ಟೆಹರಾನ್: ಹೊರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಚ್ಚಲಾಗಿದ್ದು, ಇಲ್ಲಿನ ಸಾಗರ ಹಾದಿಯಲ್ಲಿ ಸಂಚಾರಕ್ಕೆ ಯತ್ನಿಸಿದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (ಐಆರ್ಜಿಸಿ) ಎಚ್ಚರಿಸಿದೆ.

ಇಸ್ರೇಲ್-ಅಮೆರಿಕ ಮತ್ತು ಅದರ ಬೆಂಬಲಿಗರಿಗೆ ಹೊರ್ಮುಜ್ ಜಲಸಂಧಿ ಮೂಲಕ ಯಾವುದೇ ಗಮ್ಯಸ್ಥಾನಕ್ಕೆ ಸಂಚಾರ ಅನುವು ಮಾಡಿಕೊಡುವುದಿಲ್ಲ ಎಂದಿದೆ.
.ಹೊರ್ಮುಜ್ ಜಲಸಂಧಿ ಸಮೀಪ ಇರಾನ್ ಕ್ಷಿಪಣಿ ತಾಣಗಳ ಮೇಲೆ ಅಮೆರಿಕ ಬಾಂಬ್ ದಾಳಿ.ಹೊರ್ಮುಜ್ ಜಲಸಂಧಿ ನಿಯಂತ್ರಣಕ್ಕೆ ಪಡೆಯಲು ಹೆಚ್ಚು ಸಮಯ ಬೇಕಿಲ್ಲ: ಟ್ರಂಪ್.
ಐಆರ್ಜಿಸಿ ಬೆದರಿಕೆಯ ಬೆನ್ನಲ್ಲೇ ಹಲವು ರಾಷ್ಟ್ರಗಳ ತೈಲ ತುಂಬಿದ ಟ್ಯಾಂಕರ್ಗಳು ಜಲಸಂಧಿಯ ಸಮೀಪದಲ್ಲಿ ಸಿಲುಕಿಕೊಂಡಿವೆ ಎಂದು ವರದಿಯಾಗಿದೆ.

ಈ ಮೊದಲು ಭಾರತ ಸೇರಿದಂತೆ ಐದು ಮಿತ್ರ ರಾಷ್ಟ್ರಗಳಿಗೆ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿರುವುದಾಗಿ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಹೇಳಿದ್ದರು.

ಭಾರತ, ಚೀನಾ, ರಷ್ಯಾ, ಇರಾಕ್ ಮತ್ತು ಪಾಕಿಸ್ತಾನದತ್ತ ತೆರಳುವ ಸರಕು ಸಾಗಣೆ ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಅವಕಾಶ ನೀಡಿದ್ದೇವೆ ಎಂದು ಅವರು ಹೇಳಿಕೆ ನೀಡಿದ್ದರು.

ಇರಾನ್ನ 120 ಐತಿಹಾಸಿಕ ಸ್ಥಳಗಳಿಗೆ ಹಾನಿ...

ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ದೇಶದಾದ್ಯಂತ ಕನಿಷ್ಠ 120 ವಸ್ತು ಸಂಗ್ರಹಾಲಯಗಳು, ಸಾಂಸ್ಕೃತಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಹಾನಿಯಾಗಿವೆ ಎಂದು ಇರಾನ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.