ನವದೆಹಲಿ : ಅಮೆರಿಕವು ಟೆಹರಾನ್ನ ಷರತ್ತುಗಳನ್ನು ಒಪ್ಪಿಕೊಂಡರೆ ಮತ್ತೊಂದು ಸುತ್ತಿನ ಮಾತುಕತೆಗೆ ಇರಾನ್ ಸಿದ್ಧವಾಗಿದೆ ಎಂದು ನವದೆಹಲಿಯಲ್ಲಿರುವ ಇರಾನ್ ರಾಯಭಾರಿ ಮೊಹಮ್ಮದ್ ಪಥಾಲಿ ಸೋಮವಾರ ಹೇಳಿದ್ದಾರೆ.

ಅಮೆರಿಕದ ಬೇಡಿಕೆಗಳು ಅತಿರೇಕದಿಂದ ಕೂಡಿದ್ದು, ಕಾನೂನುಬಾಹಿರವಾಗಿವೆ ಎಂದು ಅವರು ಹೇಳಿದ್ದಾರೆ. ಇರಾನ್ನ ಬಂದರುಗಳಿಗೆ ಪ್ರವೇಶಿಸುವ ಮತ್ತು ಹೊರಡುವ ಹಡಗುಗಳ ಸಂಚಾರದ ಮೇಲಿನ ಅಮೆರಿಕದ ಸೇನಾ ದಿಗ್ಬಂಧನಕ್ಕೆ ಪ್ರತಿಕ್ರಿಯಿಸಿದ ಅವರು, ‘ವಾಷಿಂಗ್ಟನ್ಗೆ ಇರಾನ್ನ ಸಾಮರ್ಥ್ಯ ತಿಳಿದಿದ್ದು, ಟೆಹರಾನ್ ಎಲ್ಲ ಆಯ್ಕೆಗಳಿಗೂ ಪೂರ್ಣ ಸಿದ್ಧವಾಗಿದೆ’ ಎಂದಿದ್ದಾರೆ.

ರಾಜತಾಂತ್ರಿಕ ಪ್ರಕ್ರಿಯೆಯಲ್ಲಿ ಪ್ರಗತಿ ಆಗಬೇಕು ಎಂದರೆ ಎರಡೂ ಕಡೆಯವರು ಮಾತುಕತೆಗಳಿಗೆ ಸಿದ್ಧರಾಗಿರಬೇಕು. ಇದೇ ವೇಳೆ ಕಾನೂನುಬಾಹಿರ ಬೇಡಿಕೆಗಳನ್ನು ತಪ್ಪಿಸಬೇಕು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ಇರಾನ್ ಶಾಂತಿಗೆ ಸಿದ್ಧವಿದೆ. ಅದಕ್ಕಾಗಿ ನಾವು ಮಾತುಕತೆಗೂ ಸಿದ್ಧ ಮತ್ತು ಯುದ್ಧಕ್ಕೂ ಸನ್ನದ್ಧರಿದ್ದೇವೆ ಎಂಬುದು ಅಮೆರಿಕಕ್ಕೆ ತಿಳಿದಿರಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.