ಲಂಡನ್: ಬ್ರಿಟನ್‌ನ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರವೇಶ ಪಡೆಯುವವರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು ‘ಉನ್ನತ ಶಿಕ್ಷಣ ಸಾಂಖ್ಯಿಕ ಸಂಸ್ಥೆ’ (ಎಚ್‌ಇಎಸ್‌ಎ) ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.
ಬಿಗಿಯಾದ ವೀಸಾ ನಿಯಮಗಳಿಂದಾಗಿ ಬ್ರಿಟನ್‌ಗೆ ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ. ಆದಾಗ್ಯೂ, ವಿ.ವಿಗಳಲ್ಲಿ ಪ್ರವೇಶ ಪಡೆಯುತ್ತಿರುವವರಲ್ಲಿ ಭಾರತೀಯ ವಿದ್ಯಾರ್ಥಿಗಳೇ ಹೆಚ್ಚು ಎಂದು ಎಚ್ಇಎಸ್‌ಎ ದತ್ತಾಂಶಗಳು ಹೇಳುತ್ತವೆ.
2022–23ನೇ ಸಾಲಿನಲ್ಲಿ ಬ್ರಿಟನ್‌ನ ವಿ.ವಿ.ಗಳಲ್ಲಿ ಪ್ರವೇಶ ಪಡೆದಿರುವವರ ಪೈಕಿ ಭಾರತೀಯ ವಿದ್ಯಾರ್ಥಿಗಳ ಪ್ರಮಾಣ ಶೇ 26ರಷ್ಟು ಎಂದೂ ದತ್ತಾಂಶ ಹೇಳುತ್ತವೆ.