ಟೆಹರಾನ್: ನಮ್ಮ ದೇಶದ ಮೇಲೆ ಅಮೆರಿಕ-ಇಸ್ರೇಲ್ ಯುದ್ಧ ಪುನರಾರಂಭವಾಗುವ ಸಂಭವವಿದೆ ಎಂದು ಇರಾನ್ನ ಸಶಸ್ತ್ರ ಪಡೆಗಳ ಉಪ ಮುಖ್ಯಸ್ಥರು ಹೇಳಿದ್ದು, ಅಮೆರಿಕವು ಯಾವುದೇ ಒಪ್ಪಂದಕ್ಕೆ ಬದ್ಧವಾಗದೇ ಇರುವುದು ಇದಕ್ಕೆ ಸಾಕ್ಷಿಯಗಿದೆ ಎಂದು ಹೇಳಿದ್ದಾರೆ.

ಮಿಲಿಟರಿ ಪ್ರಧಾನ ಕಚೇರಿಯ ಉಪ ಮುಖ್ಯಸ್ಥ ಮೊಹಮ್ಮದ್ ಜಾಫರ್ ಅಸಾದಿ ಇರಾನ್ನ ಫಾರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ಹೀಗೆ ಹೇಳಿದ್ದಾರೆ. ಅಮೆರಿಕದ ಅಧಿಕಾರಿಗಳ ಇತ್ತೀಚಿನ ನಡೆ ಮತ್ತು ಹೇಳಿಕೆಗಳು ರಾಜತಾಂತ್ರಿಕ ಒಪ್ಪಂದಕ್ಕೆ ಬದ್ಧತೆಯ ಕೊರತೆಯನ್ನು ಸೂಚಿಸುತ್ತವೆ ಎಂದು ಅವರು ಆರೋಪಿಸಿದ್ದಾರೆ.

‘ಮಾಧ್ಯಮಗಳಲ್ಲಿ ವರದಿಯಾಗಿರುವ ಅಮೆರಿಕದ ಅಧಿಕಾರಿಗಳ ಕ್ರಮಗಳು ಮತ್ತು ಹೇಳಿಕೆಗಳು ತೈಲ ಬೆಲೆ ಇಳಿಕೆಯನ್ನು ತಡೆಯುವ ಮತ್ತು ತಾವೇ ಸೃಷ್ಟಿಸಿರುವ ಅವ್ಯವಸ್ಥೆಯಿಂದ ತಮ್ಮನ್ನು ಮುಕ್ತಗೊಳಿಸುವ ಗುರಿಯನ್ನು ಹೊಂದಿವೆ’ ಎಂದು ಅಸಾದಿ ಹೇಳಿದ್ದಾರೆ.

ಇರಾನ್ನ ಸಶಸ್ತ್ರ ಪಡೆಗಳು ಹೆಚ್ಚಿನ ಜಾಗರೂಕತೆಯಿಂದ ಇರುತ್ತವೆ. ಯಾವುದೇ ಆಕ್ರಮಣಕ್ಕೆ ತಕ್ಕ ಪ್ರತಿಕ್ರಿತೆ ನೀಡಲು ಸಿದ್ಧವಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಂಧಾನಕ್ಕೆ ಇರಾನ್ ನೀಡಿದ್ದ ಹೊಸ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ ಹಿನ್ನೆಲೆ ಇರಾನ್ ಈ ನಿಲುವಿಗೆ ಬಂದಿದೆ ಎಂದು ಸುದ್ದಿ ಸಂಸ್ಥೆ ಐಆರ್ಎನ್ಎ ವರದಿ ಮಾಡಿದೆ.

ಸಂಧಾನಕ್ಕೆ ಮುಂದೆ ಬಂದಿರುವ ಇರಾನ್ ಕೆಲ ವಿನಾಯಿತಿ ಕೇಳುತ್ತಿದ್ದು, ಅದಕ್ಕೆ ನನಗೆ ಒಪ್ಪಿಗೆ ಇಲ್ಲ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅವರ ಪ್ರಸ್ತಾವದ ಬಗ್ಗೆ ನನಗೆ ತೃಪ್ತಿ ಇಲ್ಲ ಎಂದಿದ್ದಾರೆ.

ಸಂಧಾನ ಮಾತುಕತೆ ನಡೆಯುತ್ತಿದ್ದರೂ ಯುದ್ಧ ಅಂತ್ಯಗೊಂಡಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.