ಕೈರೊ/ಟೆಹರಾನ್: ಅಮೆರಿಕ ತನ್ನ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬೇಕು ಹಾಗೂ ತನ್ನ ವಿರುದ್ಧ ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸಬೇಕು. ಆಗ, ಅದಕ್ಕೆ ಪ್ರತಿಯಾಗಿ ಹೊರ್ಮುಜ್ ಜಲಸಂಧಿ
ಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಇರಾನ್ ಪ್ರಸ್ತಾವ ಮುಂದಿಟ್ಟಿದೆ.

ಈ ಬೇಡಿಕೆಗಳು ಈಡೇರಿದ ಬಳಿಕ, ಅಣ್ವಸ್ತ್ರ ಕಾರ್ಯಕ್ರಮ ಕುರಿತು ಚರ್ಚೆ ನಡೆಸಲಾಗುವುದು ಎಂಬ ಅಂಶವನ್ನು ಸಹ ಇರಾನ್ ಮುಂದಿಟ್ಟಿರುವ ಪ್ರಸ್ತಾವ ಒಳಗೊಂಡಿದೆ ಎಂದು ಈ ಬೆಳವಣಿಗೆಗಳ ಕುರಿತು ಮಾಹಿತಿ ಇರುವ ಇಬ್ಬರು ಪ್ರಾದೇಶಿಕ ಅಧಿಕಾರಿಗಳು ಹೇಳಿದ್ದಾರೆ.

ಇರಾನ್ನ ಈ ಪ್ರಸ್ತಾವವನ್ನು ಅಮೆರಿಕ ಒಪ್ಪುವ ಸಾಧ್ಯತೆ ಕಡಿಮೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಅಮೆರಿಕ ಕಾರಣ’:

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಸೋಮವಾರ ರಷ್ಯಾಕ್ಕೆ ಭೇಟಿ ನೀಡಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಕದನ ವಿರಾಮದ ಹೊರತಾಗಿಯೂ ಮುಂದುವರಿದಿದೆ. ಉಭಯ ದೇಶಗಳ ನಡುವೆ ಸ್ಥಗಿತಗೊಂಡಿರುವ ಮಾತುಕತೆಗೆ ಮರುಜೀವ ನೀಡಲು ಪಾಕಿಸ್ತಾನ ನಾಯಕರು
ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನ, ಒಮಾನ್ ಬಳಿಕ ರಷ್ಯಾಕ್ಕೆ ಅಬ್ಬಾಸ್ ಅರಾಘ್ಚಿ ಭೇಟಿ ನೀಡಿದ್ದು, ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ, ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಮಾತನಾಡಿದ ಅವರು, ‘ಶಾಂತಿ ಮಾತುಕತೆ ವಿಫಲವಾಗಲು ಅಮೆರಿಕವೇ ಕಾರಣ. ಅಮೆರಿಕ ಮುಂದಿಟ್ಟ ವಿಪರೀತ ಬೇಡಿಕೆಗಳಿಂದಾಗಿ ಶಾಂತಿ ಮಾತುಕತೆಗಾಗಿ ಕರೆದಿದ್ದ ಸಭೆಯು ಯಾವುದೇ ಗುರಿ ಸಾಧಿಸಲು ವಿಫಲವಾಯಿತು’ ಎಂದು ಆರೋಪಿಸಿದ್ದಾಗಿ ಇರಾನ್ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

38 ಹಡಗು ವಾಪಸ್:

‘ತನ್ನ ಬಂದರುಗಳ ಮೇಲಿನ ದಿಗ್ಬಂಧನವನ್ನು ಅಮೆರಿಕ ತೆರವುಗೊಳಿಸಬೇಕು’ ಎಂದು ಇರಾನ್ ಒತ್ತಾಯಿಸಿದ ಬಳಿಕ, ಶನಿವಾರ ಇಸ್ಲಾಮಾಬಾದ್ಗೆ ಮಾತುಕತೆಗಾಗಿ ತೆರಳಬೇಕಿದ್ದ ಉನ್ನತ ನಿಯೋಗದ ಭೇಟಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಗೊಳಿಸಿದ್ದರು. ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ಸೋಮವಾರ ಮಾಹಿತಿ ನೀಡಿದಂತೆ, ಈ ದಿಗ್ಬಂಧನದ ಅವಧಿಯಲ್ಲಿ ಇದುವರೆಗೆ 38 ಹಡಗುಗಳನ್ನು ವಾಪಸ್ ಕಳುಹಿಸಲಾಗಿದೆ.

ಯುದ್ಧ ಪ್ರಾರಂಭವಾದ ಬಳಿಕ ಈವರೆಗೆ, ಇರಾನ್ನಲ್ಲಿ 3,375 ಜನರು, ಲೆಬನಾನ್ನಲ್ಲಿ 2,509, ಇಸ್ರೇಲ್ನಲ್ಲಿ 23 ಮತ್ತು ಕೊಲ್ಲಿ ಅರಬ್ ರಾಷ್ಟ್ರಗಳಲ್ಲಿ 12 ಜನ ಮೃತಪಟ್ಟಿದ್ದಾರೆ.

ಲೆಬನಾನ್ನಲ್ಲಿ ಇಸ್ರೇಲ್ನ 15 ಯೋಧರು, ಅಮೆರಿಕದ 13 ಮಂದಿ ಮತ್ತು ದಕ್ಷಿಣ ಲೆಬನಾನ್ನಲ್ಲಿ ವಿಶ್ವಸಂಸ್ಥೆಯ ಆರು ಶಾಂತಿಪಾಲಕರು ಮೃತಪಟ್ಟಿದ್ದಾರೆ.

