ಸ್ಯಾನ್ ಫ್ರಾನ್ಸಿಸ್ಕೋ: ಹಿರಿಯ ನಾಗರಿಕರಿಗೆ ದಶಲಕ್ಷ ಡಾಲರ್ಗಳಿಗೂ ಹೆಚ್ಚು ವಂಚನೆ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಭಾರತ ಮೂಲದ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲಸಿದ್ದ 33 ವರ್ಷದ ಪ್ರಣವ್ ಪಟೇಲ್ ಶಿಕ್ಷೆಗೆ ಗುರಿಯಾದವರು. 2023ರ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ‘ಮನಿ ಮುಲ್’ (ಹಣ ಅಕ್ರಮ ವರ್ಗಾವಣೆಗೆ ಅಪರಾಧಿಗಳಿಂದ ನೇಮಕಗೊಂಡ ವ್ಯಕ್ತಿ) ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ ಸುಮಾರು 1.7 ದಶಲಕ್ಷ ಅಮೆರಿಕನ್ ಡಾಲರ್ (₹14 ಕೋಟಿ) ವಂಚಿಸಿದ್ದ ಆರೋಪ ಹೊತ್ತಿದ್ದರು.

ಕಳೆದ ವರ್ಷ ಡಿಸೆಂಬರ್ನಲ್ಲಿ ಪ್ರಣವ್ರನ್ನು ದೋಷಿ ಎಂದು ಪರಿಗಣಿಸಿದ್ದ ಜಿಲ್ಲಾ ನ್ಯಾಯಾಧೀಶ ವಿಲಿಯಂ ಜಂಗ್ ಅವರು ಬುಧವಾರ ಆರು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದ್ದಾರೆ. ಅಲ್ಲದೇ ವಂಚನೆಯ ₹14 ಕೋಟಿ ಹಣದ ಜಪ್ತಿಗೂ ಸೂಚಿಸಿದ್ದಾರೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ಅಮೆರಿಕ ಖಜಾನೆ ಇಲಾಖೆಯ ಸರ್ಕಾರಿ ಏಜೆಂಟ್ ಎಂದು ಪರಿಚಯ ಮಾಡಿಕೊಂಡು ಇವರು ವಂಚಿಸುತ್ತಿದ್ದರು. ಫ್ಲಾರಿಡಾದಲ್ಲಿ ಹಿರಿಯ ನಾಗರಿಕರಿಂದ ಹಣ ಮತ್ತು ಆಭರಣ ಪಡೆದು ಪ್ರಣವ್ ನ್ಯೂಜೆರ್ಸಿಗೆ ಬಂದು ನೆಲಸಿದ್ದರು. 2023ರಲ್ಲಿ ಚಿನ್ನದ ಪೆಟ್ಟಿಗೆಯ ಸಮೇತ ಪ್ರಣವ್ರನ್ನು ಕಾನೂನು ಜಾರಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.