ಟೆಹರಾನ್: ಅಮೆರಿಕ ಹಾಗೂ ಇಸ್ರೇಲ್ ವಿರುದ್ಧದ ಯುದ್ಧದಿಂದ ಇರಾನ್ ಕೊಂಚ ಕುಗ್ಗಿದೆ. ಆದರೆ, ಸಂಪೂರ್ಣ ನಾಶವಾಗಿಲ್ಲ. ಇರಾನ್ ಪರಮಾಣು ಕೇಂದ್ರಗಳು ಮತ್ತು ಸೇನೆಯನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ತೀವ್ರ ದಾಳಿ ನಡೆಸಿವೆ. ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಸಾರಿಗೆ ವ್ಯವಸ್ಥೆ ಮೇಲೂ ದಾಳಿ ನಡೆದಿದೆ. ಆದರೂ ಇಸ್ಲಾಮಿಕ್ ರಾಷ್ಟ್ರವು ಕಳೆದ ಐದು ದಶಕಗಳಲ್ಲಿ ನಿರ್ಮಿಸಿರುವ ಗಣನೀಯ ಪ್ರಮಾಣದ ಶಸ್ತ್ರಾಸ್ತ್ರ ಶಕ್ತಿಯನ್ನು ಇನ್ನೂ ಹೊಂದಿದೆ ಎಂದು ವರದಿ ತಿಳಿಸಿದೆ.

ಇರಾನ್ ಸೇನೆ ಹೇಗೆ ಕಾರ್ಯನಿರ್ವಹಿಸುತ್ತದೆ?

ಇರಾನ್ ಮಿಲಿಟರಿಯಲ್ಲಿ ಎರಡು ವಿಭಾಗಗಳಿವೆ. ಒಂದು ಸಾಮಾನ್ಯ ಮಿಲಿಟರಿ ಅಥವಾ ಅರ್ಟೇಶ್, ಮತ್ತೊಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್. ಅರ್ಟೇಶ್ ಪ್ರಾದೇಶಿಕ ಭದ್ರತೆ ಬಗ್ಗೆ ಗಮನ ಹರಿಸಿದರೆ, ರೆವಲ್ಯೂಷನರಿ ಗಾರ್ಡ್ಸ್ ವೃತ್ತಿಪರ ಮಿಲಿಟರಿ ಪಡೆಯಾಗಿದ್ದು, ಬಾಹ್ಯ ಆತಂಕಗಳ ವಿರುದ್ಧ ಹೋರಾಡುತ್ತದೆ.

2003ರ ಅಮೆರಿಕ-ಇರಾಕ್ ಯುದ್ಧದ ಸಮಯದಲ್ಲಿ ಅಮೆರಿಕದ ಪಡೆಗಳನ್ನು ಗುರಿಯಾಗಿಸಿಕೊಂಡಿದ್ದ ದಂಗೆಕೋರರಿಗೆ ಸುಧಾರಿತ ಸ್ಫೋಟಕ ಸಾಧನಗಳನ್ನು ಇರಾನ್ ಒದಗಿಸುವ ಮೂಲಕ ಕ್ರಾಂತಿಕಾರಿ ಗಾರ್ಡ್ ಪ್ರಮುಖ ಪಾತ್ರ ವಹಿಸಿತ್ತು. ಕಳೆದ ಕೆಲವು ದಶಕಗಳಲ್ಲಿ ತನ್ನ ಗಡಿಗಳನ್ನು ಮೀರಿ ಮಿಲಿಟರಿ ಪ್ರಭಾವ ಬೀರುವುದನ್ನು ಕಲಿತಿದೆ. ಆ ತಂತ್ರಗಳಲ್ಲಿ ಒಂದು ಸೈಬರ್ ಯುದ್ಧ. ಇದಕ್ಕೆ ತುಲನಾತ್ಮಕವಾಗಿ ಕಡಿಮೆ ವೆಚ್ಚ ತಗಲುವ ಜೊತೆಗೆ ಪರಿಣಾಮಕಾರಿಯೂ ಆಗಿದೆ. ಸೈಬರ್ ಯುದ್ಧದಲ್ಲಿ ಅವರ ಗುರಿ ಪಾಶ್ಚಿಮಾತ್ಯ ಮಿಲಿಟರಿ ಮತ್ತು ಸರ್ಕಾರಿ ಜಾಲಗಳಾಗಿವೆ. ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಅವರ ವೈಯಕ್ತಿಕ ಇಮೇಲ್ಗಳು ಇತ್ತೀಚೆಗೆ ಆನ್ಲೈನ್ನಲ್ಲಿ ಸೋರಿಕೆಯಾಗಿದ್ದವು. ಇರಾನ್ ಬೆಂಬಲಿತ ಹ್ಯಾಕರ್ಗಳು ಅಮೆರಿಕದ ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳು ಮತ್ತು ವಿದ್ಯುತ್ ಗ್ರಿಡ್ಗಳು ಸೇರಿದಂತೆ ಮೂಲಸೌಕರ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದರು.