ಯುದ್ಧ: ಟ್ರಂಪ್ ಚರ್ಚೆ?

ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಕುರಿತಂತೆ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಉನ್ನತ ಅಧಿಕಾರಿಗಳು ಹಾಗೂ ಸಲಹೆಗಾರರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಸಭೆ ನಡೆಸುವ ಸಾಧ್ಯತೆ ಇದೆ’ ಎಂದು ಅಮೆರಿಕದ ಮಾಧ್ಯಮ ಸಂಸ್ಥೆ ‘ಆಕ್ಸಿಯೋಸ್’ ವರದಿ ಮಾಡಿದೆ.

ಶಾಂತಿ ಸ್ಥಾಪಿಸಲು ನೆರವು: ಪುಟಿನ್

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಸೋಮವಾರ ಭೇಟಿಯಾಗಿ ಚರ್ಚಿಸಿದರು.

‘ಇರಾನ್ ಜನರು ತಮ್ಮ ಸಾರ್ವಭೌಮತ್ವಕ್ಕಾಗಿ ಧೈರ್ಯದಿಂದ ಹೋರಾಡುತ್ತಿದ್ದಾರೆ’ ಎಂದು ಶ್ಲಾಘಿಸಿದ ಪುಟಿನ್, ‘ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಇರಾನ್ ಮತ್ತು ಈ ಪ್ರದೇಶದ ಇತರ ದೇಶಗಳ ಹಿತದೃಷ್ಟಿಯಿಂದ ರಷ್ಯಾ ಸಾಧ್ಯವಿರುವ ಎಲ್ಲ ನೆರವನ್ನೂ ನೀಡಲಿದೆ’ ಎಂದು ಹೇಳಿದ್ದಾರೆ.

ಹೊರ್ಮುಜ್ ಜಲಸಂಧಿ ಮೂಲಕ ಕಚ್ಚಾ ತೈಲ ಹೊತ್ತ ಹಡಗುಗಳ ಸುರಕ್ಷಿತ ಸಂಚಾರ ಸಾಧ್ಯವಾಗಬೇಕು. ಇದು ಪ್ರಮುಖ ಜಾಗತಿಕ ವಿಚಾರವಾಗಿದೆ.
-ಅಬ್ಬಾಸ್ ಅರಾಘ್ಚಿ, ಇರಾನ್ ವಿದೇಶಾಂಗ ಸಚಿವ

ಭಾರತೀಯರಿದ್ದ ಹಡಗಿನತ್ತ ಗುಂಡು

ನವದೆಹಲಿ: ‘ಹೊರ್ಮುಜ್ ಜಲಸಂಧಿಯ ಆಗ್ನೇಯ ಭಾಗದಲ್ಲಿ ಸಾಗುತ್ತಿದ್ದ ಟೋಗೊ ಬಾವುಟವಿರುವ ತೈಲ ಹೊತ್ತ ಟ್ಯಾಂಕರ್ ಎಂ.ಟಿ ಚಿರಾನ್–7 ಅನ್ನು ಗುರಿಯಾಗಿಸಿ ಏಪ್ರಿಲ್ 25ರಂದು ಇರಾನ್ ಕೋಸ್ಟ್ ಗಾರ್ಡ್ ದಾಳಿ ನಡೆಸಿದೆ. ಈ ಹಡಗಿನಲ್ಲಿ 17 ಜನ ಭಾರತೀಯರಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ’ ಎಂದು ಬಂದರು ಹಾಗೂ ಜಲಮಾರ್ಗಗಳ ಸಚಿವಾಲಯದ ನಿರ್ದೇಶಕ ಮನ್ದೀಪ್ ಸಿಂಗ್ ರಂಧಾವಾ ಸೋಮವಾರ ಹೇಳಿದ್ದಾರೆ.

‘ಬಂದರು ಮತ್ತು ಜಲಮಾರ್ಗಗಳ ಸಚಿವಾಲಯವು ವಿದೇಶಾಂಗ ಸಚಿವಾಲಯ, ವಿವಿಧ ದೇಶಗಳಲ್ಲಿನ ಭಾರತದ ರಾಯಭಾರ ಕಚೇರಿಗಳು ಹಾಗೂ ಸಾಗರಯಾನ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ವಿವಿಧ ಹಡಗುಗಳಲ್ಲಿನ ಭಾರತೀಯ ಸಿಬ್ಬಂದಿಯ ಸುರಕ್ಷತೆಯನ್ನು ಖಾತ್ರಿಪಡಿಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

‘ಕಳೆದ 24 ಗಂಟೆಗಳಲ್ಲಿ, ಭಾರತೀಯರನ್ನು ಒಳಗೊಂಡ ಅಹಿತಕರ ಘಟನೆಗಳು ನಡೆದ ವರದಿಗಳು ಇಲ್ಲ’ ಎಂದು ಅವರು ಹೇಳಿದ್ದಾರೆ.

ದಿನದ ಬೆಳವಣಿಗೆ

l ಇರಾನಿನ ಕಚ್ಚಾ ತೈಲ ಖರೀದಿಸಿದ್ದಕ್ಕಾಗಿ ತನ್ನ ಸಂಸ್ಕರಣಾಗಾರವೊಂದರ ಮೇಲೆ ಅಮೆರಿಕ ಹೇರಿದ ನಿರ್ಬಂಧಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ

l ದಕ್ಷಿಣ ಲೆಬನಾನ್ನಲ್ಲಿ ಯುದ್ಧದ ಸಮಯದಲ್ಲಿ ತನ್ನ ಯೋಧ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.