ಷಟೆಹ್ರಾನ್/ವಾಷಿಂಗ್ಟನ್: ಪ್ರಸ್ತುತ ನಡೆಯುತ್ತಿರುವ ಶಾಂತಿ ಮಾತುಕತೆಗಳಿಗೆ ಅಮೆರಿಕದ ಅತಿಯಾದ ಬೇಡಿಕೆಗಳೇ ಪ್ರಮುಖ ಅಡ್ಡಿಯಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಆರೋಪಿಸಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ ಎಂದು 'ಅಲ್ ಜಜೀರಾ' ವರದಿ ಮಾಡಿದೆ.
.ಚುರುಮುರಿ: ಪಾರ್ಲೆ ವರ್ಸಸ್ ಜಿರ್ಲೆ!.ಚಿತ್ತಾಪುರದಲ್ಲಿ ಟ್ಯಾಂಕರ್ – ಕ್ರೂಸರ್ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು.
ಅಮೆರಿಕದ ಗೊಂದಲಕಾರಿ ನಿಲುವುಗಳು ಮತ್ತು ಮಿಲಿಟರಿ ಆಕ್ರಮಣಶೀಲತೆಯ ಮೂಲಕ ರಾಜತಾಂತ್ರಿಕ ಪ್ರಯತ್ನಗಳನ್ನು ನಿರಂತರವಾಗಿ ಹಳಿತಪ್ಪಿಸುತ್ತಿದೆ. ಆದಾಗ್ಯೂ, ಇರಾನ್ ಕದನ ವಿರಾಮದ ಮಾತುಕತೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಅರಾಗ್ಚಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್, ಯಾವುದೇ ದೇಶದ ಸಾರ್ವಭೌಮತ್ವದ ವಿರುದ್ಧ ಬಲಪ್ರಯೋಗ ಮಾಡುವುದನ್ನು ವಿರೋಧಿಸಿದ್ದು, ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ.

ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ?

ಮತ್ತೊಂದೆಡೆ, ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಸಿದ್ಧತೆ ನಡೆಸುತ್ತಿದೆ ಎಂದು 'ಸಿಬಿಎಸ್ ನ್ಯೂಸ್' ವರದಿ ಮಾಡಿದೆ. ದಾಳಿಯ ಕುರಿತು ಇನ್ನು ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಸಂಭವನೀಯ ದಾಳಿಯ ಮುನ್ಸೂಚನೆಯಿಂದಾಗಿ ಅಮೆರಿಕದ ಮಿಲಿಟರಿ ಮತ್ತು ಗುಪ್ತಚರ ಇಲಾಖೆಯ ಹಲವು ಅಧಿಕಾರಿಗಳು ತಮ್ಮ 'ಮೆಮೋರಿಯಲ್ ಡೇ' ವಾರಾಂತ್ಯದ ರಜಾದಿನಗಳ ಯೋಜನೆಯನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
.ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 23 ಮೇ 2026.ಬುಡಕಟ್ಟು ಜನರ ದುಃಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದ ಚಂಪೈ ಸೊರೇನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.