ದುಬೈ: ಪಶ್ಚಿಮ ಏಷ್ಯಾ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಹಿಂದೂ ಮಹಾಸಾಗರದ ಡಿಯೆಗೊ ಗಾರ್ಸಿಯಾ ದ್ವೀಪದಲ್ಲಿರುವ ಬ್ರಿಟನ್ ಮತ್ತು ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ಎರಡು ‘ಬ್ಯಾಲಿಸ್ಟಿಕ್ ಕ್ಷಿಪಣಿ’ಗಳ ಮೂಲಕ ಶನಿವಾರ ದಾಳಿ ನಡೆಸಿದೆ. ಆದರೆ, ಆ ಕ್ಷಿಪಣಿಗಳು ಗುರಿ ತಲುಪುವಲ್ಲಿ ವಿಫಲವಾಗಿವೆ ಎಂದಿರುವ ಬ್ರಿಟನ್, ಅವು ತನ್ನ ಸೇನಾ ನೆಲೆಗೆ ಎಷ್ಟು ಸಮೀಪ ಬಂದಿದ್ದವು ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಇರಾನ್ನಿಂದ ಸುಮಾರು 4,000 ಕಿ.ಮೀ. ದೂರದಲ್ಲಿ ಈ ದ್ವೀಪವಿದೆ. ಇಷ್ಟು ದೂರದಲ್ಲಿರುವ ನೆಲೆಯನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಲ್ಲಿ ಅಚ್ಚರಿ ಮೂಡಿಸಿದೆ. ಟೆಹರಾನ್ ಬಳಿ ಹಿಂದೆ ಘೋಷಿಸಿದ್ದಕ್ಕಿಂತ ಹೆಚ್ಚು ವ್ಯಾಪ್ತಿಯ ಕ್ಷಿಪಣಿಗಳು ಇವೆ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ವರದಿಯೊಂದು ತಿಳಿಸಿದೆ.

ಇರಾನ್ ಬಳಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು 2,000 ಕಿ.ಮೀ. ವ್ಯಾಪ್ತಿಯ ಮಿತಿಯನ್ನು ಹೊಂದಿವೆ ಎಂಬುದಾಗಿ ಜಗತ್ತು ತಿಳಿದಿತ್ತು. ಆದರೆ ಡಿಯೆಗೊ ಗಾರ್ಸಿಯಾ ಮೇಲಿನ ದಾಳಿಯ ಯತ್ನವು ಇರಾನ್ ಕ್ಷಿಪಣಿಗಳ ವ್ಯಾಪ್ತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಡಿಯೆಗೊ ಗಾರ್ಸಿಯಾ ವಾಯುನೆಲೆಯು ಹಿಂದೂ ಮಹಾಸಾಗರದಲ್ಲಿ ಇರುವ ಚಾಗೋಸ್ ದ್ವೀಪ ಸಮೂಹದ ಭಾಗ. ಈ ದ್ವೀಪಗಳು 1814ರಿಂದ ಬ್ರಿಟಿಷ್ ನಿಯಂತ್ರಣದಲ್ಲಿದ್ದು, ಅಮೆರಿಕದ 2,500 ಸಿಬ್ಬಂದಿಗೆ ನೆಲೆಯಾಗಿದೆ. ಅಮೆರಿಕದ ಹಲವು ಕಾರ್ಯಾಚರಣೆಗಳಲ್ಲಿ ಇದು ಬಳಕೆಯಾಗಿದೆ.

ಬ್ರಿಟನ್ ಖಂಡನೆ: ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಬ್ರಿಟನ್ ತೀವ್ರವಾಗಿ ಖಂಡಿಸಿದೆ. ಈ ದಾಳಿ ಮೂಲಕ ಇರಾನ್ ಅಜಾಗರೂಕವಾಗಿ ವರ್ತಿಸಿದೆ ಎಂದು ಅದು ಟೀಕಿಸಿದೆ. ಅಲ್ಲದೆ, ಹೊರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸುವ ಯತ್ನ, ಬ್ರಿಟನ್ ಹಿತಾಸಕ್ತಿ ಮತ್ತು ಮಿತ್ರರಾಷ್ಟ್ರ ಭದ್ರತೆಗೆ ಬೆದರಿಕೆಯಾಗಿದೆ ಎಂದು ಬ್ರಿಟನ್ನ ರಕ್ಷಣಾ ಸಚಿವಾಲಯ ಆಕ್ರೋಶ ವ್ಯಕ್ತಪಡಿಸಿದೆ.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಲ್ಲಿ ಇಲ್ಲಿಯವರೆಗೆ ಬ್ರಿಟನ್ ನೇರವಾಗಿ ಭಾಗಿಯಾಗಿಲ್ಲ. ಆದರೆ, ಅಮೆರಿಕಕ್ಕೆ ತನ್ನ ನೆಲೆಗಳನ್ನು ಬಳಸಲು ಅವಕಾಶ ಮಾಡಿಕೊಟ್ಟಿದೆ. ಇದೀಗ ಇರಾನ್ ಕ್ಷಿಪಣಿ ದಾಳಿಯಿಂದ ಅದು ಕುಪಿತಗೊಂಡಿದೆ.

