ಟೆಲ್ ಅವೀವ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಅಪಾಯಕಾರಿ ಹಂತಕ್ಕೆ ತಲುಪುವ ಎಲ್ಲ ಸೂಚನೆ ಬರುತ್ತಿದ್ದು, ಇಸ್ರೇಲ್ನ ಪರಮಾಣು ಕೇಂದ್ರದ ಸಮೀಪವಿರುವ ಡಿಮೋನಾ ನಗರದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.

ಇಸ್ರೇಲ್ ವಾಯು ರಕ್ಷಣಾ ವ್ಯವಸ್ಥೆಯನ್ನು ಮೀರಿ ನುಗ್ಗಿರುವ ಕ್ಷಿಪಣಿಗಳು ಪರಮಾಣು ಕೇಂದ್ರದಿಂದ ಸ್ವಲ್ಪ ದೂರದಲ್ಲೇ ಅಪ್ಪಳಿಸಿವೆ. ಈ ಸಂದರ್ಭ ಭಾರಿ ಪ್ರಮಾಣದ ಬೆಂಕಿ ಉಂಡೆಗಳು ಆವರಿಸಿರುವುದು ಕಂಡುಬಂದಿದೆ. ಬ್ರಿಕ್ಸ್ ನ್ಯೂಸಗ ಎಕ್ಸ್ ಪೋಸ್ಟ್ನಲ್ಲಿ ವಿಡಿಯೊಗಳನ್ನು ಹಂಚಿಕೊಳ್ಳಲಾಗಿದೆ.

ಡಿಮೋನಾ ಪಟ್ಟಣವು ಇಸ್ರೇಲ್ ಪರಮಾಣು ಸಂಶೋಧನಾ ಕೇಂದ್ರದಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ಇಸ್ರೇಲ್ ಮೇಲೆ ಇರಾನ್ ಇದೇ ಮೊದಲ ಬಾರಿಗೆ ದೀರ್ಘ ಶ್ರೇಣಿಯ ಖಂಡಾಂತರ ಕ್ಷಿಪಣಿ ಉಡಾಯಿಸಿದೆ. ಶುಕ್ರವಾರ ಹಿಂದೂಮಹಾಸಾಗರದ ದ್ವೀಪದಲ್ಲೂ ಅಮೆರಿಕ–ಬ್ರಿಟನ್ ಮಿಲಿಟರಿ ನೆಲೆ ಮೇಲೆ 4,000 ಕಿ.ಮೀ ದೀರ್ಘ ಶ್ರೇಣಿಯ ಕ್ಷಿಪಣಿ ಉಡಾಯಿಸಿತ್ತು. ಈ ದೈತ್ಯ ಕ್ಷಿಪಣಿಗಳ ಅಬ್ಬರ ಯುದ್ಧವು ಪಶ್ಚಿಮ ಏಷ್ಯಾದ ಹೊರಭಾಗಕ್ಕೂ ವ್ಯಾಪಿಸುವ ಸೂಚನೆ ಕೊಟ್ಟಿದೆ ಎಂದು ವರದಿ ತಿಳಿಸಿದೆ. ಅಲ್ಲದೆ, ಇರಾನ್ನ ಗೋಪ್ಯ ಸಾಮರ್ಥ್ಯದ ಪರಿಚಯ ಮಾಡುತ್ತಿದೆ ಎಂದು ಹೇಳಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊಗಳು ಭಯಹುಟ್ಟಿಸುವಂತಿದ್ದು, ಇರಾನ್ ಕ್ಷಿಪಣಿಯ ಹೊಡೆತಕ್ಕೆ ಡಮೋನ್ ನಗರದಲ್ಲಿ ವ್ಯಾಪಕ ಬೆಂಕಿ ಆವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.