ವೆಲ್ಲಿಂಗ್ಟನ್: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹಂತಕರಲ್ಲಿ ಒಬ್ಬನಾಗಿದ್ದ ಸತ್ವಂತ್ ಸಿಂಗ್ ವಂಶಸ್ಥನೊಬ್ಬ ನ್ಯೂಜಿಲೆಂಡ್ನ ಮಾದಕ ವಸ್ತು ಪ್ರಕರಣದಲ್ಲಿ ಜೈಲು ಸೇರಿದ್ದು, ತನ್ನ ಹೆಸರು ಮುಚ್ಚಿಡಲು ನಡೆಸಿದ ಕಾನೂನು ಹೋರಾಟದಲ್ಲಿ ವಿಫಲನಾಗಿದ್ದಾನೆ.

ಬಲ್ತೇಜ್ ಸಿಂಗ್ ತನ್ನ ಹೆಸರನ್ನು ಗೋಪ್ಯವಾಗಿಡಲು ಪ್ರಯತ್ನಿಸಿದ್ದ ಎಂದು ನ್ಯೂಜಿಲೆಂಡ್ನ ‘ಸ್ಟಫ್’ ವೆಬ್ ಪೋರ್ಟಲ್ ವರದಿ ಮಾಡಿದೆ.

ಈತ 700 ಕೆ.ಜಿ. ಮೆಥಾಂಫೆಟಮೈನ್ ಮಾದಕ ವಸ್ತುವನ್ನು ಆಮದು ಮಾಡಿಕೊಂಡ ಪ್ರಕರಣದಲ್ಲಿ 22 ವರ್ಷಗಳ ಸೆರೆವಾಸ ಅನುಭವಿಸುತ್ತಿದ್ದಾನೆ. ತನ್ನ ಹೆಸರನ್ನು ಶಾಶ್ವತವಾಗಿ ರಹಸ್ಯವಾಗಿಡಲು ಈತ ಕಾನೂನು ಹೋರಾಟ ನಡೆಸುತ್ತಿದ್ದ.

1984ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು, ಅವರ ಅಂಗರಕ್ಷಕನಾಗಿದ್ದ ಸತ್ವಂತ್ ಸಿಂಗ್ ಹತ್ಯೆ ಮಾಡಿದ್ದ. ಈತನ ವಂಶಸ್ಥ ಬಲ್ತೇಜ್ ಸಿಂಗ್. ಆಕ್ಲೆಂಡ್ನಲ್ಲಿ ಈತ ಉದ್ಯಮಿಯಾಗಿದ್ದ.

ತನ್ನ ಗುರುತು ಪತ್ತೆಯಾದರೆ ಕುಟುಂಬ ಗಂಭೀರ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಹೈಕೋರ್ಟ್ನಲ್ಲಿ ವಾದ ಮಾಡಿ, ಹೆಸರನ್ನು ಮುಚ್ಚಿಡಲು ಅನುಮತಿ ಪಡೆದಿದ್ದ. ನ್ಯೂಜಿಲೆಂಡ್ ಪೊಲೀಸರು ಈ ಕುರಿತು ಮೇಲ್ಮನವಿ ಸಲ್ಲಿಸಿದ್ದರು.

ಸಿಂಗ್ ಗುರುತನ್ನು ಈಗಾಗಲೇ ಭಾರತದ ಮಾಧ್ಯಮಗಳು ಬಹಿರಂಗಪಡಿಸಿವೆ ಎಂದು ಅರ್ಜಿದಾರರು ವಾದಿಸಿದ್ದರು. ಸುಪ್ರೀಂ ಕೋರ್ಟ್ನಲ್ಲಿ ಸಿಂಗ್ ಮನವಿ ತಿರಸ್ಕೃತಗೊಂಡಿದ್ದು, ಮಾಧ್ಯಮಗಳು ಆತನ ಹೆಸರು ಪ್ರಕಟಿಸಬಹುದಾಗಿದೆ.

ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ, ‘ನನ್ನ ಕುಟುಂಬ ಸಿಖ್ ಮತ್ತು ಹಿಂದೂ ಸಮುದಾಯದಲ್ಲಿ ಕುಖ್ಯಾತಿಗೆ ಒಳಗಾಗಿದೆ. ಇದು ಹಿಂಸೆ, ಬೆದರಿಕೆ ಮತ್ತು ಭೀತಿ ಉಂಟು ಮಾಡುವುದಕ್ಕೂ ಕಾರಣ ಆಗಬಹುದು’ ಎಂದು ಬಲ್ತೇಜ್ ಸಿಂಗ್ ತಂದೆ ಹೇಳಿಕೊಂಡಿದ್ದರು.

ಇಂದಿರಾಗಾಂಧಿ ಅವರ ಹತ್ಯೆ ನಂತರ ದೆಹಲಿಯಲ್ಲಿ ಗಲಭೆ ಉಂಟಾಗಿ, ಸಿಖ್ ಸಮುದಾಯದ ಹಲವರ ಹತ್ಯೆಗಳು ನಡೆದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.