ಲಂಡನ್: ಇಂಗ್ಲೆಂಡ್ನ ಈಸ್ಟ್ ಮಿಡ್ಲ್ಯಾಂಡ್ಸ್ ಪ್ರದೇಶದಲ್ಲಿ ತನ್ನ ಪ್ರೇಯಸಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಬ್ರಿಟನ್ನ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

50 ವರ್ಷದ ರಾಜ್ ಸಿದ್ಪಾರ ಹಾಗೂ 44 ವರ್ಷದ ತರ್ನ್ಜೀತ್ ಚಗ್ಗರ್ ಅವರು ಐದು ತಿಂಗಳಿನಿಂದ ಸಹಜೀವನ ನಡೆಸುತ್ತಿದ್ದರು. ಅಕ್ಟೋಬರ್ನಲ್ಲಿ ರಾಜ್ ತನ್ನ ಮನೆಯಲ್ಲಿ ತರ್ನ್ಜೀತ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ರಾಜ್ ಮೇಲಿದ್ದ ಆರೋಪ ಕಳೆದ ವಾರ ಸಾಬೀತಾಗಿತ್ತು.

ಶುಕ್ರವಾರ ಲೆಸ್ಟರ್ ಕ್ರೌನ್ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದರು. ರಾಜ್ಗೆ ಮೊದಲ ಪೆರೋಲ್ ನೀಡುವ ಮುನ್ನ ಆತ 21 ವರ್ಷ ಜೈಲು ಶಿಕ್ಷೆ ಅನುಭವಿಸಿರಬೇಕು ಎಂದು ಲೆಸ್ಟರ್ ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.