ಇಸ್ಲಾಮಾಬಾದ್/ದುಬೈ (ಎಪಿ/ಎಎಫ್ಪಿ): ಹೊರ್ಮುಜ್ ಜಲಸಂಧಿ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನ ಸ್ಥಿತಿ ಮತ್ತಷ್ಟು ಹೆಚ್ಚಿರುವುದರಿಂದ ಎರಡನೇ ಸುತ್ತಿನ ಮಾತುಕತೆ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಅಮೆರಿಕವು ಮಾತುಕತೆಗೆ ಉತ್ಸುಕತೆ ತೋರಿದೆಯಾದರೂ, ಇರಾನ್ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.

ಈ ನಡುವೆ, ಇರಾನ್ನ ಸರಕು ಸಾಗಣೆ ಹಡಗನ್ನು ಅಮೆರಿಕ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿರುವುದು ಹೊಸ ಸಂಘರ್ಷದ ಆತಂಕ ಮೂಡಿಸಿದೆ. ಇರಾನ್ನ ಬಂದರುಗಳ ಮೇಲೆ ತಾನು ವಿಧಿಸಿರುವ ದಿಗ್ಬಂಧನವನ್ನು ಉಲ್ಲಂಘಿಸಿರುವುದಕ್ಕೆ ಹಡಗನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ. ಈ ಕ್ರಮಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಸಿದ್ದು, ಹೊರ್ಮುಜ್ ಜಲಸಂಧಿ ಮೇಲಿನ ತನ್ನ ಹಿಡಿತ ಬಿಗಿಗೊಳಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವಂತೆ ಎರಡನೇ ಸುತ್ತಿನ ಮಾತುಕತೆಯು ಇಸ್ಲಾಮಾಬಾದ್ ನಲ್ಲಿ ಮಂಗಳವಾರ ಬೆಳಿಗ್ಗೆ ಆರಂಭ ವಾಗಬೇಕು. ‘ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗವು ಶೀಘ್ರದಲ್ಲೇ ಪಾಕಿಸ್ತಾನ ತಲುಪಲಿದೆ’ ಎಂದು ಟ್ರಂಪ್, ಸೋಮವಾರ ‘ನ್ಯೂಯಾರ್ಕ್ ಪೋಸ್ಟ್’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಶಾಂತಿ ಒಪ್ಪಂದ ಸಾಧ್ಯವಾದರೆ ಇರಾನ್ನ ನಾಯಕರನ್ನು ಸ್ವತಃ ಭೇಟಿಯಾಗುವುದನ್ನು ಎದುರು ನೋಡು ತ್ತಿದ್ದೇನೆ’ ಎಂದೂ ಹೇಳಿದ್ದಾರೆ. ಆದರೆ, ಮಾತುಕತೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇರಾನ್, ಸೋಮವಾರ ರಾತ್ರಿಯವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

‘ಅಮೆರಿಕದ ಜತೆ ಎರಡನೇ ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳುವ ತೀರ್ಮಾನವನ್ನು ಇದುವರೆಗೆ ಮಾಡಿಲ್ಲ’ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಖಾಯಿ ಹೇಳಿದ್ದಾರೆ.

‘ಅಮೆರಿಕದ ಜತೆ ಮಾತುಕತೆಯಲ್ಲಿ ಪಾಲ್ಗೊಳ್ಳುವುದನ್ನು ‘ಸಕಾರಾತ್ಮಕ’ ವಾಗಿ ಪರಿಶೀಲಿಸಲಾಗುತ್ತಿದೆಯಾದರೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಇರಾನ್ನ ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ಮಾತುಕತೆ ನಡೆಯುವ ಸಾಧ್ಯತೆ ಕಡಿಮೆ ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಇರಾನ್ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

‘ಇರಾನ್ನ ಹಡಗುಗಳು ಮತ್ತು ಬಂದರುಗಳಿಗೆ ಅಮೆರಿಕ ಬೆದರಿಕೆ ಹಾಕಿರುವುದು ಯೋಜಿತ ಮಾತುಕತೆಗೆ ಮುನ್ನ ಆ ದೇಶದ ‘ಕಪಟತನ’ವನ್ನು ಬಯಲು ಮಾಡಿದೆ’ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಇರಾನ್ ಜತೆಗೆ ಎರಡನೇ ಸುತ್ತಿನ ಮಾತುಕತೆ ನಡೆಯುವುದನ್ನು ಭಾನುವಾರ ಖಚಿತಪಡಿಸಿದ್ದರು. ‘ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ನೇತೃತ್ವದ ನಿಯೋಗ ಪಾಕಿಸ್ತಾನಕ್ಕೆ ತೆರಳಲಿದೆ’ ಎಂದಿದ್ದರು.

ಪಾಕ್ ಪ್ರಯತ್ನ: ಎರಡು ವಾರಗಳ ಕದನ ವಿರಾಮ ಬುಧವಾರ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಮತ್ತೊಂದು ಸುತ್ತಿನ ಮಾತುಕತೆ ಆಯೋಜಿಸುವ ಪ್ರಯತ್ನವನ್ನು ಪಾಕಿಸ್ತಾನ ಮುಂದುವರಿಸಿದೆ. ಕಳೆದ 24 ಗಂಟೆಗಳಲ್ಲಿ ಪಾಕಿಸ್ತಾನವು ಎರಡೂ ದೇಶಗಳ ಪ್ರತಿನಿಧಿಗಳ ಜತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದು, ಶಾಂತಿ ಮಾತುಕತೆಯನ್ನು ಮಂಗಳವಾರ ಆರಂಭಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರು ಸೋಮವಾರ ಪಾಕಿಸ್ತಾನದಲ್ಲಿರುವ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ನತಾಲಿ ಬೇಕರ್ ಅವರನ್ನು ಭೇಟಿಯಾಗಿ, ಭದ್ರತಾ ವ್ಯವಸ್ಥೆ ಸೇರಿದಂತೆ ಮಾತುಕತೆಗೆ ನಡೆಸಿರುವ ಸಿದ್ಧತೆಯ ಬಗ್ಗೆ ವಿವರಿಸಿದ್ದಾರೆ. ಇರಾನ್ ರಾಯಭಾರ ಕಚೇರಿಯ ಅಧಿಕಾರಿಗಳನ್ನೂ ಅವರು ಭೇಟಿಯಾಗಿದ್ದಾರೆ.

‘ಪಾಕ್ ಉಪಪ್ರಧಾನಿ ಇಶಾಕ್ ಡಾರ್ ಅವರು ಇರಾನ್ ವಿದೇಶಾಂಗ ಸಚಿವರಿಗೆ ಸೋಮವಾರ ಕರೆ ಮಾಡಿದ್ದು, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಹಾಗೂ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆಯ ಪ್ರಾಮುಖ್ಯವನ್ನು ಒತ್ತಿ ಹೇಳಿದ್ದಾರೆ’ ಎಂದು ಸಚಿವಾಲಯ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-132567484

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.