ಟ್ರಂಪ್, ಕಾಟ್ಜ್ ವ್ಯತಿರಿಕ್ತ ಹೇಳಿಕೆ: ‘ಪಶ್ಚಿಮ ಏಷ್ಯಾದಲ್ಲಿ ಸೇನಾ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸುತ್ತಿರುವುದಾಗಿ’ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ, ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಅವರು, ‘ಇರಾನ್ ಮೇಲಿನ ದಾಳಿಗಳು ಮುಂದಿನ ವಾರಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಲಿವೆ’ ಎಂದಿದ್ದಾರೆ. ಹೀಗಾಗಿ ಸದ್ಯಕ್ಕೆ ಯುದ್ಧ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಇರಾನ್ ತನ್ನ ಮೇಲೆ ಕ್ಷಿಪಣಿಗಳನ್ನು ಹಾರಿಸುವುದನ್ನು ಮುಂದುವರಿಸಿದೆ ಎಂದು ಇಸ್ರೇಲ್ ಹೇಳಿದೆ. ಸೌದಿ ಅರೇಬಿಯಾವು ಪೂರ್ವ ಭಾಗದಲ್ಲಿ ಒಂದೆರಡು ಗಂಟೆಗಳಲ್ಲಿ ಬಂದ 20 ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ. ಇನ್ನೊಂದೆಡೆ, ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಏರಿಕೆ ದಾಖಲಾದ ಬಳಿಕ ಷೇರು ಮಾರುಕಟ್ಟೆಯಲ್ಲಿ ಇನ್ನಷ್ಟು ಕುಸಿತ ಕಂಡಿದೆ. ಇದರ ಬೆನ್ನಲ್ಲೇ ಟ್ರಂಪ್ ಆಡಳಿತವು, ಈಗಾಗಲೇ ಹಡಗುಗಳಲ್ಲಿ ತುಂಬಿರುವ ಇರಾನ್ ತೈಲದ ಮೇಲಿನ ನಿರ್ಬಂಧಗಳನ್ನು ತೆಗೆದಿರುವುದಾಗಿ ಘೋಷಿಸಿದೆ.

ಇದರ ನಡುವೆಯೇ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು, ‘ಇಸ್ರೇಲ್ ಹೊರತುಪಡಿಸಿ ನೆರೆಹೊರೆಯ ದೇಶಗಳ ಜತೆ ನಮಗೆ ಯಾವುದೇ ವಿವಾದ ಇಲ್ಲ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಾಂಜ್ ಪರಮಾಣು ಸ್ಥಾವರಕ್ಕೆ ಹಾನಿ ಅಮೆರಿಕ ಮತ್ತು ಇಸ್ರೇಲ್ ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ನಟಾಂಜ್ ಪರಮಾಣು ಸ್ಥಾವರಕ್ಕೆ ಹಾನಿಯಾಗಿದೆ ಆದರೆ ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಎಂದು ಇರಾನ್ ತಿಳಿಸಿದೆ. ಪಶ್ಚಿಮ ಏಷ್ಯಾದಲ್ಲಿ ಸೇನಾ ಕಾರ್ಯಾಚರಣೆಗಳನ್ನು ಕಡಿಮೆಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಮರುದಿನವೇ ಈ ದಾಳಿ ನಡೆದಿದೆ. ಯುದ್ಧ ಆರಂಭದ ಮೊದಲ ವಾರದಲ್ಲಿಯೇ ನಟಾಂಜ್ ಪರಮಾಣು ಸ್ಥಾವರದ ಮೇಲೆ ದಾಳಿ ನಡೆದಿತ್ತು. ಆಗ ಕೆಲ ಕಟ್ಟಡಗಳಿಗೆ ಹಾನಿಯಾಗಿತ್ತು. ಆದರೆ ವಿಕಿರಣ ಸೋರಿಕೆ ಆಗುವ ಸಾಧ್ಯತೆಗಳು ಕಡಿಮೆ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ಹೇಳಿತ್ತು. ಇದೀಗ ನಟಾಂಜ್ ಮೇಲೆ ಎರಡನೇ ಬಾರಿ ದಾಳಿಗಳಾಗಿವೆ.

