ಅಬುಧಾಬಿ/ದೋಹಾ: ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಸೇನಾ ದಾಳಿಗೆ ಪ್ರತೀಕಾರ ತೀರಿಸಿ ಕೊಳ್ಳಲು ಮುಂದಾಗಿರುವ ಇರಾನ್, ದುಬೈ, ದೋಹಾ ಮತ್ತು ಮನಾಮ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಅಮೆರಿಕದ ಸೇನಾ ನೆಲೆಗಳು ಸೇರಿದಂತೆ ಗಲ್ಫ್ನಾದ್ಯಂತ ಇರುವ ಅಮೆರಿಕದ ರಾಯಭಾರ ಕಚೇರಿಗಳು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯ ಕೈಗಾರಿಕಾ ವಲಯದಲ್ಲಿ ಗುರುವಾರ ಡ್ರೋನ್ನ ಅವಶೇಷಗಳು ಬಿದ್ದು ಆರು ಜನರು ಗಾಯಗೊಂಡಿದ್ದಾರೆ.

‘ಇರಾನ್ ಹಾರಿಸಿದ ಡ್ರೋನ್ ಅನ್ನು ನಮ್ಮ ವಾಯು ರಕ್ಷಣಾ ಪಡೆಗಳು ಯಶಸ್ವಿಯಾಗಿ ತಡೆದವು. ಆದರೆ, ಎರಡು ಸ್ಥಳಗಳಲ್ಲಿ ಡ್ರೋನ್ನ ಅವಶೇಷಗಳು ಬಿದ್ದಿದ್ದರಿಂದ ಪಾಕಿಸ್ತಾನ ಹಾಗೂ ನೇಪಾಳದ ಪ್ರಜೆಗಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ’ ಎಂದು ಅಬುಧಾಬಿ ಎಮಿರೇಟ್ನ ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್ ಶನಿವಾರ ದಾಳಿ ಆರಂಭಿಸಿ ದಾಗಿನಿಂದ ಕೊಲ್ಲಿಯಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಏಳು ನಾಗರಿಕರು ಸೇರಿದ್ದಾರೆ. ಕುವೈತ್ನಲ್ಲಿ ನಾಲ್ವರು ಸೇರಿದಂತೆ ಅಮೆರಿಕದ ಆರು ಯೋಧರು ಮೃತಪಟ್ಟಿದ್ದಾರೆ ಎಂದು ಅಮೆರಿಕ ತಿಳಿಸಿದೆ.

ದೋಹಾದಲ್ಲಿ ಸರಣಿ ಸ್ಫೋಟ: ಕತಾರ್ ರಾಜಧಾನಿ ದೋಹಾದಲ್ಲಿ ಗುರುವಾರ ಸರಣಿ ಸ್ಫೋಟದ ಶಬ್ದಗಳು ಕೇಳಿಬಂದಿವೆ.

‘ಅಮೆರಿಕ ರಾಯಭಾರ ಕಚೇರಿಯ ಸಮೀಪ ವಾಸಿಸುತ್ತಿರುವ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ’ ಎಂದು ದೋಹಾದ ಅಧಿಕಾರಿಗಳು ತಿಳಿಸಿದ ಕೆಲವೇ ಗಂಟೆಗಳ ನಂತರ ಸ್ಫೋಟದ ಸದ್ದು ಕೇಳಿಬಂದಿದೆ. ದೋಹಾ ನಗರದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ.

ಇರಾನ್ ತನ್ನ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಆರಂಭಿಸಿದ ನಂತರ, ಉಭಯ ದೇಶಗಳ ನಡುವಿನ ಮೊದಲ ಉನ್ನತ ಮಟ್ಟದ ಮಾತುಕತೆ ವೇಳೆ ಕತಾರ್ ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ಅಬ್ದುಲ್ರಹಮಾನ್ ಅಲ್ ಥಾನಿ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರನ್ನು ಟೀಕಿಸಿದ್ದರು.

‘ಇರಾನ್ ತನ್ನ ನೆರೆಹೊರೆಯವರಿಗೆ ಹಾನಿ ಮಾಡಲು ಮತ್ತು ಅವರದಲ್ಲದ ಯುದ್ಧಕ್ಕೆ ಎಳೆಯಲು ಪ್ರಯತ್ನಿಸುತ್ತಿದೆ’ ಎಂದು ಕತಾರ್ ಪ್ರಧಾನಿ ಆರೋಪಿಸಿ ದ್ದರು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕತಾರ್ ಅನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ಬಹರೇನ್ ರಾಜಧಾನಿ ಮನಾಮ ದಲ್ಲಿಯೂ ಸ್ಫೋಟಗಳು ಸಂಭವಿಸಿವೆ.

‘ಸೌದಿ ಅರೇಬಿಯಾದ ಅಲ್–ಖರ್ಜ್ ನಗರದ ಹೊರಗೆ ಮೂರು ಕ್ರೂಸ್ ಕ್ಷಿಪಣಿಗಳು ಮತ್ತು ಹಲವಾರು ಡ್ರೋನ್ಗಳನ್ನು ಹೊಡೆದುರುಳಿಸ ಲಾಗಿದೆ’ ಎಂದು ಸೌದಿ ರಕ್ಷಣಾ ಸಚಿವಾಲಯ ‘ಎಕ್ಸ್’ನಲ್ಲಿ ತಿಳಿಸಿದೆ.

ಮತ್ತೊಂದೆಡೆ, ಕುವೈತ್ ಸಮೀಪವಿರುವ ಸಮುದ್ರದಲ್ಲಿ ತೈಲ ಟ್ಯಾಂಕರ್ನಲ್ಲಿ ಸ್ಫೋಟ ಸಂಭವಿಸಿದ್ದು, ಇದರಿಂದಾಗಿ ತೈಲ ಸೋರಿಕೆಯಾಗಿದೆ ಎಂದು ಬ್ರಿಟನ್ನ ಕಡಲ ಭದ್ರತಾ ಸಂಸ್ಥೆ ಯುಕೆಎಂಟಿಒ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.