ಟೆಹರಾನ್ (ಎಎಫ್ಪಿ): ‘ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವುದಕ್ಕೆ ಸಂಬಂಧಿಸಿದಂತೆ ನಾವು ಮುಂದಿಟ್ಟಿರುವ 14 ಅಂಶಗಳ ಪ್ರಸ್ತಾವವನ್ನು ಒಪ್ಪಿಕೊಳ್ಳಿ ಅಥವಾ ಸೋಲು ಸ್ವೀಕರಿಸಿ’ ಎಂದು ಇರಾನ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಎದುರು ಇರಾನ್ ಮುಂದಿಟ್ಟಿರುವ 9 ಅಂಶಗಳ ಪ್ರಸ್ತಾವಕ್ಕೆ ಪ್ರತಿಯಾಗಿ, ಇರಾನ್ ಮಧ್ಯಸ್ಥಿಕೆದಾರರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಅಮೆರಿಕ–ಇರಾನ್ ನಡುವೆ ಕಳೆದ ತಿಂಗಳು ನಡೆದ ಆರಂಭಿಕ ಸುತ್ತಿನ ಮಾತುಕತೆಯು ಯಾವುದೇ ಪ್ರಗತಿ ಸಾಧಿಸುವಲ್ಲಿ ವಿಫಲವಾಗಿದೆ. ಹಾಗಾಗಿ, ಎರಡು ತಿಂಗಳಿಂದ ಮುಂದುವರಿದಿರುವ ಸಂಘರ್ಷ ಕೊನೆಗೊಳ್ಳಬೇಕಾದರೆ, ಅಮೆರಿಕದ ಮುಂದೆ ಇರಾನ್ ಇಟ್ಟಿರುವ ಪ್ರಸ್ತಾವವನ್ನು ಒಪ್ಪದೆ ಪರ್ಯಾಯ ಆಯ್ಕೆಗಳಿಲ್ಲ’ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್ ಹೇಳಿದ್ದಾರೆ.

ಇರಾನ್ ಸಲ್ಲಿಸಿರುವ ಪ್ರಸ್ತಾವವನ್ನು ತಿರಸ್ಕರಿಸುವ ಟ್ರಂಪ್, ‘ಅಮೆರಿಕ–ಇರಾನ್ ನಡುವೆ ಏಪ್ರಿಲ್ 8ರಿಂದ ದುರ್ಬಲ ಕದನ ವಿರಾಮ ಜಾರಿಯಲ್ಲಿದ್ದು, ಸದ್ಯ ‘ಜೀವ ರಕ್ಷಕ ವ್ಯವಸ್ಥೆಯ ಬೆಂಬಲದಲ್ಲಿದೆ’ ಎಂದು ಹೇಳಿದ್ದಾರೆ.

‘ಇರಾನ್ ಪ್ರಸ್ತಾವವನ್ನು ಒಪ್ಪದೆ ಬೇರೆ ಯಾವುದೇ ವಿಧಾನವು ಸಂಘರ್ಷಕ್ಕೆ ತೆರೆ ಎಳೆಯುವುದಿಲ್ಲ. ಅಮೆರಿಕವು ಬೇರೊಂದು ಪ್ರಯತ್ನಕ್ಕೆ ಮುಂದಾದರೆ, ಅದು ಮತ್ತೊಂದು ವೈಫಲ್ಯವಲ್ಲದೆ ಮತ್ತೇನೂ ಅಲ್ಲ’ ಎಂದು ಮೊಹಮ್ಮದ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಅಮೆರಿಕದ ಪ್ರಸ್ತಾವಕ್ಕೆ ಒಪ್ಪದಿದ್ದರೆ, ಯಾವುದೇ ಕ್ಷಣದಲ್ಲಿ ಬೇಕಾದರೂ ಭಾರಿ ದಾಳಿ ನಿರೀಕ್ಷಿಸಬಹುದು’ಎಂಬ ಅಮೆರಿಕದ ಬೆದರಿಕೆಗೆ ಇರಾನ್ ಮಣಿದಿಲ್ಲ. ಬದಲಿಗೆ, ಯುದ್ಧವನ್ನು ಅಮೆರಿಕದ ಎಷ್ಟು ದಿನ ಮುಂದುವರಿಸುತ್ತದೆಯೋ, ಅಲ್ಲಿಯವರೆಗೆ ಅಮೆರಿಕದ ತೆರಿಗೆದಾರರು ದಂಡ ತೆರಬೇಕಾಗುತ್ತದೆ’ ಎಂದು ಹೇಳಿದೆ.

