ವಾಷಿಂಗ್ಟನ್: ಅಮೆರಿಕದಲ್ಲಿ ಭಾರತದ ವಿದೇಶಿ ನೇರ ಹೂಡಿಕೆಯು ಸರಿ ಸುಮಾರು 16.4 ಬಿಲಿಯನ್ ಡಾಲರ್ನಷ್ಟಾಗಿದ್ದು(₹1.56 ಲಕ್ಷ ಕೋಟಿ) , 70,800 ಉದ್ಯೋಗ ಸೃಷ್ಟಿಗೆ ನೆರವಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ಸಂಜೆ ಮೇರಿಲ್ಯಾಂಡ್ನ ನ್ಯಾಷನಲ್ ಹಾರ್ಬರ್ನಲ್ಲಿ ನಡೆದ ಸೆಲೆಕ್ಟ್ಯುಎಸ್ಎ ಹೂಡಿಕೆ ಶೃಂಗಸಭೆಯ ಸಂದರ್ಭದಲ್ಲಿ ‘ಸಿಐಐ ಇಂಡಿಯಾ’ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕದ ವಾಣಿಜ್ಯ ಇಲಾಖೆಯ ಉಪ ಆರ್ಯದರ್ಶಿ(ನೀತಿ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಆಡಳಿತ) ಬ್ರಾಂಡನ್ ರೆಮಿಂಗ್ಟನ್, ಭಾರತೀಯ ಸಂಸ್ಥೆಗಳು ಅಮೆರಿಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 330 ಮಿಲಿಯನ್ ಡಾಲರ್ ಖರ್ಚು ಮಾಡಿವೆ ಎಂದೂ ಹೇಳಿದ್ದಾರೆ

‘ಭಾರತದಿಂದ ನಿಮ್ಮ ಹೂಡಿಕೆಯನ್ನು ನಾವು ಸಂತಸದಿಂದ ಸ್ವಾಗತಿಸುತ್ತೇವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತದಿಂದ ಅಮೆರಿಕಕ್ಕೆ ಒಟ್ಟು ವಿದೇಶಿ ನೇರ ಹೂಡಿಕೆಯು ಸರಿಸುಮಾರು 16.4 ಬಿಲಿಯನ್ ಡಾಲರ್ ಆಗಿದ್ದು, ಇದು ಸುಮಾರು 70,800 ಉದ್ಯೋಗ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ರಫ್ತುಗಳನ್ನು ಬೆಂಬಲಿಸಿದೆ’ಎಂದಿದ್ದಾರೆ.

ನ್ಯೂಜೆರ್ಸಿ ಮೂಲದ ಒರಗನಾನ್ ಅಂಡ್ ಕೋ ಸಂಸ್ಥೆಯನ್ನು ಖರೀದಿಸುತ್ತಿದ್ದು, ಅದಕ್ಕೆ 12 ಬಿಲಿಯನ್ ಡಾಲರ್ ಹೂಡಿಕೆಯನ್ನು ಭಾರತದ ಸನ್ ಫಾರ್ಮಾಸಿಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಘೋಷಿಸಿತ್ತು.

ಸೆಲೆಕ್ಟ್ಯುಎಸ್ಎ ಹೂಡಿಕೆ ಶೃಂಗಸಭೆಯಲ್ಲೇ ಸುಮಾರು 12 ಭಾರತೀಯ ಕಂಪನಿಗಳು ಅಮೆರಿಕದಲ್ಲಿ ಹೊಸ ಹೂಡಿಕೆ ಘೋಷಿಸುವ ಹಾದಿಯಲ್ಲಿವೆ.

‘ಬಂಡವಾಳ ಹೂಡಕೆ, ಉದ್ಯೋಗ ಸೃಷ್ಟಿ, ಪೂರೈಕೆ ಸರಪಳಿ ಭದ್ರಪಡಿಸುವಿಕೆ ಸೇರಿದಂತೆ ಇವೇ ಮುಂತಾದ ಚಟುವಟಿಕೆ ಮೂಲಕ ಅಮೆರಿಕ ಆರ್ಥಿಕತೆಗೆ ಭಾರತದ ಕಂಪನಿಗಳ ಕೊಡುಗೆ ಹೆಚ್ಚುತ್ತಿದೆ’ ಎಂದು ಭಾರತೀಯ ರಾಯಭಾರ ಕಚೇರಿಯ ಮಿಷನ್ ಇಂಡಿಯಾದ ಉಪಾಧ್ಯಕ್ಷರಾದ ನಮಗ್ಯಾ ಖಂಫಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.