ಅಗ್ನಿಶಕ್ತಿಯ ವಿಚಾರಕ್ಕೆ ಬಂದಾಗ, ಅಮೆರಿಕಾ ‘ಆಪರೇಷನ್ ಎಪಿಕ್ ಫ್ಯೂರಿ’ ಆರಂಭಿಸುವ ಮುನ್ನ ಇರಾನ್ ಬಳಿ ಸುಮಾರು 3,000 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ದಶಲಕ್ಷಾಂತರ ಡ್ರೋನ್ ದಾಳಿ ಇದ್ದವೆಂದು ಅಂದಾಜಿಸಲಾಗಿತ್ತು.

ಇನ್ನು, ಯುದ್ಧ ಸಾಮಗ್ರಿಗಳ ವಿಷಯಕ್ಕೆ ಬಂದರೆ ಅಮೆರಿಕದ ದಾಳಿಗೂ ಮುನ್ನ ಇರಾನ್ 3,000 ಖಂಡಾಂತರ ಕ್ಷಿಪಣಿ ಮತ್ತು ಹತ್ತಾರು ಸಾವಿರು ಏಕಮಾರ್ಗ ಡ್ರೋನ್ಗಳನ್ನು ಹೊಂದಿತ್ತು. ಹೆಚ್ಚಿನ ಆಧುನಿಕ ಇರಾನಿನ ಮಿಲಿಟರಿ ಉಪಕರಣಗಳು ರಿವರ್ಸ್ ಇಂಜಿನಿಯರಿಂಗ್ನ ಅಮೆರಿಕ ಮತ್ತು ಸೋವಿಯತ್ ಉಪಕರಣಗಳನ್ನು ಒಳಗೊಂಡಿರುತ್ತವೆ ಎಂದು ಹೇಳಲಾಗುತ್ತದೆ. ಆದರೂ, 1990ರಿಂದ ದೇಶೀಯ ಉತ್ಪಾದನೆ ಮತ್ತು ಉತ್ತರ ಕೊರಿಯಾ ಸೇರಿದಂತೆ ಇತರ ದೇಶಗಳಿಂದ ಪರಿಣತಿಯನ್ನು ಆಮದು ಮಾಡಿಕೊಳ್ಳುವುದರ ಪರಿಣಾಮ ಇರಾನಿನ ಕ್ಷಿಪಣಿ ತಂತ್ರಜ್ಞಾನವು ಗಣನೀಯವಾಗಿ ಸುಧಾರಿಸಿದೆ.

1990ರ ಆರಂಭದಿಂದಲೂ ಇರಾನ್ ಡ್ರೋನ್ಗಳ ಸರಣಿಯನ್ನು ಅಭಿವೃದ್ಧಿಪಡಿಸಿದೆ. ಇವು ದೂರದ ಗುರಿಗಳ ಮೇಲೆ ದಾಳಿ ಮಾಡಲು ತುಲನಾತ್ಮಕವಾಗಿ ಅಗ್ಗದ ಮಾರ್ಗವಾಗಿದೆ. ವರದಿಗಳ ಪ್ರಕಾರ, ಯುದ್ಧದಲ್ಲಿ ಇಸ್ರೇಲ್ ಮೇಲೆ 650 ಕ್ಷಿಪಣಿ ದಾಳಿ ನಡೆಸಿರುವ ಇರಾನ್, ಇತರೆ ಗುರಿಗಳ ಮೇಲೆ ನೂರಾರು ಕ್ಷಿಪಣಿ ದಾಳಿ ನಡೆಸಿದೆ. ಅಮೆರಿಕ, ಇಸ್ರೇಲ್ ದಾಳಿ ಬಳಿಕ ಇರಾನ್ ಶಸ್ತ್ರಾಸ್ತ್ರಗಳಲ್ಲಿ ಕುಸಿತ ಕಂಡುಬಂದಿದೆ. ಆದರೆ, ಇನ್ನೂ ಗಮನಾರ್ಹ ಪ್ರಮಾಣದ ದೀರ್ಘ ಶ್ರೇಣಿಯ ಅಸ್ತ್ರಗಳನ್ನು ಇರಾನ್ ಹೊಂದಿದೆ ಎನ್ನುತ್ತಾರೆ ವಿಶ್ಲೇಷಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.