ಜೆರುಸಲೇಂ: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ಬಳಿಕ ಇದುವರೆಗೆ ಇಸ್ರೇಲ್ ಮೇಲೆ ಇರಾನ್ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ನಡೆಸಿದೆ. ಇವುಗಳಲ್ಲಿ ಶೇ 92ರಷ್ಟು ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಭಾನುವಾರ ತಿಳಿಸಿದೆ.

‘ಇರಾನ್ ಹಾರಿಸಿದ ಕ್ಷಿಪಣಿಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗಿಂತ ಭಿನ್ನವಾಗಿಲ್ಲ. ಯುದ್ಧ ಆರಂಭವಾದ ಬಳಿಕ ಇಲ್ಲಿಯವರೆಗೆ ಕೇವಲ ನಾಲ್ಕು ನೇರ ದಾಳಿಗಳು ನಡೆದಿವೆ. ಶನಿವಾರ ನಡೆದ ದಾಳಿಯನ್ನು ತಡೆಯಲು ವಿಫಲವಾದ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಇಸ್ರೇಲ್ ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಡಾವ್ ಶೋಶಾನಿ ಹೇಳಿದ್ದಾರೆ.
.ವೈರಿಗಳಿಗೆ ಮಾತ್ರ ಹೊರ್ಮುಜ್ ಜಲಸಂಧಿ ಮುಚ್ಚಲಾಗಿದೆ: ಇರಾನ್ ಪ್ರತಿನಿಧಿ.Video:ಇಸ್ರೇಲ್ ಅಣು ಕೇಂದ್ರದ ಸಮೀಪ ಅಪ್ಪಳಿಸಿದ ಇರಾನ್ ಕ್ಷಿಪಣಿ..ಆವರಿಸಿದ ಬೆಂಕಿ .
‘ದಾಳಿಗಳನ್ನು ನಾವು ಹಿಂದೆಯೂ ತಡೆಹಿಡಿದಿದ್ದೇವೆ. ಭವಿಷ್ಯದಲ್ಲಿಯೂ ತಡೆಹಿಡಿಯುತ್ತೇವೆ’ ಎಂದಿದ್ದಾರೆ.

ಶನಿವಾರ ನಡೆದ ದಾಳಿಯನ್ನು ‘ತುಂಬಾ ಕಷ್ಟಕರವಾದ ಸಂಜೆ’ ಎಂದಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಸೈರನ್ಗಳು ಮೊಳಗಿದಾಗಲೆಲ್ಲಾ ನಿವಾಸಿಗಳು ಆಶ್ರಯ ಕೇಂದ್ರಗಳಿಗೆ ಹೋಗಬೇಕು ಎಂದು ಮನವಿ ಮಾಡಿದ್ದಾರೆ.

ನೇತನ್ಯಾಹು ಅವರು ಭಾನುವಾರ ಅರಾದ್ಗೆ ಭೇಟಿ ನೀಡಿದರು. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾವು ಇರಾನ್ನ ರೆವಲ್ಯೂಷನರಿ ಗಾರ್ಡ್ಗಳು ಹಾಗೂ ಕ್ರಿಮಿನಲ್ ಗ್ಯಾಂಗ್ನ ಬೆನ್ನು ಬಿದ್ದಿದ್ದೇವೆ. ಅವರ ನಾಯಕರು, ಅವರ ನೆಲೆಗಳು, ಆಸ್ತಿಗಳ ಮೇಲೆ ದಾಳಿ ಮಾಡುತ್ತಿದ್ದೇವೆ. ಅವರನ್ನು ವೈಯಕ್ತಿಕವಾಗಿ ಬೆನ್ನಟ್ಟುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.