ಅಮೆರಿಕದ ‘ಎಫ್–35’ಕ್ಕೆ ಹಾನಿ ಮಾಡಿದ್ದೇವೆ: ಇರಾನ್

‘ವಿಶ್ವದ ಅತ್ಯಂತ ಮುಂದುವರಿದ ಸದ್ದಿಲ್ಲದೆ ರಹಸ್ಯವಾಗಿ ಚಲಿಸುವ ಯುದ್ಧ ವಿಮಾನಗಳಲ್ಲಿ ಒಂದಾದ ಅಮೆರಿಕದ ಎಫ್–35 ಅನ್ನು ಈ ವಾರದಲ್ಲಿ ಹೊಡೆದು ಹಾನಿಗೊಳಿಸಿದ್ದೇವೆ’ ಎಂದು ಇರಾನ್ ಹೇಳಿಕೊಂಡಿದೆ.

ಈ ಕುರಿತ ದೃಶ್ಯವನ್ನು ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ (ಐಆರ್ಜಿಸಿ) ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ಮಾರ್ಚ್ 19ರಂದು (ಗುರುವಾರ) ಬೆಳಿಗ್ಗೆ 2.50ಕ್ಕೆ ಐಆರ್ಜಿಸಿ ವಾಯು ರಕ್ಷಣಾ ವ್ಯವಸ್ಥೆಯು ಅಮೆರಿಕದ ಜೆಟ್ ಅನ್ನು ಹೊಡೆದುರುಳಿಸಿದೆ ಎಂದು ತಿಳಿಸಿದೆ.

‘ಅತ್ಯಾಧುನಿಕವಾದ ಎಫ್–35 ಅನ್ನು ಗುರಿಯಾಗಿಸಿ ದಾಳಿ ನಡೆಸಿ ಯಶಸ್ವಿಯಾಗಿರುವುದು ವಿಶ್ವದಲ್ಲಿಯೇ ಮೊದಲು. ಅದು ಇರಾನ್ ಹೆಸರಿನಲ್ಲಿ ದಾಖಲಾಗಿದೆ’ ಎಂದು ಮುಂಬೈನಲ್ಲಿರುವ ಇರಾನ್ ಕಾನ್ಸುಲೇಟ್ ಜನರಲ್ ಕಚೇರಿ ‘ಎಕ್ಸ್’ನಲ್ಲಿ ಉಲ್ಲೇಖಿಸಿದೆ.

ದೃಢಪಡಿಸದ ಅಮೆರಿಕ: ಎಫ್–35ರ ಮೇಲಿನ ಇರಾನ್ ದಾಳಿಯನ್ನು ಅಮೆರಿಕ ದೃಢಪಡಿಸಿಲ್ಲ. ಆದರೆ ಅಮೆರಿಕದ ಅತ್ಯಂತ ಮುಂದುವರಿದ ಯುದ್ಧ ವಿಮಾನಗಳಲ್ಲಿ ಒಂದು ಇರಾನ್ ಮೇಲಿನ ಯುದ್ಧ ಕಾರ್ಯಾಚರಣೆ ಬಳಿಕ ತುರ್ತು ಭೂಸ್ಪರ್ಶ ಮಾಡಿದ್ದು ಪೈಲಟ್ ಆರೋಗ್ಯ ಸ್ಥಿರವಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.

ದಾಳಿ ಖಂಡಿಸಿದ ಮೋದಿ

ಪಶ್ಚಿಮ ಏಷ್ಯಾ ಸಂಘರ್ಷವು ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಹಾಕುತ್ತಿದ್ದು ಜಾಗತಿಕ ಪೂರೈಕೆ ಸರಪಳಿಗಳಿಗೆ ಅಡ್ಡಿ ಉಂಟುಮಾಡುತ್ತಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರದೇಶದಲ್ಲಿನ ನಿರ್ಣಾಯಕ ಮೂಲ ಸೌಕರ್ಯಗಳ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರಿಗೆ ಶನಿವಾರ ದೂರವಾಣಿ ಕರೆ ಮಾಡಿ ಈದ್ ಮತ್ತು ನೌರುಜ್ ಹಬ್ಬದ ಶುಭಾಶಯಗಳನ್ನು ತಿಳಿಸಿದ ಮೋದಿ ಅವರು ‘ಈ ಹಬ್ಬದ ಋತುವು ಪಶ್ಚಿಮ ಏಷ್ಯಾಕ್ಕೆ ಶಾಂತಿ ಸ್ಥಿರತೆ ಮತ್ತು ಸಮೃದ್ಧಿ ತರಲಿದೆ’ ಎಂದು ಆಶಿಸಿದ್ದಾರೆ.

ನೌಕಾಯಾನದ ಸ್ವಾತಂತ್ರ್ಯವನ್ನು ಕಾಪಾಡುವ ಹಡಗು ಮಾರ್ಗಗಳನ್ನು ಮುಕ್ತ ಮತ್ತು ಸುರಕ್ಷಿತವಾಗಿ ಇರಿಸುವುದನ್ನು ಖಚಿಪಡಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾಗಿ ಮೋದಿ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.