ದುಬೈ: ಟೆಹರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪೂರ್ವಾನುಮತಿ ಅಥವಾ ಸ್ಪಷ್ಟ ಸಮನ್ವಯ ಇಲ್ಲದೆ ಯಾವುದೆ ಭೂ ಗಡಿಗಳನ್ನು ಸಮೀಪಿಸುವುದಾಗಲಿ, ದಾಟುವುದಾಗಲಿ ಮಾಡಬಾರದು ಎಂದು ಇರಾನ್ನಲ್ಲಿರುವ ಭಾರತೀಯರಿಗೆ ಸೋಮವಾರ ಸೂಚನೆ ನೀಡಲಾಗಿದೆ.

ಭಾರತೀಯ ರಾಯಭಾರ ಕಚೇರಿಯ ಅರಿವಿಲ್ಲದೆ ಮತ್ತು ಮಾರ್ಗದರ್ಶನವಿಲ್ಲದೆ ಭೂ ಗಡಿಯ ಮೂಲಕ ಇರಾನ್ ದಾಟಲು ಪ್ರಯತ್ನಿಸುವ ಭಾರತೀಯರು ಗಂಭೀರ ವಲಸೆ ಮತ್ತು ಪ್ರಯಾಣದ ತೊಂದರೆಗಳನ್ನು ಎದುರಿಸಬೇಕಾಗತ್ತುದೆ ಎಂದು ಅದು ಎಚ್ಚರಿಸಿದೆ.

ಒಂದು ವೇಳೆ ಸಮನ್ವಯವಿಲ್ಲದೆ ಗಡಿ ದಾಟಿದರೆ ನಂತರ ಅವರಿಗೆ ನೆರವು ನೀಡುವ ಸ್ಥಿತಿ ತಾವು ಇರುವುದಿಲ್ಲ ಎಂದು ರಾಯಭಾರ ಕಚೇರಿ ತಿಳಿಸಿದೆ.

‘ರಾಯಭಾರ ಕಚೇರಿಯು ಭಾರತೀಯ ಸಮುದಾಯದೊಂದಿಗೆ ನಿಯಮಿತ ಸಂಪರ್ಕದಲ್ಲಿದೆ. ಅಗತ್ಯವಿದ್ದ ಕಡೆ ಸಂಘಟಿತ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ. ಯಾವುದೆ ಸೂಚನೆ ನೀಡದೆ ಭೂ ಗಡಿಯ ಕಡೆಗೆ ಪ್ರಯಾಣಿಸುವಂತಿಲ್ಲ’ ಎಂದು ಕಚೇರಿ ಹೇಳಿದೆ.

ಕಡ್ಡಾಯವಾಗಿ ಸೂಚನೆಗಳನ್ನು ಪಾಲಿಸಲು ಮತ್ತು ಯಾವುದೇ ಪ್ರಯಾಣ ಕೈಗೊಳ್ಳುವಾಗ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಿ ಎಂದು ಕಚೇರಿ ವಿನಂತಿಸಿದೆ. ಪ್ರಯಾಣ ಸಂಬಂಧಿ ಪ್ರಶ್ನೆಗಳು ಅಥವಾ ತುರ್ತು ಸಂದರ್ಭದಲ್ಲಿ +98 912 810 9115, +98 912 810 9102, +98 9128109109, +98 993 217 9359 ಅಥವಾ ಇ-ಮೇಲ್: cons.tehrant@mea.gov.in ಸಂಪರ್ಕಿಸುವಂತೆ ಕೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.