, ತಾಮ್ರ, ಗ್ರ್ಯಾಫೈಟ್ ಮತ್ತು 17 ವಿರಳ ಲೋಹಗಳನ್ನು ವಿರಳ ಖನಿಜಗಳೆಂದು ಕರೆಯಲಾಗುತ್ತದೆ. ಇವಿ ಬ್ಯಾಟರಿ, ಸೆಮಿಕಂಡಕ್ಟರ್ಗಳ ತಯಾರಿಕೆಗೆ ಇವು ಮುಖ್ಯವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.