ಟೆಹರಾನ್: ಹಡಗುಗಳು ಸಾಗುವ ಹೊರ್ಮುಜ್ ಜಲಸಂಧಿಯ ಪ್ರಮುಖ ಜಾಗ ಇರಾನ್ ಹಿಡಿತದಲ್ಲಿದೆ. ಈ ಜಲಮಾರ್ಗದ ಮೂಲಕ ಸಾಗಲು ಯತ್ನಿಸುವ ಇಲ್ಲವೇ ಯಾವುದೇ ದುಸ್ಸಾಹಸ ಮಾಡುವ ಶತ್ರುಗಳನ್ನು ಭಯಾನಕ ‘ಮೃತ್ಯು ಸುಳಿ’ಯಲ್ಲಿ ಸಿಲುಕಿಸಲಾಗುವುದು ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್(ಐಆರ್ಜಿಸಿ) ಭಾನುವಾರ ಬೆದರಿಕೆ ಹಾಕಿದೆ.

ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ದಿಗ್ಬಂಧನ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ ಬೆನ್ನಲ್ಲೇ, ಐಆರ್ಜಿಸಿ ಈ ಎಚ್ಚರಿಕೆ ನೀಡಿದೆ.

‘ಈ ಜಲಮಾರ್ಗದ ಮೂಲಕ ನಡೆಯುವ ಹಡಗುಗಳ ಸಂಚಾರ ನಮ್ಮ ಸಶಸ್ತ್ರ ಪಡೆಗಳ ನಿಯಂತ್ರಣದಲ್ಲಿದೆ’ ಎಂದು ಐಆರ್ಜಿಸಿಯ ನೌಕಾ ಕಮಾಂಡ್ ಪರ್ಷಿಯನ್ ಭಾಷೆಯಲ್ಲಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.

ವರದಿ: ಎಎಫ್ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.