ಪ್ರಸ್ತಾವ ಒಪ್ಪದ ಇರಾನ್

ಹೊರ್ಮುಜ್ ಜಲಂಸಂಧಿ ಮೂಲಕ ಹಡಗುಗಳ ಸಂಚಾರಕ್ಕೆ ಇರಾನ್ ನಿರ್ಬಂಧವನ್ನು ಮತ್ತಷ್ಟು ಬಿಗಿಗೊಳಿಸಿದೆ. ಅಮೆರಿಕವೂ ಇರಾನ್ನ ಬಂದರಿನ ಮೇಲೆ ಹೇರಿರುವ ದಿಗ್ಬಂಧನವನ್ನು ತೆರವುಗೊಳಿಸುವುದಿಲ್ಲ ಎಂದು ಹೇಳಿದೆ. ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ಮೂಲಕ ಅಮೆರಿಕ ಸಲ್ಲಿಸಿರುವ ಒಂದು ಪುಟದ ತಿಳಿವಳಿಕೆ ಪತ್ರದಲ್ಲಿನ ವಿವರಗಳು ಅಸ್ಪಷ್ಟವಾಗಿದ್ದು, ಮಿತಿ ಹೇರುವಂತಿವೆ ಎಂದು ಇರಾನ್ ಆಕ್ಷೇಪಿಸಿದೆ. ಮುಖ್ಯವಾಗಿ ಯುರೇನಿಯಂ ಸಮೃದ್ಧೀಕರಣದ ವಿಷಯವಾಗಿ ಅಮೆರಿಕ ಮುಂದಿಟ್ಟಿರುವ ಅಂಶವನ್ನು ಒಪ್ಪಿಕೊಳ್ಳಲು ಇರಾನ್ ನಿರಾಕರಿಸಿದೆ ಎಂದು ಮೂಲಗಳು ಹೇಳಿವೆ.

ಅಮೆರಿಕವು ಈ ಅಂಶಗಳಿಗೆ ಒಪ್ಪಿಕೊಂಡರೆ, ಪ್ರತಿಯಾಗಿ ಇರಾನ್, ಅಮೆರಿಕದ ಯಾವೆಲ್ಲ ಬೇಡಿಕೆಗೆ ಒಪ್ಪಿಕೊಳ್ಳಲಿದೆ ಎನ್ನುವುದನ್ನು ಇರಾನ್ನ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿಲ್ಲ.

ಇರಾನ್ ಪ್ರಸ್ತಾವದ ಪ್ರಮುಖ ಅಂಶಗಳು

l ಇರಾನ್ ಬಂದರಿನ ಮೇಲೆ ಅಮೆರಿಕ ಹೇರಿರುವ ದಿಗ್ಬಂಧನವನ್ನು ತೆರವು ಗೊಳಸಬೇಕು

l ಲೆಬನಾನ್ ಮೇಲಿನ ಯುದ್ಧ ನಿಲ್ಲಿಸಬೇಕು ಹಾಗೂ ಇರಾನ್ ದಾಳಿಗೆ ನಿಯೋಜಿಸಿರುವ ಅಮೆರಿಕದ ಸೇನೆಯನ್ನು ವಾಪಸ್
ಕರೆಯಿಸಿಕೊಳ್ಳಬೇಕು

l ಇರಾನ್ನ ಯುರೇನಿಯಂ ಸಮೃದ್ಧೀಕರಣ ಹಕ್ಕನ್ನು ಖಾತರಿಪಡಿಸಬೇಕು

l ದೀರ್ಘಕಾಲದ ನಿರ್ಬಂಧಗಳ ಅಡಿಯಲ್ಲಿ ವಿದೇಶಗಳಲ್ಲಿ ಸ್ಥಗಿತಗೊಳಿಸಲಾದ ಇರಾನ್ ಆಸ್ತಿಯನ್ನು ಮುಕ್ತಗೊಳಿಸಬೇಕು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-51-286689764

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.